ಕೊರೋನಾ ರೂಲ್ಸ್ ಕೇಳೋರಿಲ್ಲ.. ಮದ್ದು ಗುಂಡಿನ ಹಾವಳಿ ಎಂದ ಕಾರಣಿಕ!
* ಕೊವಿಡ್ ಮೂರನೆ ಅಲೆ ಭೀತಿಯಲ್ಲೂ ಎಗ್ಗಿಲ್ಲದೇ ನಡೆದ ಕಾರಣಿಕ ಜಾತ್ರೆ
* ದಾವಣಗೆರೆ ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿಯ ಈ ವರ್ಷದ ಕಾರ್ಣಿಕ ಮಹೋತ್ಸವ
* ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಜಾತ್ರೆ
* ಸಾವಿರಾರು ಜನರ ಮಧ್ಯೆ ಭವಿಷ್ಯ
ದಾವಣಗೆರೆ (ಆ.30) ಕೊವಿಡ್ ಮೂರನೆ ಅಲೆ ಭೀತಿ ಇದ್ದರೂ ಕಾರಣಿಕ ಜಾತ್ರೆ ನಡೆದಿದೆ ದಾವಣಗೆರೆ ಆನೆಕೊಂಡ ಶ್ರೀ ಬಸವೇಶ್ವರ ಸ್ವಾಮಿಯ ಈ ವರ್ಷದ ಕಾರ್ಣಿಕ ಮಹೋತ್ಸವದಲ್ಲಿ ಜನವೋ ಜನ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಜಾತ್ರೆಯಲ್ಲಿ ಕೊರೋನಾ ನಿಯಮಕ್ಕೆ ಕಿಮ್ಮತ್ತು ಇರಲಿಲ್ಲ.
ಕೇರಳದಿಂದ ಆಗಮಿಸುವವರಿಗೆ ಸರ್ಕಾರದ ಮಾರ್ಗಸೂಚಿ
ಸಾವಿರಾರು ಜನರ ಮಧ್ಯೆದಲ್ಲಿ ಕಾರ್ಣಿಕ ಭವಿಷ್ಯ ನುಡಿದಿದೆ. ರಾಮ ರಾಮ ಎಂದು ನುಡಿದತ್ತಲೇ...ಮುತ್ತೈದೆ ತಾಯಿ ಹಾಲಿನ ಆರತಿ ತೆಗೆದ್ಯಾಳಲೆ.. ನರ ಲೋಕದ ಜನ ವಜ್ರದ ಕಿರೀಟ ಆನೆಗೆ ಹಾಕಿದ್ಯಾರಲೆ ... ಮದ್ದುಗುಂಡಿನ ಹಾವಳಿ ಹೆಚ್ಚಾದಿತಲೆ ಎಚ್ಚರ.. ಎಂದಿದೆ.
ಕೋವಿಡ್ ಲೆಕ್ಕಿಸದೇ ಜಾತ್ರೆಯಲ್ಲಿ ಜನರು ಪಾಲ್ಗೊಂಡಿದ್ದರು. ದಾವಣಗೆರೆ ಜಿಲ್ಲಾಡಳಿತ ಮಾತ್ರ ಯಾವ ಕ್ರಮ ತೆಗೆದುಕೊಳ್ಳಲಿಲ್ಲ ಮಾಸ್ಕ್, ಸಾಮಾಜಿಕ ಅಂತರವಿಲ್ಲದ್ದೇ ಜಾತ್ರೆ ನಡೆಯಿತು.