ಬ್ಯಾಡಗಿ(ಮೇ.02): ಅನಾರೋಗ್ಯದಿಂದ ಬಳಲುತ್ತಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಸಿಆರ್‌ಪಿಎಫ್‌ ಯೋಧ ಸುರೇಶ ಉಡಚಪ್ಪ ಹಾವನೂರ (43) ತ್ರಿಪುರಾದ ಗಡಿಯಲ್ಲಿ ನಾಲ್ಕು ದಿನದ ಹಿಂದೇ ಮೃತಪಟ್ಟಿದ್ದು ಶನಿವಾರ(ಇಂದು) ಪಾರ್ಥಿವ ಶರೀರ ತವರಿಗೆ ಬರಸಲಿದೆ.

ಮೃತ ಯೋಧ ಸುರೇಶ ಉಡಚಪ್ಪ ಹಾವನೂರ ಅವರು ಸಿಆರ್‌ಪಿಎಫ್‌ನ 71ನೇ ಬಟಾಲಿಯನ್‌ಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 20 ವರ್ಷಗಳ ಹಿಂದೆಯೇ ಸಿಆರ್‌ಪಿಎಫ್‌ಗೆ ಸೇರಿಕೊಂಡಿದ್ದಾಗಿ ತಿಳಿದು ಬಂದಿದೆ. 

ನಕಲಿ ಬೀಜ ಮಾರಾಟ ಹಗರಣ: ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ, ಸಚಿವ ಪಾಟೀಲ

ಇಂದು(ಶನಿವಾರ) ಮೋಟೆಬೆನ್ನೂರಿಗೆ ಪಾರ್ಥಿವ ಶರೀರ ಆಗಮಿಸಲಿದ್ದು ಸರ್ಕಾರಿ ಗೌರವದೊಂದಿಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಮೃತ ಯೋಧನನಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ.