ಬೆಂಗಳೂರು/ಹಾಸನ [ಡಿ.14]: ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಯುವ ರೈತನೋರ್ವ ಮೃತಪಟ್ಟಿದ್ದು ಸಾವಿನಲ್ಲೂ  ಸಾರ್ಥಕತೆ ಮೆರೆದಿದ್ದಾರೆ. 

ಗೊರಗುಂಟೆ ಪಾಳ್ಯದ ಸ್ಪರ್ಷ ಆಸ್ಪತ್ರೆಯಲ್ಲಿ ಯುವ ರೈತ ವಿಕಾಸ್ ನಿಧನರಾಗಿದ್ದು, ಅಂಗಾಂಗ ದಾನ ಮಾಡಿದ್ದಾರೆ. ಕಳೆದ 8 ದಿನಗಳಿಂದ ಕೋಮಾದಲ್ಲಿದ್ದ ರೈತ ವಿಕಾಸ್ ಅವರ ಅಂಗಾಂಗ ದಾನದಿಂದ 8 ಜನರ ಬದುಕಿಗೆ ಬೆಳಕಾಗಿದ್ದಾರೆ. 

ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಳ್ಳಿ ಮೂಲದ ಪುಟ್ಟಸ್ವಾಮಿ ಗೌಡ ಹಾಗೂ ದಿ.ಶಶಿಕಲಾ ದಂಪತಿಯ ಪುತ್ರ ವಿಕಾಸ್ ಅವರು ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬಿಜಿಎಸ್  ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ವಿಕಾಸ್ ಅವರ ಅಂಗಾಂಗ ರವಾನೆ ಮಾಡಲಾಗಿದೆ. 

ರೈತಾಪಿ ವರ್ಗಕ್ಕೆ ಸಂತಸದ ಸುದ್ದಿ: ಬೆಳೆ ಹಾನಿ ಪರಿಹಾರ ಜಮಾ...

ಸ್ಪರ್ಷ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ,'ಜೀವ ಸಾರ್ಥಕತೆ'  ಯೋಜನೆಗೆ ದಾನ ಮಾಡಿದ್ದಾರೆ. 

ಈ ಹಿಂದೆಯೂ ಕೂಡ ಈ ರೀತಿಯ ಹೃದಯ ಸೇರಿದಂತೆ ಅಂಗಾಂಗ ದಾನ ಪ್ರಕ್ರಿಯೆಗಳು ನಡೆದು ಹಲವರ ಬದುಕಿಗೆ ಬೆಳಕಾಗಿದ್ದ ಉದಾಹರಣೆಗಳಿದ್ದು ಇದೀಘ ಯುವ ರೈತನ ಸಾವು ಅಂಗಾಂಗ ದಾನದ ಮೂಲಕ ಸಾರ್ಥಕವಾಗಿದೆ.