ಹಾಸನ [ಜ.02]: ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಹಾಸನ ಹಾಲು ಒಕ್ಕೂಟವು ಹೊಸ ವರ್ಷದ ಸಂಭ್ರಮದ ವೇಳೆ ಸಿಹಿ ಸುದ್ದಿ ನೀಡಿದ್ದು, ಹಾಲಿ ಖರೀದಿ ದರವನ್ನು ಪ್ರತಿ ಕೆ.ಜಿ.ಗೆ ಒಂದೂವರೆ ರುಪಾಯಿ ಹೆಚ್ಚಿಸಿದೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಕೆ.ಜಿ.ಗೆ ಹಾಲಿಗೆ 1.50 ರು. ಹೆಚ್ಚಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಂಪರ್ ಘೋಷಣೆ...

ಇದರಿಂದ ಈಗ ಪ್ರತಿ ಕೆ.ಜಿ. ಹಾಲಿನ ದರ 29 ರು. ಆಗಲಿದ್ದು, ಇದು ರಾಜ್ಯದಲ್ಲೇ ಗರಿಷ್ಠ ದರವಾಗಲಿದೆ ಎಂದರು. ಹಾಲು ಒಕ್ಕೂಟವು ಪ್ರಸಕ್ತ ಸಾಲಿನಲ್ಲಿ 40 ಕೋಟಿ ರು. ಲಾಭ ಗಳಿಸಿದ್ದು, ಅದರಲ್ಲಿ ರೈತರಿಗೆ 25 ಕೋಟಿ ರು. ವಾಪಸ್‌ ನೀಡಲಾಗುವುದು. ದರ ಹೆಚ್ಚಳ ಮೂಲಕ ಮರಳಿ ನೀಡಲಾಗುತ್ತಿದೆ ಎಂದು ಎಚ್.ಡಿ.ರೇವಣ್ಣ ಹೇಳಿದರು.