Asianet Suvarna News Asianet Suvarna News

ನಗರದೊಳಗೆ ಹಂದಿ ಸಾಕುವಂತಿಲ್ಲ : ತಕ್ಷಣ ಸ್ಥಳಾಂತರಕ್ಕೆ ಖಡಕ್ ಸೂಚನೆ

  • ಹಾಸನ ನಗರಸಭೆ ವ್ಯಾಪ್ತಿಯಲ್ಲಿ  ಹಂದಿಗಳ ಸ್ಥಳಾಂತರ ಸೂಚನೆ
  • ಆಗಸ್ಟ್ 30ರ ಒಳಗೆ ಹಂದಿಗಳ ಸ್ಥಳಾಂತರ ಮಾಡಲು ಸೂಚನೆ 
Hassan Municipality order To relocate pigs to out of  city  snr
Author
Bengaluru, First Published Aug 25, 2021, 3:18 PM IST

ಹಾಸನ (ಆ.25): ಹಾಸನ ನಗರಸಭೆ ವ್ಯಾಪ್ತಿಯ  ಹಂದಿ ಸಾಕಣೆದಾರರು ಮತ್ತು ಮಾಲೀಕರು ನಗರದ ಬಲಭಾಗದಲ್ಲಿ ಹಂದಿ ಸಾಕಾಣಿಕೆ ಮಾಡುವುದನ್ನು ನಿಷೇಧಿಸಲಾಗಿದ್ದು ನಗರದ ಒಳ ಭಾಗದಲ್ಲಿರುವ ಎಲ್ಲಾ ಹಂದಿಗಳನ್ನು ಕಡ್ಡಾಯವಾಗಿ ಹೊರ ಭಾಗಕ್ಕೆ ಸಾಗಿಸಬೇಕೆಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. 

ಹಂದಿ ಸಾಕಾಣಿಕೆದಾರರು ಮಾಲೀಕರು ನಗರದ ಹೃದಯ ಭಾಗದಲ್ಲಿಯೇ ಸಾಕಾಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು ಇದರಿಂದ ಹಂದಿಗಳು ನಗರದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಬಗ್ಗೆ  ಸಾರ್ವಜನಿಕರು ಹಾಗು ಜನ ಪ್ರತಿನಿಧಿಗಳು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ. 

ಬೆಳೆ ನಾಶ ಮಾಡೋ ಕಾಡುಹಂದಿ ಬೇಟೆಗೆ ಹೈಕೋರ್ಟ್ ಅನುಮತಿ

ಸಾರ್ವಜನಿಕ ಆರೋಗ್ಯ ಮತ್ತು ನಗರದ ಸೌಹಾರ್ದಯುತ ಹಿತ ದೃಷ್ಟಿಯಿಂದ ಆ.31ರೊಳಗಾಗಿ ನಗರದಲ್ಲಿ ಓಡಾಡುವ ಎಲ್ಲಾ ಹಂದಿಗಳನ್ನು ಅವುಗಳ ಮಾಲೀಕರು ತಮ್ಮ ಸುಪರ್ದಿಗೆ ಪಡೆಯಬೇಕು. ಇಲ್ಲವಾದಲ್ಲಿ ಪುರಸಭಾ ಕಾಯ್ದೆ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios