ಕಾಫಿ ಕುಡಿಯುತ್ತಿದ್ದ ವೇಳೆ ಹೃದಯಾಘಾತ: ಕಂಡಕ್ಟರ್ ನಿಧನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Jul 2018, 2:36 PM IST
Hassan-Kolar Duty-Bound KSRTC Conductor Dies Of Heart Attack
Highlights

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ವಾಹಕರೊಬ್ಬರು ಮಾರ್ಗ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಧರ್ಮಸ್ಥಳ-ಕೋಲಾರ ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಬೇಲೂರು ನಿಲ್ದಾಣದಲ್ಲಿ ಕಾಫಿ ಕುಡಿಯಲು ತೆರಳಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಹಾಸನ(ಜು.18) ಧರ್ಮಸ್ಥಳದಿಂದ ಕೋಲಾರಕ್ಕೆ ಬೇಲೂರು ಮಾರ್ಗವಾಗಿ ತೆರಳುವ ಸಂದರ್ಭ ಬೇಲೂರು ಬಸ್ ನಿಲ್ದಾಣದಲ್ಲಿ ಕಾಫಿಗೆ ತೆರಳಿದಾಗ ನಿರ್ವಾಹಕ ಆದಿನಾರಾಯಣ( 46) ಕುಸಿದುಬಿದ್ದಿದ್ದಾರೆ.

ಹೃದಯಾಘಾತಕ್ಕೆ ಒಳಗಾದ ನಿರ್ವಾಹಕರನ್ನು ತಕ್ಷಣ ಬೇಲೂರು ಸರ್ಕಾರಿ ಆಸ್ಪತ್ರೆಯಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆ ಸೇರಿಸುವ ಮುನ್ನವೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಬೇಲೂರು ಆಸ್ಪತ್ರೆಗೆ ಚಿಕ್ಕಮಗಳೂರು ವಿಭಾಗಿಯ ನಿಯಂತ್ರಣ ಅಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಆದಿನಾರಾಯಣ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಕೋಲಾರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ.

loader