ಹಾಸನ[ಜ.07]: ಕ್ಷುಲ್ಲಕ ಕಾರಣಕ್ಕೆ ಪಾಪಿಯೊಬ್ಬ 8 ವರ್ಷದ ಬಾಲಕಿಯ ಬಾಯಿಗೆ ಬರೆ ಹಾಕಿದ ಅಮಾನವೀಯ ಘಟನೆ ಹಾಸನದಲ್ಲಿ ನಡೆದಿದೆ.

ಜನವರಿ 5 ರಂದು ಈ ಘಟನೆ ನಡೆದಿದ್ದು, ಇಲ್ಲಿನ ಸಕಲೇಶಪುರದ ಬಾಳ್ಳುಪೇಟೆಯ ನಿವಾಸಿ ಜಯಕುಮಾರ್ ಎಂಬಾತ ಈ ಕುಕೃತ್ಯ ಎಸಗಿದ್ದಾನೆ. ತನ್ನ ನೆರೆ ಮನೆಯ ಭುವನೇಶ್ವರಿ, 8 ವರ್ಷದ ಬಾಲಕಿ ಮನೆ ಮುಂದೆ ಬೆಳೆದಿದ್ದ ಹೂ ಕಿತ್ತಿದ್ದಕ್ಕೆ ಆಕೆಯ ಮುಖ ಮತ್ತು ತುಟಿ ಮೇಲೆ ಬರೆ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.  

ಸದ್ಯ ಬಾಲಕಿ ಪೋಷಕರಿಂದ ಸಕಲೇಶಪುರ  ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಈ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು,  ಕೇವಲ ಮುಚ್ಚಳಿಕೆ ಬರೆಸಿಕೊಂಡು ಆರೋಪಿಯನ್ನು  ಮನೆಗೆ ಕಳುಹಿಸಿದ್ದಾರೆ.