ಭ್ರಷ್ಟ ಅಧಿಕಾರಿಗಳ ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ಸಮರ ಮುಂದುವರಿಸಿದ್ದಾರೆ.  ಅಕ್ರಮ ಬಗರ್ ಹುಕುಂ ಸಾಗುವಳಿ ಮಂಜೂರಾತಿಗೆ ಸಹಕರಿಸಿದ ಆರೋಪ ಹೊಂದಿರುವ ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದಾರೆ.

ಹಾಸನ[ಜು.26]  ಜುಲೈ 4 ರಂದು ಅರಕಲಗೂಡು ತಹಸೀಲ್ದಾರ್ ಪ್ರಸನ್ನಮೂರ್ತಿ ವಿರುದ್ಧ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಸಿಂಧೂರಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವಾಗ ಸಚಿವರಿಂದ ಬಗರ್ ಹುಕುಂ ಸಾಗುವಳಿ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಅಂದು ಸಚಿವರಾಗಿದ್ದ ಎ.ಮಂಜು ಅವರಿಗೆ ಸಹಕಾರ ನೀಡಲು ಸಭೆ ನಡೆಸದೆಯೇ ಸಾವಿರಕ್ಕೂ ಅಧಿಕ ಕಡತಕ್ಕೆ ಸಹಿ ಮಾಡಿದ್ದಾರೆ. ಹಾಗಾಗಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದಿದ್ದಾರೆ. ಈ ಪ್ರಕರಣ ಮಾಜಿ ಸಚಿವ ಎ. ಮಂಜುಗೆ ಸುತ್ತಿಕೊಳ್ಳುವ ಸಾಧ್ಯತೆಯೂ ಇದೆ.

ಸರಕಾರ ವರ್ಸಸ್ ರೋಹಿಣಿ ಸಿಂಧೂರಿ

ವಾರದ ಹಿಂದೆಯಷ್ಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೌಕರನನ್ನ ಅಮಾನತುಮಾಡಿ ಓರ್ವ ಅಧಿಕಾರಿ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದರು. ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸುತ್ತಿರುವ ರೋಹಿಣಿ ಅವರನ್ನು ವರ್ಗಾವಣೆ ಮಾಡಿ ಸರಕಾರವೇ ಇಕ್ಕಟ್ಟಿಗೆ ಸಿಲುಕಿತ್ತು.