Hassan: 400 ಹೋತ ಬಲಿಕೊಟ್ಟು ದೇವಿಗೆ ಹರಕೆ ತೀರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ

*  ಹರಕೆ ತೀರಿಸುವ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಅಲಂಕಾರ 
*  ಕುಟುಂಬ ಸಮೇತರಾಗಿ ಆಗಮಿಸಿದ್ದ ಸಂಕಲ್ಪ ಮಾಡಿಕೊಂಡಿದ್ದ ಶಾಸಕರು
*  ಪೂಜೆ ಸಲ್ಲಿಸಿ ಹೋತವನ್ನು ಹರಕೆಯಾಗಿ ನೀಡಿದ ಪ್ರೀತಂಗೌಡ
 

Hassan BJP MLA Preetham Gowda Sacrificed 400 Goats to Devi grg

ಹಾಸನ(ಏ.07):  ಶಾಸಕ ಪ್ರೀತಂ ಜೆ.ಗೌಡ(Preetham Gowda) ಅವರು ಬುಧವಾರ ಹಾಸನದ ಶಕ್ತಿ ದೇವತೆ ಪುರದಮ್ಮನಿಗೆ ಮೇಕೆ(Goat) ಬಲಿ ಕೊಟ್ಟು ಹರಕೆ ತೀರಿಸಿದ್ದಾರೆ. ಉದ್ದೂರು ರಿಂಗ್‌ ರಸ್ತೆ ಬಳಿ ಸಾವಿರಾರು ಜನರಿಗೆ ಬಾಡೂಟದ ಔತಣವನ್ನೂ ಏರ್ಪಡಿಸಿದ್ದರು. 

ಹರಕೆ ತೀರಿಸುವ ಹಿನ್ನೆಲೆಯಲ್ಲಿ ದೇವಿಗೆ(Puradamma Devi) ವಿಶೇಷ ಅಲಂಕಾರ ಮಾಡಲಾಗಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ್ದ ಶಾಸಕರು, ತಾವು ಈ ಹಿಂದೆ ಸಂಕಲ್ಪ ಮಾಡಿಕೊಂಡಂತೆ ಪೂಜೆ ಸಲ್ಲಿಸಿ ಹೋತವನ್ನು ಹರಕೆಯಾಗಿ ನೀಡಿದರು. ನಂತರ 400 ಹೋತಗಳನ್ನು ಬಲಿ ಕೊಡಲಾಯಿತು. 

Karnataka Politics: ಹಾಸನಕ್ಕೆ ನಾನೇ ಸಿಎಂ,  ಡಿಕೆಶಿ ದೊಡ್ಡ ಲೀಡರ್!

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು ಈ ಹಿಂದೆ ಕ್ಷೇತ್ರದ ಜನರ ಹಿತದೃಷ್ಟಿಯಿಂದ ದೇವಿಯಲ್ಲಿ ಹರಕೆ ಹೊತ್ತಿದ್ದೆ. ಇದೀಗ ಪುರದಮ್ಮನ ಕೃಪೆಯಿಂದ ಅಂದುಕೊಂಡತೆ ಒಳ್ಳೆಯದೇ ಆಗುತ್ತಿದೆ. ಹಾಗಾಗಿ ಬಂದು ಹರಕೆ ತೀರಿಸಿದ್ದೇನೆ ಎಂದರು. ತಾಯಿ ಏನು ಕೇಳಿದರೂ ಇಲ್ಲ ಎಂದಿಲ್ಲ. ಹಳೆಯ ಹರಕೆಯನ್ನು ಪೂರೈಸಿದ್ದೇನೆ. ಹೊಸದನ್ನು ಕೊಟ್ಟರೆ ಮತ್ತೊಮ್ಮೆ ಪ್ರಸಾದ ಕೊಡುತ್ತೇನೆ. ದೇವರ(God) ಸೇವೆ ಮಾಡುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.

ಶಾಸಕರ ವೈಫಲ್ಯದಿಂದ ಬಜೆಟ್‌ನಲ್ಲಿ ಹಾಸನಕ್ಕೆ ಶೂನ್ಯ

ಹಾಸನ(Hassan) ಜಿಲ್ಲೆಯ ಸ್ವಯಂ ಘೋಷಿತ ಸಿಎಂ ಆಗಿರುವ ಪ್ರೀತಂಗೌಡರ ವೈಫಲ್ಯದಿಂದ ಹಾಸನ ವಿಧಾನಸಭಾ ಕ್ಷೇತ್ರಕ್ಕೆ 2022-23ನೇ ಸಾಲಿನ ರಾಜ್ಯ ಬಜೆಟ್‌ನ ಅನುದಾನದಲ್ಲಿ ಶೂನ್ಯ ಫಲ ದೊರೆತಿದೆ ಎಂದು ಜೆಡಿಎಸ್‌ ಮುಖಂಡರಾದ ಟಿ.ಆರ್‌. ಪ್ರಸಾದ್‌ ಗೌಡ(TR Prasad Gowda) ಆರೋಪಿಸಿದ್ದರು. 

ಫೆ.6 ರಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಾರ್ಚ್‌ 4ರಂದು ಮಂಡಿಸಿರುವ 2022-23ನೇ ಸಾಲಿನ ಆಯವ್ಯಯ ರಾಜ್ಯದ ಜನರ ನಿರೀಕ್ಷೆಗಳನ್ನು ಹುಸಿ ಮಾಡಿದ್ದು, ಇದು ಅಭಿವೃದ್ಧಿ ದೃಷ್ಟಿಯಿಂದ ಪೂರಕವಾಗಿಲ್ಲದ ಬಜೆಟ್‌ ಆಗಿದೆ. 14699 ಕೋಟಿ ರು.ಹಣಕಾಸು ಕೊರತೆಯ ರು. 265702 ಕೋಟಿ ಮೊತ್ತದ ರಾಜ್ಯ ಬಜೆಟ್ಟನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ. ಈ ಬಜೆಟ್‌ನ ಸಾಲದ ಪ್ರಮಾಣ ಶೇ. 27.09 ಅಂದರೆ ರು. 72 ಸಾವಿರ ಕೋಟಿ, ಹೊಸದಾಗಿ ಸಾಲ ಮಾಡಲಾಗುತ್ತಿದ್ದು, ಈ ಸಾಲದ ಹೊರೆ ನಾಗರಿಕರ ಮೇಲೆ ಬೀಳಲಿದೆ. ರಾಜ್ಯದ ನ್ಯಾಯಯುತ ಪಾಲಾದ ರು. 18 ಸಾವಿರ ಕೋಟಿ ಹಣವನ್ನು ತನ್ನದೇ ಕೇಂದ್ರ ಬಿಜೆಪಿ ಸರ್ಕಾರ ಪಡೆಯುವ ಬದಲು ಅದನ್ನೂ ಸಾಲದ ರೂಪದಲ್ಲಿ ಪಡೆಯುತ್ತಿರುವುದು ರಾಜ್ಯ ಬಿಜೆಪಿ ಸರ್ಕಾರದ(BJP Government) ವೈಫಲ್ಯಕ್ಕೆ ಉದಾಹರಣೆಯಾಗಿರುವ ಬಜೆಟ್‌ ಆಗಿದೆ ಎನ್ನಬಹುದು ಎಂದರು.

Legislative Council; 'ನಿಂಬೆಹಣ್ಣನ್ನು ನಿಂಬೆ ಹಣ್ಣಿನಿಂದಲೇ ತೆಗೆಯಬೇಕು' ಪ್ರೀತಂ ಪಾಠ!

ರೈತರ(Farmers) ಆದಾಯವನ್ನು ಹೆಚ್ಚು ಮಾಡಲು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ ಮತ್ತು ನ್ಯಾಯಯುತ ಮಾರುಕಟ್ಟೆಒದಗಿಸುವ ಪ್ರಸ್ತಾಪವೇ ಇಲ್ಲ. ಜೊತೆಗೆ ರೈತರನ್ನು ಋುಣ ಮುಕ್ತರನ್ನಾಗಿಸಿ ಅವರಿಗೆ ಬಡ್ಡಿ ರಹಿತ ಸಾಲ ಮತ್ತು ಕೃಷಿ ಸಾಗುವಳಿಗೆ ಯಾವುದೇ ರಿಯಾಯಿತಿಗಳ ಘೋಷಣೆಯಿಲ್ಲ. ಶಿಕ್ಷಣ, ಆಹಾರ, ಆರೋಗ್ಯ, ವಸತಿ, ಉದ್ಯೋಗ, ಕುಡಿಯುವ ನೀರು ಮೊದಲಾದ ಅತ್ಯಂತ ಆದ್ಯತೆಯ ಕ್ಷೇತ್ರಗಳನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ದೂರಿದರು. ಈ ಬಾರಿಯ ಬಜೆಟ್‌ನಲ್ಲಿ ಹಾಸನ ಕ್ಷೇತ್ರಕ್ಕೆ ಯಾವುದೇ ಅನುದಾನ ಮೀಸಲಿಟ್ಟದಿರುವುದು ದುರಾದೃಷ್ಟಕರ. ಇದಕ್ಕೆ ಶಾಸಕ ಪ್ರೀತಮ್‌ಗೌಡ ಅವರ ವೈಫಲ್ಯ ಕಾರಣವಾಗಿದೆ. ಹಾಸನ ಜಿಲ್ಲೆಗೆ ನಾನೇ ಸ್ವಯಂ ಘೋಷಿತ ಸಿಎಂ ಎಂದು ಹೇಳಿಕೊಳ್ಳುವ ಪ್ರೀತಮ್‌ಗೌಡ ಅವರು, ತಮ್ಮದೆ ಸರ್ಕಾರದ ಗಮನ ಸೆಳೆಯಲು ವಿಫಲವಾಗಿರುವುದರಿಂದ ಜಿಲ್ಲೆಗೆ ಈ ಬಾರಿಯ ಬಜೆಟ್‌ ನಿರಾಸೆ ಉಂಟು ಮಾಡಿದೆ ಎನ್ನಬಹುದು. ಇವರು ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಎಷ್ಟುಕೋಟಿ ಅನುದಾನ ಮೀಸಲಿರಿಸಿದರು ಎಂಬುವುದು ನಮ್ಮ ಪ್ರಶ್ನೆಯಾಗಿದೆ. ಹಾಸನ - ಬೇಲೂರು - ಚಿಕ್ಕಮಗಳೂರು ರೈಲು, ಬೇಲೂರು - ಹಳೇಬೀಡು ಹಾಸನ ಪ್ರವಾಸಿ ಕಾರಿಡಾರ್‌ ಮತ್ತು ವಿಶ್ವವಿದ್ಯಾನಿಲಯದ ಯೋಜನೆಗಳ ಪ್ರಸ್ತಾಪಗಳು ಇರುವುದೇ ಜಿಲ್ಲೆಯ ಜನರಿಗೆ ಸಮಾಧಾನಕರ ಅಂಶಗಳಾಗಿವೆ. ಇದು ಆಯಾ ಕ್ಷೇತ್ರದ ಶಾಸಕರ ಶ್ರಮವಾಗಿದೆ ಎಂಬುವುದನ್ನು ಜನತೆ ಭಾವಿಸಿಕೊಳ್ಳಬೇಕು. ಇನ್ನು ಶಾಸಕ ಪ್ರೀತಮ್‌ಗೌಡ ಅವರು ಶಾಸಕರಾದ ಹೊಸದರಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಜಿಲ್ಲೆಯ ಯುವಕರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು, ಅದು ಇದುವರೆಗೂ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದರು. 

ಬಜೆಟ್‌ನಲ್ಲಿ(Budget) ಹಾಸನ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ಯಾವುದೇ ಅನುದಾನ ಮೀಸಲಿಟ್ಟಿದಿರುವುದು ಶಾಸಕರ ಪೊಳ್ಳು ಭರವಸೆಯನ್ನು ಸಾಕ್ಷಿಕರಿಸಿದಂತಾಗಿದೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ತಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಇದು ನನ್ನ ಸಾಧನೆ ಎಂದು ಬಿಂಬಿಸಿಕೊಳ್ಳುವ ಶಾಸಕರ ನಡೆ ಖಂಡನೀಯವಾಗಿದೆ ಎಂದು ಕಿಡಿಕಾರಿದರು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಸ್ತೆಗಳ ಅಭಿವೃದ್ಧಿ ಚುರುಕುಗೊಂಡಿದ್ದು, ಗುಣಮಟ್ಟಇಲ್ಲದೆ ಈಗಾಗಲೇ ಕೆಲವು ಕಡೆಗಳಲ್ಲಿ ಆ ರಸ್ತೆಗಳೂ ಕಿತ್ತುಹೋಗುತ್ತಿವೆ.ರಸ್ತೆಗಳ ಗುಣಮಟ್ಟಕ್ಕೆ ಆದ್ಯತೆ ನೀಡದೆ ಪರಿಶೀಲನೆಯನ್ನೂ ಮಾಡದೆ ಶಾಸಕರು ಗುತ್ತಿಗೆದಾರರ ಪರ ನಿಂತಿರುವುದು ಪರ್ಸೆಂಟೇಜ್‌ಗೆ ಎಂಬುವುದು ನಮ್ಮ ಗಂಭೀರ ಆರೋಪವಾಗಿದೆ. ಫುಡ್‌ಕೋರ್ಟ್‌ ಮಾಡಿರುವುದು ಕೇವಲ ಪ್ರಚಾರಕ್ಕೆ ಎಂಬುವುದಕ್ಕೆ ಅವರು ಅಲ್ಲಿ ಹಾಕಿರುವ ಫ್ಲೆಕ್ಸ್‌ ಫೋಟೋಗಳೇ ಸಾಕ್ಷಿಯಾಗಿದೆ. ಜಿಲ್ಲೆ ಅಭಿವೃದ್ಧಿ ಮಾಡಿರುವ ಜಿಲ್ಲೆಯ ಹಿರಿಯ ನಾಯಕರ ಬಗ್ಗೆ ಟೀಕೆ ಟಿಪ್ಪಣಿ ಮಾಡಿದರೆ ನಾನು ದೊಡ್ಡ ರಾಜಕಾರಣಿಯಾಗುತ್ತೇನೆ ಎಂಬ ಮನಸ್ಥಿತಿಯ ಶಾಸಕರ ನಡೆ ಏನೆಂಬುವುದು ಈಗಾಗಲೇ ಕ್ಷೇತ್ರದ ಜನರಿಗೆ ಅರ್ಥವಾಗಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡರಾದ ಬಸವರಾಜು, ಕಾಂತರಾಜು, ನಾಗರಾಜು, ಜಗದೀಶ್‌, ವೆಂಕಟೇಶ್‌, ಗಿರೀಶ್‌ ಇತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios