ಹಾಸನಾಂಬ ದರ್ಶನಕ್ಕೆ ನಾಳೆ ತೆರೆ: ಮಧ್ಯಾಹ್ನ 12 ಗಂಟೆಗೆ ದೇಗುಲದ ಬಾಗಿಲು ಬಂದ್!

ಬೇರೆ ಭಾಗಗಳಿಂದ ದೇವಿ ದರ್ಶನಕ್ಕೆ ಬಾರದಂತೆ ಭಕ್ತರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ. ದೇಗುಲ ಒಳಭಾಗದಲ್ಲಿ ಸ್ವಚ್ಚತೆ, ಸಿಂಗಾರ, ಪೂಜಾ ಕೈಂಕರ್ಯಗಳು ನಡೆಯುತ್ತಿವೆ. 
 

Hasanamba Temple will be Close on November 3rd grg

ಹಾಸನ(ನ.02):  ಹಾಸನಾಂಬ ದರ್ಶನೋತ್ಸವ ಸಾರ್ವಜನಿಕ ದರ್ಶನ ನಾಳೆಗೆ(ಭಾನುವಾರ) ಮುಕ್ತಾಯವಾಗಲಿದೆ. ಕಳೆದ 10 ದಿನಗಳಿಂದ ನಡೆಯುತ್ತಿದ್ದ ಹಾಸನಾಂಬೆ ಉತ್ಸವ ನಾಳೆ ಮಧ್ಯಾಹ್ನ 12 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಿದೆ. 

ಬೇರೆ ಭಾಗಗಳಿಂದ ದೇವಿ ದರ್ಶನಕ್ಕೆ ಬಾರದಂತೆ ಭಕ್ತರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ. ದೇಗುಲ ಒಳಭಾಗದಲ್ಲಿ ಸ್ವಚ್ಚತೆ, ಸಿಂಗಾರ, ಪೂಜಾ ಕೈಂಕರ್ಯಗಳು ನಡೆಯುತ್ತಿವೆ. 

ಹಾಸನ: ಮಳೆಯನ್ನೂ ಲೆಕ್ಕಿಸದೇ ಹಾಸನಾಂಬೆಯ ದರ್ಶನ ಪಡೆದ ಭಕ್ತರು!

ಹಾಸನಾಂಬೆ ದೇಗುಲದ ಹೊರಭಾಗ ಆವರಣದಲ್ಲಿ ಇಂದು(ಶನಿವಾರ) ಸಿದ್ದೇಶ್ವರ ಸ್ವಾಮಿ ಜಾತ್ರೆ ನಡೆಯಲಿದೆ. ನಾಳೆ ಬೆಳಗ್ಗೆ 6 ಗಂಟೆಗೆ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವ ನಡೆಯಲಿದೆ. ಕೆಂಡೋತ್ಸವದ ನಂತರ ಹಾಸನಾಂಬೆ ದೇವಿಗೆ ಪೂಜೆ ನಡೆಯಲಿದೆ. ನಾಳೆ ಹಾಸನಾಂಬೆ ನಿರಾಭರಣ ದೇವಿಯಾಗಲಿದ್ದಾಳೆ. 

ನಾಳೆ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಗೂ ಗಣ್ಯರ ಸಮ್ಮುಖದಲ್ಲಿ ದೇಗುಲದ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮೂಲಕ ಈ ವರ್ಷದ ದರ್ಶನೋತ್ಸವಕ್ಕೆ ಬೀಳಲಿದೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. 

Latest Videos
Follow Us:
Download App:
  • android
  • ios