ಹಾಸನ: ಮಳೆಯನ್ನೂ ಲೆಕ್ಕಿಸದೇ ಹಾಸನಾಂಬೆಯ ದರ್ಶನ ಪಡೆದ ಭಕ್ತರು!
ಮಳೆಯಲ್ಲಿ ನೆನೆದು, ಬಟ್ಟೆ ಒದ್ದೆಯಾದರೂ ಲೈನ್ ಮಾತ್ರ ಬಿಡ್ತಿಲ್ಲ. ಲೈನ್ ಬಿಟ್ರೆ ಮತ್ತೆ ಮೊದಲಿಂದ ಹೊಸದಾಗಿ ಗಂಟೆಗಟ್ಟಲೇ ನಿಂತು ಸಾಗಬೇಕು. ಹೀಗಾಗಿ ಮಳೆ ಸುರೀತಿದ್ರು ನೆನೆಯುತ್ತಲೇ ನಿಂತು ಹಾಸನಾಂಭೆಯ ದರ್ಶನವನ್ನ ಪಡೆದಿದ್ದಾರೆ ಭಕ್ತರು.
ಹಾಸನ(ನ.01): ಹಾಸನಾಂಬೆ ಭಕ್ತರಿಗೆ ಮಳೆಯ ಎಫೆಕ್ಟ್ ತಟ್ಟಿದೆ. ಹೌದು. ಹಾಸನ ನಗರದಲ್ಲಿ ಇಂದು(ಶುಕ್ರವಾರ) ಭಾರೀ ಮಳೆಯಾಗಿದೆ. ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಮಳೆಯಲ್ಲಿ ನೆನೆದು, ಬಟ್ಟೆ ಒದ್ದೆಯಾದರೂ ಲೈನ್ ಮಾತ್ರ ಬಿಡ್ತಿಲ್ಲ. ಲೈನ್ ಬಿಟ್ರೆ ಮತ್ತೆ ಮೊದಲಿಂದ ಹೊಸದಾಗಿ ಗಂಟೆಗಟ್ಟಲೇ ನಿಂತು ಸಾಗಬೇಕು. ಹೀಗಾಗಿ ಮಳೆ ಸುರೀತಿದ್ರು ನೆನೆಯುತ್ತಲೇ ನಿಂತು ಹಾಸನಾಂಭೆಯ ದರ್ಶನವನ್ನ ಪಡೆದಿದ್ದಾರೆ ಭಕ್ತರು.
ನಗರದಲ್ಲಿ ದಿಢೀರ್ ಆರಂಭವಾದ ಮಳೆಯಿಂದ ಹಾಸನಾಂಬೆ ಭಕ್ತರು ಕಂಗಾಲಾಗಿದ್ದಾರೆ. ಬೆಳಗ್ಗೆಯಿಂದ ಬಿಸಿಲಿತ್ತು, ಮಳೆ ಇಲ್ಲ ಅಂತ ಬಂದು ಮಳೆಯಲ್ಲಿ ಭಕ್ತರು ತೊಯ್ದಿದ್ದಾರೆ. ತಲೆ ಮೇಲೆ ಚೇರ್ ಹಿಡಿದು ನಿಂತಿದ್ದಾರೆ. ಒಂದೆರಡು ಗಂಟೆಯಿಂದ ಕ್ಯೂನಲ್ಲಿ ನಿಂತು ಬಂದು ಮಳೆ ಸುರಿತಿದ್ರು ಸ್ಥಳ ಬಿಡುತ್ತಿಲ್ಲ.