ಹರಪನಹಳ್ಳಿ (ಅ.05):  ಪಟ್ಟಣದ ಆಚಾರ್ಯ ಬಡಾವಣೆಯಲ್ಲಿನ ತಾಲೂಕು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಲಕ್ಷ್ಮಿಪುರ ಗ್ರಾಮದ ಕಾಂಗ್ರೆಸ್‌ ಮುಖಂಡ ಪಿ.ಟಿ. ಶಿವಾಜಿನಾಯ್ಕ ಹಾಗೂ ಪೊಲೀಸ್‌ ಇಲಾಖೆಯ ನಿವೃತ್ತ ನೌಕರ ವಿಶ್ವನಾಥ ಶಿರಗಾನಹಳ್ಳಿ ಅವರು ಸ್ಥಳೀಯ ಶಾಸಕ ಜಿ. ಕರುಣಾಕರರೆಡ್ಡಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ, ಬಿಜೆಪಿ ಸಿದ್ಧಾಂತಗಳನ್ನು ಮೆಚ್ಚಿ ಶಾಸಕ ಜಿ. ಕರುಣಾಕರರೆಡ್ಡಿಯವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

‘ಸಿದ್ದುಗಿಂತ ಡಿಕೆಶಿ ದೊಡ್ಡ ನಾಯಕನಲ್ಲ, ಆದ್ರೂ ಅವರ ಮೇಲೆಯೇ ಸಿಬಿಐ ಏಕೆ ದಾಳಿ ಮಾಡಿದ್ರು?’ .

ಶಾಸಕ ಜಿ. ಕರುಣಾಕರರೆಡ್ಡಿ ಅವರು ಇಬ್ಬರನ್ನು ಹಾರ ಹಾಕುವುದರ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್‌, ಮುಖಂಡರಾದ ಸಣ್ಣ ಹಾಲಪ್ಪ, ಬಾಗಳಿ ಕೊಟ್ರೇಶಪ್ಪ, ಲೋಕೇಶ್‌, ತಾಪಂ ಸದಸ್ಯ ನಾಗರಾಜ ಸೇರಿದಂತೆ ಇತರರು ಇದ್ದರು.