ಗೋಕರ್ಣ(ಮೇ.10): ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸುವ ಪ್ರಕ್ರಿಯೆ ಶನಿವಾರ ಸಂಜೆ ಪೂರ್ಣಗೊಂಡಿದೆ. 

ಸುಪ್ರೀಂಕೋರ್ಟ್‌ ಆದೇಶದಂತೆ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಕೃಷ್ಣ ನೇತೃತ್ವದ ಸಮಿತಿ ರಚಿಸಲಾಗಿದ್ದು, ಈ ಸಮಿತಿಯ ಕಾರ್ಯದರ್ಶಿ ಕುಮಟಾ ಉಪವಿಭಾಗಾಧಿಕಾರಿಯಾದ ಎಂ. ಅಜಿತ ಎಲ್ಲಾ ಚರ-ಸ್ಥಿರ ಆಸ್ತಿ, ದಾಖಲೆ ಪತ್ರಗಳನ್ನು ಪಡೆದುಕೊಂಡರು.

ಗೋಕರ್ಣ ಮಹಾಬಲೇಶ್ವರ ವಿವಾದ: ನ್ಯಾ. ಬಿ. ಎನ್. ಶ್ರೀಕೃಷ್ಣ ನೇತೃತ್ವದ ಸಮಿತಿ ರಚನೆ!

126ಕ್ಕೂ ಹೆಚ್ಚು ವಿವಿಧ ಚಿನ್ನಾಭರಣ ಮತ್ತು 230ಕ್ಕೂ ಹೆಚ್ಚಿನ ಬೆಳ್ಳಿ ಆಭರಣ, ಆರು ಬ್ಯಾಂಕ್‌ಗಳಲ್ಲಿ ಉಳಿತಾಯ ಮತ್ತು ಮುದ್ದತು ಠೇವಣಿ ಸೇರಿ ಒಟ್ಟು ಮೂರು ಕೋಟಿ ರುಪಾಯಿಗಳ ದಾಖಲೆ ಪತ್ರ ಪಡೆಯಲಾಯಿತು. ಈ ವೇಳೆ ಸಮಿತಿಯ ಸದಸ್ಯರಾದ ಮಹಾಬಲ ಉಪಾಧ್ಯಾಯ, ದತ್ತಾತ್ರೇಯ ಹಿರೇಗಂಗೆ, ಪರಮೇಶ್ವರ ಮಾರ್ಕಾಂಡೆ, ಜಿಲ್ಲಾ ಮುಜಿರಾಯಿ ಇಲಾಖೆ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.