ವಿಜಯಪುರ(ಜೂ.13): ಜಿಲ್ಲೆಯ ಬಬಲೇಶ್ವರದ ಶ್ರೀ ಶಾಂತವೀರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರದ ಲೀಡ​ರ್ಸ್‌ ಎಕ್ಸಲ್‌ರೇಟಿಂಗ್‌ ಡೆವಲೆಪಮೆಂಟ್‌ ಪ್ರೋಗ್ರಾಂ ನೇತೃತ್ವದಲ್ಲಿ ವಿದ್ಯಾರ್ಥಿ ಚಂದ್ರಕಾಂತ ಮಹಡಿಕ್‌ ಕೋವಿಡ್‌-19 ವೈರಸ್‌ ಹರಡುವಿಕೆ ತಡೆಗೆ ಹ್ಯಾಂಡ್‌ ಫ್ರೀ ಫಟ್‌ ಸ್ಯಾನಿಟೈಸರ್‌ ಸ್ಟ್ಯಾಂಡ್‌ ಅಭಿವೃದ್ಧಿಪಡಿಸಿದ್ದಾನೆ.

ಕಡಿಮೆ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದು ಕಾಲೇಜು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ ವಿನೂತನ ಮಾದರಿಗಳನ್ನು ಯೋಜನೆ ಹಾಕಿದ್ದಾನೆ. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಆರ್‌.ಚೌಧರಿ ವಿದ್ಯಾರ್ಥಿ ಕಾರ್ಯವನ್ನು ಶ್ಲಾಘಿಸಿದರು. ವಿನೂತನ ಚಿಂತನಾ ಶೈಲಿಯ ಮೂಲಕ ಸಮಾಜದ ಇತರ ಸಮಸ್ಯೆ ಕಂಡುಕೊಳ್ಳಲು ಸಾಧ್ಯ. ಸ್ಯಾನಿಟೈಸರ್‌ ಪಡೆಲು ಇಚ್ಛೆಯಿದ್ದರೆ ಮೊ. 9902394846 ಗೆ ಸಂಪರ್ಕಿಸಬಹುದು ಎಂದರು.

ವಿಜಯಪುರ: ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ 9 ಲಕ್ಷ ದೋಚಿದ ಖದೀಮರು

ಉಪನ್ಯಾಸಕ ಪ್ರೊ.ಎಂ.ಸಿ ನಿಂಗಶೆಟ್ಟಿ, ಪ್ರೊ.ಜಿ.ಪಿ.ಸಾಳೆ, ಪ್ರೊ.ವಿ.ಬಿ.ಪಾಟಿಲ, ಪ್ರೊ.ಎಸ್‌.ಐ.ಬಿರಾದಾರ, ಪ್ರೊ.ವಿ.ಎಸ್‌. ಶೇಖದಾರ, ಪ್ರೊ.ಎಚ್‌.ಎಸ್‌.ಕುಚನೂರ, ಪ್ರೊ. ಎನ್‌.ಪಿ.ಬಿರಾದಾರ, ಸಂತೋಷ ಬಿರಾದಾರ ಇದ್ದರು.(ಚಿತ್ರ: ಸಾಂದರ್ಭಿಕ ಚಿತ್ರ)