ಎಲ್ಲ ವರ್ಗಗಳ ಏಳ್ಗೆಗಾಗಿ ಶ್ರಮಿಸಿದ್ದು ಮಾಜಿ ಸಿಎಂ ಕುಮಾರಸ್ವಾಮಿ

ಜ.31 ರಂದು ಬಾಗಲಕೋಟೆಯಲ್ಲಿ ಜೆಡಿಎಸ್‌ ಪಕ್ಷದ ಬೃಹತ್‌ ಸಂಘಟನಾ ಸಮಾವೇಶ ಸಂಘಟಣೆ| 25 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿ| ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳ ಆಡಳಿತದಿಂದ ಬೇಸತ್ತಿದ್ದಾರೆ: ಹಣಮಂತ ಮಾವಿನಮರದ| 

Hanamant Maavinamarad Talks Over HD Kumaraswamy grg

ಗುಳೇದಗುಡ್ಡ(ಜ.28): ರಾಜ್ಯದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ಬಡವ, ರೈತ, ನೇಕಾರ ಸೇರಿದಂತೆ ಇತರೆ ವರ್ಗದವರ ಕಲ್ಯಾಣಕ್ಕಾಗಿ ಅಭಿವೃದ್ಧಿ ಯೋಜನೆಗಳನ್ನು ನೀಡಿದ ಮಾಜಿ ಸಿಎಂ ಎಂದರೆ ಅದು ಎಚ್‌.ಡಿ. ಕುಮಾರಸ್ವಾಮಿ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಹೇಳಿದ್ದಾರೆ. 

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಗ್ರಾಪಂ ಚುನಾಯಿತ ಜೆಡಿಎಸ್‌ ಬೆಂಬಲಿತ ಸದಸ್ಯರ, ಪುರಸಭೆ ಸದಸ್ಯರ, ತಾಲೂಕಿನ 12 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಜೆಡಿಎಸ್‌ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬರಲಿರುವ ಜ.31 ರಂದು ಬಾಗಲಕೋಟೆಯಲ್ಲಿ ಜೆಡಿಎಸ್‌ ಪಕ್ಷದ ಬೃಹತ್‌ ಸಂಘಟನಾ ಸಮಾವೇಶವನ್ನು ಸಂಘಟಿಸಲಾಗಿದ್ದೂ, 25 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶಗೊಳ್ಳಲ್ಲಿದ್ದಾರೆ. ಪ್ರತಿ ಕಾರ್ಯಕರ್ತರು ತಮ್ಮತಮ್ಮ ಗ್ರಾಮದ ಮನೆಮನೆಗೆ ತೆರಳಿ ಕುಮಾರಸ್ವಾಮಿಯವರ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಿ, ಸಮಾವೇಶಯಲ್ಲಿ ಭಾಗಿಯಾಗುವಂತೆ ಮಾಡಬೇಕು. ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್‌ ಸರ್ಕಾರಗಳ ಆಡಳಿತದಿಂದ ಬೇಸತ್ತಿದ್ದಾರೆ. ಆ ಕಾರಣದಿಂದಲೇ ಮೊನ್ನೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನೇ ಜನ ಆರಿಸಿ ಕಳಿಸಿದ್ದಾರೆ. ಬರಲಿರುವ ದಿನಗಳಲ್ಲಿ ತಾಪಂ ಮತ್ತು ಜಿಪಂ ಹೆಚ್ಚಿನ ಸ್ಥಾನಗಳೂ ಜೆಡಿಎಸ್‌ ಪಾಲಾಗುವ ಕಾಲ ಬಹಳದೂರ ಉಳಿದಿಲ್ಲ. ಸಮಾವೇಶದ ಯಶಸ್ವಿಗೆ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿದೆ. ಎಲ್ಲರೂ ಆಸಕ್ತಿವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ರೈತರ ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ ಕೂರಿಗೆ ಹಿಡಿದ ರೈತರು ಎಷ್ಟು ಜನ ಇದ್ದಾರೆ? ಕಾರಜೋಳ

ಗುಳೇದಗುಡ್ಡ ತಾಲೂಕು ಜೆಡಿಎಸ್‌ ಅಧ್ಯಕ್ಷ ಬಾಲು ಹುನಹುಂಡಿ, ಪುರಸಭೆ ಸದಸ್ಯರಾದ ಸಂತೋಷ ನಾಯನೇಗಲಿ, ಉಮೇಶ ಹುನಗುಂದ, ಜ್ಯೋತಿ ಗೋವಿನಕೊಪ್ಪ, ಸುಮಿತ್ರಾ ಕೋಡಬಳಿ, ರಾಜೇಶ್ವರಿ ಉಂಕಿ, ನಗರ ಘಟಕದ ಅಧ್ಯಕ್ಷ ಮುತ್ತು ದೇವರಮನಿ, ಪುರಸಭೆ ಮಾಜಿ ಉಪಾಧ್ಯಕ್ಷ ಶ್ರೀಕಾಂತ ಹುನಗುಂದ, ಚಂದ್ರಕಾಂತ ಶೇಖಾ, ಕೋಟೇಕಲ್‌ ಗ್ರಾಪಂ ಮಾಜಿ ಅಧ್ಯಕ್ಷ ರಹೇಮಾನ್‌ ಯಳ್ಳಿಗುತ್ತಿ, ನಿಜಗುಣಿ ಕೆಲೂಡಿ, ಚನ್ನಪ್ಪ ಮೇಟಿ, ಮುತ್ತಪ್ಪ ಕಾಳನ್ನವರ್‌, ಮಹದೇವಪ್ಪ ಪತ್ತಾರ, ಸಂಗಪ್ಪ ಹಡಪದ, ಉಮೇಶ ಮುಗಜೋಳ, ಶರಣಪ್ಪ ಮಾವಿನಮರದ, ಭೀಮಶಿ ಡಂಗಿ, ಟಿ.ಎಸ್‌.ಬೆನಕಟ್ಟಿ, ಅನ್ವರಖಾನ್‌ಪಠಾಣ, ಮಹೇಶ ಬಿಜಾಪೂರ, ಪ್ರಕಾಶ ವಾಳದುಂಕಿ, ರಾಘವೇಂದ್ರ ಕುಂಬಾರ, ಸಚೀನ್‌ ರಾಂಪೂರ, ತಾಲೂಕಿನ 12 ಗ್ರಾಪಂಗಳ ಚುನಾಯಿತ ಜೆಡಿಎಸ್‌ ನೂತನ ಸದಸ್ಯರು ಸೇರಿದಂತೆ ನೂರಕ್ಕೂ ಹೆಚ್ಚಿನ ತಾಲೂಕಿನ ಕಾರ್ಯಕರ್ತರು ಸೇರಿದ್ದರು.

ಭಾನುವಾರ ಬಾಗಲಕೋಟೆಯಲ್ಲಿ ನಡೆಯುವ ಸಮಾವೇಶ ಐತಿಹಾಸಿಕ ದಾಖಲೆ ನಿರ್ಮಿಸಲಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಜಿಲ್ಲೆಯ ಸ್ವಾಭಿಮಾನದ ಸಮಾವೇಶವಾಗಲಿದೆ. ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಜನರು ಜೆಡಿಎಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪರ್ವಕಾಲ ಸಮೀಪಿಸಿದ್ದೂ, ಬಹುದೊಡ್ಡ ಸಂಘಟನೆಯಾಗಿ ಪಕ್ಷ ಹೊರಹೊಮ್ಮಲಿದೆ. ಗುಳೇದಗುಡ್ಡ ತಾಲೂಕಿನಿಂದಲೇ 5 ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios