Asianet Suvarna News Asianet Suvarna News

ಹಂಪಿ ವಿರೂಪಾಕ್ಷೇಶ್ವರನಿಗೂ ತಟ್ಟಿದ ಕೊರೋನಾ ಭೀತಿ: ರಥೋತ್ಸವ ರದ್ದು

ಲಾಕ್‌ಡೌನ್‌ ಹಂಪಿ ವಿರೂಪಾಕ್ಷೇಶ್ವರ ರಥೋತ್ಸವ ರದ್ದು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಐತಿಹಾಸಿಕ ಹಂಪಿ| ಸಂಪ್ರದಾಯ ಮುರಿಯದಂತೆ ಮಡಿತೇರು ಎಳೆದು ಪೂಜೆ| ದವನದ ಹುಣ್ಣಿಮೆ ಬಳ್ಳಾರಿ ಜಿಲ್ಲೆಯಲ್ಲಿ ಹಂಪಿ ಹುಣ್ಣಿಮೆ ಎಂದೇ ಕರೆಯಲಾಗುತ್ತದೆ|

Hampi Virupaksha Fair Cancel due to India LockDown
Author
Bengaluru, First Published Apr 9, 2020, 10:34 AM IST

ಬಳ್ಳಾರಿ(ಏ.09): ಪ್ರತಿವರ್ಷ ದವನದ ಹುಣ್ಣಿಮೆಯಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥೋತ್ಸವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದು, ಸಂಪ್ರದಾಯ ಮುರಿಯದಂತೆ ಸರಳವಾಗಿ ದೇವಸ್ಥಾನದ ಆವರಣದಲ್ಲಿಯೇ ಮಡಿ ರಥೋತ್ಸವವನ್ನು ಸಾಂಕೇತಿಕವಾಗಿ ಎಳೆಯಲಾಯಿತು.

ದೇವಸ್ಥಾನದ ಅರ್ಚಕರು ಹಾಗೂ ಕೆಲವೇ ಕೆಲವು ಭಕ್ತರು ರಥೋತ್ಸವ ವೇಳೆ ಪಾಲ್ಗೊಂಡು ಎಂದಿನ ಪೂಜಾ ವಿಧಿ-ವಿಧಾನ ಪೂರ್ಣಗೊಳಿಸಿದರು. ಸುಮಾರು ಒಂದು ಗಂಟೆಯೊಳಗೆ ಪೂಜೆ, ರಥೋತ್ಸವ ಮತ್ತಿತರ ಕೈಂಕರ್ಯಗಳನ್ನು ಪೂರ್ಣಗೊಳಿಸಲಾಯಿತು. 

ಕೃಷಿ ಚಟುವಟಿಕೆ: 'ಮುಕ್ತ ಸಂಚಾರಕ್ಕೆ ರೈತರಿಗೆ ಗ್ರೀನ್‌ಪಾಸ್‌ ನೀಡಲು ಕ್ರಮ'

ದವನದ ಹುಣ್ಣಿಮೆ ಬಳ್ಳಾರಿ ಜಿಲ್ಲೆಯಲ್ಲಿ ಹಂಪಿ ಹುಣ್ಣಿಮೆ ಎಂದೇ ಕರೆಯಲಾಗುತ್ತಿದ್ದು, ಪ್ರತಿವರ್ಷ ಶ್ರೀ ವಿರೂಪಾಕ್ಷೇಶ್ವರ ಹಾಗೂ ಪಂಪಾಂಬಿಕಾ ದೇವಿಯ ಜೋಡು ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದ ಜನರು ಆಗಮಿಸುತ್ತಿದ್ದರು.
 

Follow Us:
Download App:
  • android
  • ios