Asianet Suvarna News Asianet Suvarna News

Chitradurga; ಕೋಡಿ ಬಿದ್ದ ಹಂಪನೂರು ಕೆರೆ, ಜಲಾವೃತಗೊಂಡ‌ ಜಮೀನುಗಳು

ಪ್ರತೀ ವರ್ಷದಂತೆ ಈ ವರ್ಷವೂ ಚಿತ್ರದುರ್ಗ ತಾಲ್ಲೂಕಿನ ಹಂಪನೂರು‌ ಗ್ರಾಮದಲ್ಲಿ ಬಳಿ. ಎಂಎಹಟ್ಟಿ ಹಾಗು ಹಂಪನೂರು ಮಧ್ಯೆ ಇರುವ  ಕೆರೆ  ಮಳೆಯಿಂದಾಗಿ ಭರ್ತಿಯಾಗಿ ಕೋಡಿ ಬಿದ್ದಿದೆ. ಆದರೆ ಈ ಬಾರಿ ನೀರು  ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.  

Hampanuru lake overflow flood in Chitradurga villages gow
Author
First Published Oct 9, 2022, 10:58 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.9): ಕೆರೆ ತುಂಬಿದ್ರೆ ರೈತರ ಮೊಗದಲ್ಲಿ‌‌ ಮಂದಹಾಸ ಮೂಡೋದು‌ ಸಹಜ. ಆದ್ರೆ ಇಲ್ಲೊಂದು ಕೆರೆ ತುಂಬಿದ್ರೂ ಸಹ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ‌.  ಜಲಾವೃತವಾಗಿರೊ ಅಡಿಕೆ, ಮೆಕ್ಕೆಜೋಳ ಬೆಳೆ. ಫಸಲಿಗೆ ಬಂದಿರೋ ಅಡಿಕೆ ತೆಗಿಸಲಾಗದೇ, ಇತ್ತ ಕಟಾವಿಗೆ ಬಂದಿರೋ ಮೆಕ್ಕೇಜೋಳ ಕಟಾವು ಮಾಡಲಾಗದೇ,  ಕಂಗಾಲಾಗಿರೋ ಅನ್ನದಾತರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲ್ಲೂಕಿನ ಹಂಪನೂರು‌ ಗ್ರಾಮದಲ್ಲಿ ಬಳಿ. ಎಂಎಹಟ್ಟಿ ಹಾಗು ಹಂಪನೂರು ಮಧ್ಯೆ ಇರುವ  ಕೆರೆ ಸತತ ಮಳೆಯಿಂದಾಗಿ ಭರ್ತಿಯಾಗಿದೆ. ಈ ಕೆರೆ ಪ್ರತಿವರ್ಷ ಭರ್ತಿಯಾಗಿ‌ ಕೋಡಿಬಿದ್ದರು ಯಾವುದೇ ಅವಾಂತರ ಆಗ್ತಿರಲಿಲ್ಲ. ಆದ್ರೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಾಗಿ 16 ಎಕರೆ ಕೆರೆಯಂಗಳವನ್ನು ವಶಪಡಿಸಿ ಕೊಂಡಿರುವುದರಿಂದ ಕೆರೆಯ ನೀರು ಪಕ್ಕದ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಜಮೀನುಗಳಲ್ಲಿ ಸತತ ಎರಡು ತಿಂಗಳಿಂದ‌ ನೀರು ನಿಂತು ಅಡಿಕೆ ಕಟಾವಿಗೆ ಅಡ್ಡಿಯಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಅಡಿಕೆಹಾಗು ಮೆಕ್ಕೆಜೋಳ ಬೆಳೆದ ರೈತರು ಕೈಗೆ ಬಂದ ತೋಟ ಹೆಚ್ಚಿನ ಶೀತದಿಂದ ಹಾಳಾಗಲಿದೆ ಎಂಬ ಆತಂಕದಲ್ಲಿದ್ದಾರೆ.

ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಸಣ್ಣ‌ನೀರಾವರಿ ಇಲಾಖೆ  ಹಾಗು ಹೆದ್ದಾರಿ ಪ್ರಾಧಿಕಾರದ ‌ಗಮನಕ್ಕ ತಂದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮೆಕ್ಕೆಜೋಳ ಕೊಳೆತು ಹೋಗಿದೆ. ಕಟಾವಿಗೆ ಬಂದಿರೋ ಅಡಿಕೆ ನೀರು ಪಾಲಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ‌. ಹೀಗಾಗಿ ಸಂಬಂಧಪಟ್ಟವರು, ಕೂಡಲೇ‌ ಇದಕ್ಕೊಂದು ಪರಿಹಾರ ಹುಡುಕಬೇಕಿದ್ದು, ರೈತರಿಗಾದ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

 

Haveri: ತುಂಬಿದ ಕೆರೆ ಕಟ್ಟೆಗಳು: ನೀರಿನ ಕೊರತೆ ಚಿಂತೆ ದೂರ

ಒಟ್ಟಾರೆ ಮಳೆ ನಿಂತರು‌ಮಳೆಯ ಹನಿ ನಿಲ್ಲಲ್ಲ ಎಂಬಂತೆ ಮಳೆ ನಿಂತರು ಮಳೆಯಿಂದಾಗಿ ಭರ್ತಿಯಾಗಿರೊ ಕೆರೆಯಿಂದ ಹಂಪನೂರಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದ್ರು ಸಂಬಂಧಪಟ್ಟವರು ಅನ್ನದಾತರ ಸಂಕಷ್ಟಕ್ಕೊಂದು ಶಾಶ್ವತ ಪರಿಹಾರ ಹುಡುಕಲು ಮುಂದಾಗಬೇಕಿದೆ.

ಕೆರೆಗಳ ನೀರು ಸೋರಿಕೆಯಾಗದಂತೆ ನಿಗಾ ವಹಿಸಿ
ಹುಕ್ಕೇರಿ: ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭಾನುವಾರ ನಸುಕಿನ ಜಾವ ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅವರು ಭೇಟಿ ನೀಡಿ ಅಲ್ಲಿನ ಕೆರೆಗಳನ್ನು ವೀಕ್ಷಿಸಿದರು.

Kolara Rains; ಕೋಡಿ ಬಿದ್ದ ತಲ್ಲೂರು ಕೆರೆ, ನಟ ಯಶ್ ಗೆ ಧನ್ಯವಾದ ಅರ್ಪಿಸಿದ ಜನತೆ

ಶಿರಹಟ್ಟಿಕೆ.ಡಿ.ಶಿರಹಟ್ಟಿಬಿ.ಕೆ.ಬೆಳವಿ, ಶೇಲಾಪುರ, ಯಾದಗೂಡ ಸೇರಿದಂತೆ 10ಕ್ಕೂ ಹೆಚ್ಚು ಕೆರೆಗಳನ್ನು ವೀಕ್ಷಿಸಿದ ರಮೇಶ ಕತ್ತಿ, ಕೆರೆಗಳ ಸುಧಾರಣೆಗೆ ಬೇಕಾದ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪಾದರಸದಂತೆ ಕೆರೆಗಳನ್ನು ವೀಕ್ಷಿಸಿ ಕ್ಷೇತ್ರದ ಜನರಿಗೆ ಶಾಸಕರಿಲ್ಲ ಎಂಬ ಅನಾಥಭಾವ ದೂರ ಮಾಡಲು ಪ್ರಯತ್ನಿಸಿದರು. ತನ್ಮೂಲಕ ಅಕಾಲಿಕವಾಗಿ ನಿಧನರಾದ ತಮ್ಮ ಸಹೋದರ ಉಮೇಶ ಕತ್ತಿ ಕಂಡ ಕನಸುಗಳ ನನಸು ಮಾಡಲು ಪಣ ತೊಟ್ಟರು. ಈ ಮೂಲಕ ತಮ್ಮ ಸಹೋದರ, ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಸಚಿವ ಉಮೇಶ ಕತ್ತಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಕೆರೆ ತುಂಬಿಸುವ ಕಾರ್ಯಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಕೊಂಡರು. ಅಷ್ಟೇ ಅಲ್ಲದೇ ಉಮೇಶ ಕತ್ತಿ ಅವರು ಪ್ರತಿ ಭಾನುವಾರ ಬೆಳಿಗ್ಗೆ ಕೆರೆಗಳಿಗೆ ಭೇಟಿ ನೀಡುವ ಪದ್ಧತಿಯನ್ನೂ ರಮೇಶ ಕತ್ತಿ ಮುಂದುವರೆಸಿಕೊಂಡು ಹೋಗುತ್ತಿರುವುದಕ್ಕೆ ರೈತರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

ಈ ವೇಳೆ ರಮೇಶ ಕತ್ತಿ ಮಾತನಾಡಿ, ಬೇಸಿಗೆಯಲ್ಲಿ ಕೆರೆಗಳ ನೀರು ಸೋರಿಕೆಯಾಗದಂತೆ ನಿಗಾ ವಹಿಸಬೇಕು. ಕೆರೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪೈಪ್‌ಲೈನ್‌ಗಳು ಒಡೆದರೆ ತ್ವರಿತವಾಗಿ ರಿಪೇರಿ ಮಾಡಬೇಕು. ಶೀಘ್ರವೇ 33 ಕೆರೆಗಳ ಸಂಬಂಧಿಸಿದವರ ಸಭೆ ಕರೆಯಲಾಗುವುದು. ಇಡೀ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ರೈತರ ಆರ್ಥಿಕ ಮಟ್ಟಸುಧಾರಿಸಲು ಶ್ರಮಿಸಲಾಗುತ್ತಿದೆ ಎಂದರು.
 

Follow Us:
Download App:
  • android
  • ios