ಕುಂದಾ ನಗರಿಯಲ್ಲಿ ಗಮನಸೆಳೆದ ಹಾಫ್ ಮ್ಯಾರಥಾನ್
ನಗರದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನದ ನಿಮಿತ್ತ ಹಾಫ್ ಮ್ಯಾರಥಾನ್‌ಗೆ ಉತ್ತಮ ಪ್ರತಿಕ್ರಿಯೆ| ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ಹಲವು ರಾಜ್ಯಗಳಿಂದ ಸಾವಿರಾರು ಜನರು ಮ್ಯಾರಥಾನ್‌ದಲ್ಲಿ ಭಾಗಿ| ಈ ಮ್ಯಾರಥಾನ್‌ದಲ್ಲಿ ಒಟ್ಟು ಐದು ತಂಡಗಳು ಭಾಗಿಯಾಗಿದ್ದವು| ಚಿಕ್ಕಮಕ್ಕಳು, ವೃದ್ಧರು, ಅಂಧರು, ದಿವ್ಯಾಂಗರು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷ|
ಬೆಳಗಾವಿ(ಸೆ.30): ನಗರದಲ್ಲಿ ರೇಜಿಡೆನಾ ರೆಸಾರ್ಟ್ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಲೇಕ್‌ವ್ಯೂ ಹಾಸ್ಪಿಟಲ್ ರೋಟರಿ ಕ್ಲಬ್ ಆಫ್ ವೇಣುಗ್ರಾಮ್ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನದ ನಿಮಿತ್ತ ಭಾನುವಾರ ಆಯೋಜಿಸಿದ್ದ ಹಾಫ್ ಮ್ಯಾರಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ಹಲವು ರಾಜ್ಯಗಳಿಂದ ಸಾವಿರಾರು ಜನರು ಮ್ಯಾರಥಾನ್‌ದಲ್ಲಿ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಿದರು.
ಈ ಮ್ಯಾರಥಾನ್‌ದಲ್ಲಿ ಒಟ್ಟು ಐದು ತಂಡಗಳು ಭಾಗಿಯಾಗಿದ್ದವು. ಮೊದಲನೇ 21ಕಿ.ಮೀ, ಎರಡನೇ 10 ಕಿಮೀ, ಮೂರನೇ 5 ಕಿಮೀ. ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಕ್ಕಳು, ವೃದ್ಧರು, ಅಂಧರು, ದಿವ್ಯಾಂಗರಿಗೆ ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ವಿಶೇಷವಾಗಿತ್ತು. ನಗರದ ಸಿಪಿಎಡ್ ಮೈದಾನದಿಂದ ಆರಂಭವಾದ ಹಾಫ್ ಮ್ಯಾರಥಾನ್ ಹನುಮಾನ್ ನಗರ ಸೇರಿ ಹಲವು ರಸ್ತೆಗಳ ಮಾರ್ಗವಾಗಿ ಮರಳಿ ಸಿಪಿಎಡ್ ಮೈದಾನಕ್ಕೆ ತಲುಪಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಮಾತನಾಡಿದ ಆಯೋಜಕ ಡಾ.ಶಶಿಕಾಂತ ಕುಲಗೋಡ, ನಮ್ಮ ಹಾಫ್ ಮ್ಯಾರಥಾನ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಮ್ಯಾರಥಾನ್ ಮಾರ್ಗದಲ್ಲಿ ಅಲ್ಲಲ್ಲಿ ಕುಡಿಯುವ ನೀರಿಗಾಗಿ ಬಾಟಲ್ ಇಟ್ಟಿದ್ದರು. ಆದರೆ ನೀರು ಕುಡಿದು ಬಾಟಲಿಗಳನ್ನು ರಸ್ತೆಯ ಮೇಲೆ ಎಸೆಯದೇ ಪರಿಸರ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಅ.2ರಂದು ಪ್ಲಾಸ್ಟಿಕ್ ಬ್ಯಾನ್ ಆಗುತ್ತಿದೆ. ಹೀಗಾಗಿ ಎಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ, ಸುನೀಲ್ ಜೋಷಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ, ಹೆಚ್ಚುವರಿ ಎಸ್ಪಿ ರಾಮಲಕ್ಷ್ಮಣ ಅರಸಿದ್ದಿ, ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ, ರೋಟರಿ ಗವರ್ನರ ಅವಿನಾಶ್ ಪೋತದಾರ, ಲೇಕ್‌ವ್ಯೂ ಫೌಂಡೇಶನ್ ಅಧ್ಯಕ್ಷ ಡಾ.ಸಂಜಯ ಹೊಸಳ್ಳಿ, ಡಾ.ಗಿರೀಶ್ ಸೋನವಾಲ್ಕರ, ರೋಟರಿ ಕ್ಲಬ್ ವೇಣುಗ್ರಾಮ ಅಧ್ಯಕ್ಷ ಡಾ.ರಾಜೇಶ ಕುಮಾರ ತೇಲಗಾಂವ, ಉಮೇಶ್ ರಾಮಗೂರವಾಡಿ, ವಿನಯಕುಮಾರ ಬಾಳಿಕಾಯಿ, ಕುಲದೀಪ ಹಂಗರಕರ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.