Asianet Suvarna News Asianet Suvarna News

ಮಾಜಿ ಸಚಿವನಾಗಿ ಸತ್ತರೆ ಮಾತ್ರ ಸ್ವರ್ಗ ಸಿಗದು : ಹಾಲಾಡಿ

  • ಮಾಜಿ ಸಚಿವನಾಗಿ ಸತ್ತರೆ ಮಾತ್ರ ಸ್ವರ್ಗ ಸಿಗುತ್ತದೆ ಅಂತೇನಿಲ್ಲ
  • ಸಚಿವ ಸ್ಥಾನ ಸಿಕ್ಕದೇ ಇರುವುದರಿಂದ ನನಗೇನೂ ಬೇಸರವೂ ಇಲ್ಲ
  • ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಪ್ರತಿಕ್ರಿಯೆ
Haladi Shrinivas Shetty reacts On  cabinet expansion snr
Author
Bengaluru, First Published Aug 5, 2021, 7:40 AM IST
  • Facebook
  • Twitter
  • Whatsapp

ಉಡುಪಿ (ಆ.05): ಮಾಜಿ ಸಚಿವನಾಗಿ ಸತ್ತರೆ ಮಾತ್ರ ಸ್ವರ್ಗ ಸಿಗುತ್ತದೆ ಅಂತೇನಿಲ್ಲ, ಸಚಿವ ಸ್ಥಾನ ಸಿಕ್ಕದೇ ಇರುವುದರಿಂದ ನನಗೇನೂ ಬೇಸರವೂ ಇಲ್ಲ, ಖುಷಿಯೂ ಇಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಪ್ರತಿಕ್ರಿಯಿಸಿದ್ದಾರೆ. 

ನಾನು ಒಂದು ಜಾತಿಯ ಹೆಸರಿನಲ್ಲಿ ಸಚಿವ ಸ್ಥಾನ ಪಡೆಯುವ ಆಸೆ ಇಲ್ಲ. ಹುಲ್ಲಿನ ಮನೆ ತೋರಿಸಿ, ಮನೆಯಿಂದ ಹೊರಗೆ ಹೊರಡುವಾಗ ಇಸ್ತ್ರಿ ಹಾಕಿದ ಬಟ್ಟೆಹಾಕಿ, ಜನರ ಬಳಿ ಬರುವಾಗ ಅದನ್ನು ಮುದ್ದೆ ಮಾಡಿಕೊಂಡು ಸರಳತೆ ಪ್ರದರ್ಶಿಸುತ್ತಾರೆ. ಅಂತಹ ಸರಳತೆ ನನಗೆ ಅಗತ್ಯವಿಲ್ಲ ಎಂದರು.

ಕೇಳಿ ಸಚಿವ ಸ್ಥಾನ ಪಡೆಯಲ್ಲ : ಜನರ ಸೇವೆಯೇ ನನಗೆ ಮುಖ್ಯ

ಇನ್ನು ತನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಯಾರೂ ಪ್ರತಿಭಟನೆಗೆ ಮಾಡಬಾರದು, ಅದಕ್ಕೆ ತನ್ನ ಬೆಂಬಲ ಇಲ್ಲ. ಕ್ಷೇತ್ರದ ಜನರ ಆಶೋತ್ತರ ಈಡೇರದಿದ್ದರೆ ಮಾತ್ರ ಪ್ರತಿಭಟನೆ ಮಾಡಬೇಕು ಎಂದು ತನ್ನ ಬೆಂಬಲಿಗರಿಗೆ ಸಲಹೆ ಮಾಡಿದರು.

Follow Us:
Download App:
  • android
  • ios