ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಹೆಚ್1 ಎನ್1 ವೈರಸ್ ಜ್ವರ ಮತ್ತೆ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿ್ಲ್ಲೆಯಲ್ಲಿ ಹೆಚ್1 ಎನ್1 ವೈರಸ್ ಜ್ವರ ಪತ್ತೆಯಾಗಿದ್ದು, ಜನರು ಭಯ ಭೀತರಾಗಿದ್ದಾರೆ.
ಶಿವಮೊಗ್ಗ, [ಸೆ.24]: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಹೆಚ್1 ಎನ್1 ವೈರಸ್ ಜ್ವರ ಮತ್ತೆ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿ್ಲ್ಲೆಯಲ್ಲಿ ಹೆಚ್1 ಎನ್1 ವೈರಸ್ ಜ್ವರ ಪತ್ತೆಯಾಗಿದ್ದು, ಜನರು ಭಯಭೀತರಾಗಿದ್ದಾರೆ.
ಕಳೆದ ಒಂದು ವಾರದಿಂದ ತೀರ್ಥಹಳ್ಳಿ ಪಟ್ಟಣದ ಜೆ. ಸಿ ಆಸ್ಪತ್ರೆಯಲ್ಲಿ ವೈರಸ್ ಜ್ವರಗಳ ರೋಗಿಗಳ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಸ್ಥಳೀಯ ಶಾಲೆಯ ವಿದ್ಯಾರ್ಥಿಯೊರ್ವರಿಗೆ ಹಾಗೂ ಕುರುವಳ್ಳಿಯ ವ್ಯಕ್ತಿಯೊಬ್ಬರಿಗೆ ಹೆಚ್1 ಎನ್1 ಜ್ವರ ಪತ್ತೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಬ್ಬರಲ್ಲಿ ಹೆಚ್1 ಎನ್1 ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕು ವೈಧ್ಯಾಧಿಕಾರಿ ಡಾ|| ಕಿರಣ್ ಸೂಕ್ತ ಮುಂಜಾಗೃತ ಕ್ರಮಕ್ಕೆ ಸಿದ್ದತೆ ಕೈಗೊಂಡಿದ್ದಾರೆ.
