ಕೋಲಾರ(ಜೂ.14) : ಕೋವಿಡ್‌ 19ನಿಂದ ಜನರನ್ನು ರಕ್ಷಿಸಿ, ದೇಶ ಮತ್ತು ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರಗಳು ಸುಭೀಕ್ಷೆಯಿಂದ ಉತ್ತಮ ಆಡಳಿತ ನೀಡಿ, ಜನರ ಮನದಲ್ಲಿ ಉಳಿಯುವಂತಾಗಲಿ ಎಂದು ಮಾಜಿ ಶಾಸಕ ಎಚ್‌. ವಿಶ್ವನಾಥ್‌ ನುಡಿದರು.

ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ಧ ಕುರುಡಮಲೆ ವಿನಾಯಕನ ದೇವಾಲಯಕ್ಕೆ ಶನಿವಾರ ಅಬಕಾರಿ ಸಚಿವ ಎಚ್‌. ನಾಗೇಶ್‌ರ ಜೊತೆಯಲ್ಲಿ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆಬರಲು ತಾವೆಲ್ಲ ಜೊತೆಗೂಡಿ ಸಹಕಾರ ನೀಡಿದ್ದೇವೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ನುಡಿದಂತೆ ನಡೆಯುವವರು ರಾಜ್ಯದ ಜನರಿಗೆ ಅವರು ನೀಡಿರುವ ಆಶ್ವಾಸನೆಗಳನ್ನು ಈಡೇೕರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕೆ

ವಿಧಾನ ಪರಿಷತ್‌ ಚುನಾವಣೆಯಲ್ಲಿ ನಾನು ಸೇರಿದಂತೆ ಇತರರು ಅಕಾಂಕ್ಷಿಗಳಾಗಿದ್ದೆವೆ ಇದನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್‌ ನಿರ್ಧರಿಸಲಿದ್ದು, ಅದರಲ್ಲಿ ತನಗೆ ಅನುಕೂಲ ಮಾಡಿಕೊಳ್ಳಲೇಂದು ದೇವರಲ್ಲಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಾಸುದೇವ್‌, ಕೃಷ್ಣಮೂರ್ತಿ, ಕೋಳಿ ನಾಗರಾಜ್‌, ಕೋಲಾರ ನಗರಸಭೆ ಮಾಜಿ ಸದಸ್ಯ ಸೋಮಶೇಖರ್‌ ಮತ್ತಿತರರು ಇದ್ದರು.