Asianet Suvarna News Asianet Suvarna News

ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಬೇಕು ಎಂದ ವಿಶ್ವನಾಥ್..!

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಬೇಕು. ದೇವೇಗೌಡರು  ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಹುದ್ದೆ ಏರಿದಂತವರು ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.

H Vishwanath talks over present political scenario and predicts rapid change in future
Author
Bangalore, First Published Jun 9, 2020, 3:24 PM IST

ಹಾಸನ(ಜೂ.09): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಬೇಕು. ದೇವೇಗೌಡರು  ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಹುದ್ದೆ ಏರಿದಂತವರು ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಮಾಜಿ ಸಂಸದ  ಹೆಚ್. ವಿಶ್ವನಾಥ್, ಅವರ ಅನುಭವ ದೇಶಕ್ಕೆ ಬೇಕು. ರಾಜ್ಯಸಭೆ ಹಿರಿಯರ ಮನೆಯಾಗಿದ್ದು, ಗೌಡರ ಆಯ್ಕೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಪರಿಷ್ ಚುನಾವಣೆ ದಿನಾಂಕ ಪ್ರಕಟ: ಗರಿಗೆದರಿದ ರಾಜ್ಯ ರಾಜಕಾರಣ

2020 ರ ಅಂತ್ಯದ ವೇಳೆಗೆ ರಾಜಕೀಯ ಧೃವೀಕರಣವಾಗಲಿದೆ. ಅದು ದೊಡ್ಡ ಮಟ್ಟದಲ್ಲಿ ಆಗುವ ಸೂಚನೆಗಳಿವೆ ಎಂದು ವಿಶ್ವನಾಥ್ ಅಚ್ಚರಿಯ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಇದೀಗ ವಿಶ್ವನಾಥ್ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕರ ಬಗ್ಗೆ ಅಸಮಾಧಾನಗೊಂಡು ವಿಶ್ವನಾಥ್ ಹೇಳಿಕೆ ನೀಡಿದ್ದಾರಾ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

H Vishwanath talks over present political scenario and predicts rapid change in future

ರಾಹುಲ್ ಗಾಂಧಿಯನ್ನು ತೆಗಳಿದ ವಿಶ್ವನಾಥ್

ದೇಶದಲ್ಲಿ ಕಾಂಗ್ರೆಸ್ ತನ್ನ ಇರುವಿಕೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್ ಸಾರಥಿ ರಾಹುಲ್ ಗಾಂಧಿ ಪಕ್ಷ ಮುನ್ನೆಡೆಸಲು ಕಷ್ಟಸಾಧ್ಯ. ನಾನು 2012 ರಲ್ಲೇ ನಿಮ್ಮ ಕೈಯಲ್ಲಿ ಆಗಲ್ಲ ಎಂದು ಹೇಳಿದ್ದೆ. ಒಂದು ವೇಳೆ ಕಾಂಗ್ರೆಸ್ ಗೆ ಪುನರ್ಜನ್ಮ ನೀಡುವ ಶಕ್ತಿ ಇತ್ತೆಂದರೆ ಅದು ಪ್ರಿಯಾಂಕ ಗಾಂಧಿ ಎಂದು ರಾಹುಲ್ ಗಾಂಧಿಯನ್ನು ಜರಿದ ಹಳ್ಳಿಹಕ್ಕಿ ವಿಶ್ವನಾಥ್ ಪ್ರಿಯಾಂಕ ಅವರನ್ನು ಹೊಗಳಿದ್ದಾರೆ.

ಮಾಜಿ ಜಿ.ಪಂ ಅಧ್ಯಕ್ಷ, ಹಿಂದುಳಿದ ವರ್ಗ ಮೋರ್ಚದಲ್ಲಿ ಕೆಲ್ಸ ಮಾಡಿದವರಿಗೆ ರಾಜ್ಯಸಭಾ ಟಿಕೆಟ್

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂತೋಷ ತಂದಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಉತ್ತಮ‌ ಸ್ಥಾನ ದೊರೆತಿದೆ. ಹಿಂದುಳಿದ ವರ್ಗವಾದ ಸವಿತಾ ಸಮಾಜದ ಕಾರ್ಯಕರ್ತನಿಗೆ ಟಿಕೆಟ್ ನೀಡಲಾಗಿದೆ. ಈ ಸಮಾಜದ ವ್ಯಕ್ತಿ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸುತ್ತಿರುವುದು ಹೆಗ್ಗಳಿಕೆ ವಿಚಾರ. ಮೋದಿಯವರು ಕೂಡ ಹಿಂದುಳಿದ ವರ್ಗದಿಂದಲೇ ಬಂದಿರುವವರು. ಮೋದಿಯವರ ನಾಯಕತ್ವದ ಸರ್ಕಾರ ಮತ್ತು ಪಕ್ಷ ಎಲ್ಲಾ ಹಿಂದುಳಿದ ವರ್ಗಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios