ಕೊಡಗು (ಮಾ.21):  ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದುಮ ಈ ಬಗ್ಗೆ ಜನರು ಜಾಗೃತರಾಗಬೇಕು. ಸದ್ಯಕ್ಕೆ ಲಾಕ್‌ಡೌನ್ ಬೇಡ ಎಂದು  ಬಿಜೆಪಿ ಮುಖಂಡ ಎಚ್ ವಿಶ್ವನಾಥ್ ಹೇಳಿದರು. 

ಕೊಡಗಿನಲ್ಲಿಂದು ಮಾತನಾಡಿದ ಎಚ್.ವಿಶ್ವನಾಥ್ ಈ ಬಗ್ಗೆ ಜನ ಜಾಗೃತರಾಗಬೇಕು. ಲಾಕ್‌ಡೌನ್ ಆದರೆ ಜನ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರ ಬದಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಲಾಕ್‌ಡೌನ್ ಆಗುವುದರಿಂದ ಜೀವನ ಲಾಕ್ ಆಗಿಬಿಡುತ್ತದೆ. ದಿನದ ದುಡಿಮೆಯಲ್ಲಿ ಬದುಕುವವರಿಗೆ ತೊಂದರೆ ಆಗಬಾರದು ಎಂದು  ಹೇಳಿದರು. 

 ಹಲವು ದೇಶಗಳಿಗೆ ನಮ್ಮಲ್ಲಿಂದ ಲಸಿಕೆ ಕಳುಹಿಸಲಾಗಿದೆ. ಈಗ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಎಂಎಲ್‌ಸಿ ವಿಶ್ವನಾಥ್ ಹೇಳಿದರು. 

'ವಿಶ್ವನಾಥ್ ಪ್ರೆಸ್ ಮೀಟ್ ಕರೆದು BJP,ಕಾಂಗ್ರೆಸ್, ಜೆಡಿಎಸ್ ಯಾವ್ದೆಂದು ಹೇಳಲಿ' .
 
ಸರ್ಕಾರದಲ್ಲಿ ಒಮ್ಮೊಮ್ಮೆ ಒಂದೊಂದು ಕಾಲ ಬರುತ್ತದೆ. ಒಮ್ಮೆ ಮಳೆಗಾಲ, ಒಮ್ಮೆ ಚಳಿಗಾಲ, ಈಗ ರಾಜ್ಯದಲ್ಲಿ 'ಸೀಡಿ'ಕಾಲ ಶುರುವಾಗಿದೆ ಎಂದು ಹೇಳಿದರು. 

ಇನ್ನಷ್ಟು ಸೀಡಿ ಇರುವುದಾದರೆ ಹೊರಗೆ ಬಂದು ಬಿಡಲಿ. ಕರ್ನಾಟಕ ಸೀಡಿ ಕಾರ್ಪೋರೇಷನ್ ಆಗುತ್ತಿದೆ. ನಮ್ಮ ದಂಗೆಯ ಪ್ರತಿಫಲ ಈಗಿನ ಸರ್ಕಾರ. ಸೀಡಿ ವಿಚಾರಕ್ಕೂ, ಬಾಂಬೆ ತಂಡಕ್ಕೂ ಸಂಬಂಧವಿಲ್ಲ. ಬಾಂಬೆ ವಿಚಾರದಲ್ಲಿ ಪುಸ್ತಕ ಬರೆದಿದ್ದೇನೆ.  ವಸ್ತು ವಿಚಾರವನ್ನು ಪುಸ್ತಕದಲ್ಲಿ ಬರೆದಿದ್ದೇನೆ.  ಪುಸ್ತಕ ಸಿದ್ಧವಾಗಿದೆ, ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು.