'ವಾಗ್ದಾನ ಮರೆತು ಭ್ರಷ್ಟಾಚಾರದಲ್ಲಿ ತೊಡಗಿದ ಮೋದಿ ಸರ್ಕಾರ'
ಕಪ್ಪು ಹಣ ವಾಪಸ್ ತರುತ್ತೇವೆ, ಕೋಟಿ ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುತ್ತೇವೆ ಎಂದಿದ್ದ ಮೋದಿ| ಕೊರೋನಾ ಲಸಿಕೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದೀರಿ, ಲೈಂಗಿಕ ದೌರ್ಜನ್ಯ, ಮಹಿಳೆಯರಿಗೆ ಗೌರವ ತೋರಿಸಲಾದವರ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ಹತ್ತಿಕ್ಕಲಾಗುತ್ತಿದೆ ಎಂದು ಟೀಕಿಸಿದ ಹೆಚ್.ಕೆ.ಪಾಟೀಲ್|
ಸಿದ್ದಾಪುರ(ಅ.27): ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಮಾಡಿದ ವಾಗ್ದಾನಗಳನ್ನು ಮರೆತು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕ ಎಚ್.ಕೆ. ಪಾಟೀಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಪ್ಪು ಹಣವನ್ನು ವಾಪಸ್ ತರುತ್ತೇವೆ, ಕೋಟಿ ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುತ್ತೇವೆ ಎಂದಿದ್ದೀರಿ. ಈಗ ಕೊರೋನಾ ಕಾರಣ ಕೊಡುತ್ತಿದ್ದೀರಿ. ಕೊರೋನಾ ಬರುವ ಪೂರ್ವದಲ್ಲಿ ನೀವು ಸಾಧಿಸಿದ್ದಾದರೂ ಏನು? ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಎಂದು ಹೇಳಿದ್ದೀರಿ. ನೋಟು ಅಮಾನ್ಯೀಕರಣದಿಂದ ಬ್ಯಾಂಕಿಗೆ ಕೋಟಿ ಕೋಟಿ ಹಣ ಬಂದಿದೆ, ಬ್ಲಾಕ್ ಮನಿ ಎಲ್ಲಿ ಹೋಯಿತು? ಕೊರೋನಾ ಲಸಿಕೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದೀರಿ. ಲೈಂಗಿಕ ದೌರ್ಜನ್ಯ, ಮಹಿಳೆಯರಿಗೆ ಗೌರವ ತೋರಿಸಲಾದವರ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ಹತ್ತಿಕ್ಕಲಾಗುತ್ತಿದೆ ಎಂದು ಟೀಕಿಸಿದರು.
ಒಂದೊಂದು ಮತವೂ ಅಮೂಲ್ಯ, ಉಪಚುನಾವಣೆ ಸಂದರ್ಭ ಎಲೆಕ್ಷನ್ ಬಹಿಷ್ಕಾರ!
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗವತ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಕೆ.ಜಿ. ನಾಗರಾಜ್, ಆರ್.ಎಂ. ಹೆಗಡೆ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.