ಬಾಗಲಕೋಟೆ(ಜ.31): ಬಾದಾಮಿಯಲ್ಲಿ ಇವತ್ತು ಕೆಲಸಗಳು ಏನಾದ್ರೂ ನಡೆಯುತ್ತಿದ್ದರೆ, ಈ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಯೋಜನೆಗಳಲ್ಲ. ನಾನು 14 ತಿಂಗಳು ಕಾಲ ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಂತಹ ಯೋಜನೆಗಳಾಗಿವೆ ಎಂದು ಪರೋಕ್ಷವಾಗಿ ಬಾದಾಮಿಗೆ ಹೆಚ್ಚಿನ ಅನುದಾನ ನಾನು ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಬಾದಾಮಿ ಕ್ಷೇತ್ರಕ್ಕೆ ಸಾವಿರ ಇನ್ನೂರು ಕೋಟಿ ಯೋಜನೆ ತಂದಿದ್ದೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇಂದು(ಭಾನುವಾರ) ನಗರದಲ್ಲಿ ನಡೆಯುತ್ತಿರುವ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನೀವು ಕಡತ ತೆಗೆದು ನೋಡಿ. ನಾನು ಸುಳ್ಳು ಹೇಳೋದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. 

ಎಚ್ಡಿಕೆ ಚಿತ್ತ ಉತ್ತರದತ್ತ: ಜೆಡಿಎಸ್‌ ಸಮಾವೇಶಕ್ಕೆ ಬಾಗಲಕೋಟೆ ಸಜ್ಜು

ನಾನು ನಮ್ಮ  ಪಕ್ಷದ ಬಾದಾಮಿ ಅಭ್ಯರ್ಥಿ ಹನಮಂತಪ್ಪ ಅವರ ಪರವಾಗಿ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೆ, ಜನರ ಭಾವನೆಗಳ ಬೇಡಿಕೆಗಾಗಿ ನಾನು ಅನುದಾನ ಕೊಟ್ಟಿದ್ದೇನೆಂದು ಸಿದ್ದುಗೆ ಎಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ.