ಚಾಮರಾಜನಗರ: ರಾ.ಹೆ ಅಗಲೀಕರಣ, ರಸ್ತೆ ವಿಭಜಕ ಅಳವಡಿಸಲು ಮೋದಿಗೆ ಪತ್ರ ಬರೆದ ಶಾಸಕ
* ನಂಜನಗೂಡಿನಿಂದ ಬಂಡೀಪುರದ ಕೇರಳ ಗಡಿಯವರೆಗೂ ಡಬಲ್ ರೋಡ್ ಮಾಡಲು ಮನವಿ
* ಶಾಸಕರ ನಡೆಗೆ ಪರಿಸರವಾದಿಗಳ ಆಕ್ಷೇಪ
* ರಸ್ತೆ ಅಗಲೀಕರಣದಿಂದ ವನ್ಯ ಸಂಕುಲಕ್ಕೆ ಸಂಕಷ್ಟವೆಂದು ಪರಿಸರವಾದಿಗಳ ವಾದ
ವರದಿ - ಪುಟ್ಟರಾಜು. ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಜೂ.29): ಅದು ರಾಷ್ಟ್ರೀಯ ಉದ್ಯಾನವನ ಬಂಡೀಪುರ. ವನ್ಯ ಪ್ರಾಣಿಗಳಿಗೆ ಸಂಚಕಾರವುಂಟಾಗುತ್ತೆ ಅಂತಾ ಈಗಾಗಲೇ ರಾತ್ರಿ ಸಂಚಾರ ನಿರ್ಬಂಧ ಮಾಡಲಾಗಿದೆ. ಇದೀಗ ಗುಂಡ್ಲುಪೇಟೆ ಶಾಸಕರು ಪ್ರಧಾನಿ ಮೋದಿಗೆ ಪತ್ರ ಬರೆದು ಚತುಷ್ಪಥ ರಸ್ತೆ ನಿರ್ಮಿಸಿ, ಸುಗಮ ಸಂಚಾರಕ್ಕೆ ಡಿವೈಡರ್ ಅಳವಡಿಸಲು ಪತ್ರ ನೀಡಿದ್ದಾರೆ. ಇದರಿಂದ ವನ್ಯ ಸಂಕುಲಕ್ಕೆ ಸಂಕಷ್ಟ ಎದುರಾಗುತ್ತೆ. ಅಲ್ದೆ ಈ ಪತ್ರ ಎಲ್ಲೆಡೆ ವೈರಲ್ ಆಗಿದ್ದು ಶಾಸಕರ ನಡೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಅದು ರಾಷ್ಟ್ರೀಯ ಹೆದ್ದಾರಿ 766. ಮೈಸೂರಿನಿಂದ ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸದ್ಯ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಹೌದು ನಂಜನಗೂಡಿನಿಂದ ಗುಂಡ್ಲುಪೇಟೆ ವರೆಗಿನ ಹೆದ್ದಾರಿಯಲ್ಲಿ ತಿಂಗಳಿಗೆ ಸರಾಸರಿ 15 ಕ್ಕೂ ಅಪಘಾತಗಳು ನಡೆದು 5 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಪೊಲೀಸರು ಕೂಡ ಅಪಘಾತಕ್ಕೆ ರಸ್ತೆಯನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿರುವುದೇ ಅಪಘಾತಕ್ಕೆ ಕಾರಣ ಅಂತಾ ವರದಿ ಕೊಟ್ಟಿದ್ದರು. ಅಲ್ಲದೇ ಸಂಸದ ಶ್ರೀನಿವಾಸ್ ಪ್ರಸಾದ್ ಕೂಡ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದು ನಂಜನಗೂಡಅರಣ್ಯ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡಬಾರದು ಮತ್ತು ವಿಭಜಕ ಅಳವಡಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಅಗಲೀಕರಣ ಮಾಡುವುದರಿಂದ ವಾಹನಗಳು ಅತಿವೇಗದಿಂದ ಚಲಿಸುತ್ತವೆ. ಇದರಿಂದ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಬರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಅರಣ್ಯಪ್ರದೇಶದ ಒಳಗೆ ರಸ್ತೆ ಅಗಲೀಕರಣ ಮಾಡಬಾರದು. ಬೇಕಾದರೆ ಅರಣ್ಯಪ್ರದೇಶ ಪ್ರಾರಂಭವಾಗುವವರೆಗೂ ರಸ್ತೆ ಅಗಲೀಕರಣ ಮಾಡಲಿ ಎಂದು ಹೇಳುತ್ತಾರೆ.
ಚಾಮರಾಜನಗರದಲ್ಲಿ ಹುಲಿ ವೇಷದಲ್ಲಿ ಕುಣಿದ ಶಿವಣ್ಣ; ಅಪ್ಪುಗೆ ನಮನ
ಬಂಡೀಪುರ ಅರಣ್ಯದ ನಡುವೆ ಕೇರಳ ಹಾಗು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ನಂಜನಗೂಡಿನಿಂದ ಗುಂಡ್ಲುಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಕೃಷಿ ಉತ್ಪನ್ನ ಸಾಗಾಣೆಗೆ ರೈತರಿಗು ತೊಂದರೆಯಾಗುತ್ತಿದೆ. ಹಾಗಾಗಿ ಕೇರಳ ಹಾಗು ತಮಿಳುನಾಡು ಗಡಿಯವರೆಗು ಡಬಲ್ ರೋಡ್ ಮಾಡಿ ರಸ್ತೆ ವಿಭಜಕ ಅಳವಡಿಸಬೇಕೆಂದು ಶಾಸಕ ನಿರಂಜನಕುಮಾರ್ ಪ್ರಧಾನಿಗೆ ಮನವಿ ಮಾಡಿದ್ದು ಶಾಸಕರ ಪತ್ರಕ್ಕೆ ಪರಿಸರವಾದಿಗಳ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಾಡಿನಲ್ಲಿ ರಸ್ತೆ ಅಗಲೀಕರಣ ಹಾಗು ವಿಭಜಕ ಅಳವಡಿಸುವುದು ಅವೈಜ್ಞಾನಿಕ ಹುಲಿಗಳ ಆವಾಸಸ್ಥಾನವೂ ಆಗಿರುವ ಬಂಡೀಪುರ ಅರಣ್ಯದ ಜೀವವೈವಿಧ್ಯತೆಗೆ ಇದರಿಂದ ಧಕ್ಕೆಯಾಗಲಿದೆ ವನ್ಯಜೀವಿಗಳಿಗೆ ಕಂಟಕವಾಗಲಿದೆ,ಬೇಕಿದ್ದರೆ ಕಾಡಿನ ಹೊರಗೆ ರಸ್ತೆ ಅಗಲೀಕರಣ, ರಸ್ತೆವಿಭಜಕ ಅಳವಡಿಸಲಿ ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಎಂಎಸ್‌ಪಿ ಹೆಚ್ಚಿಸಲು ಒತ್ತಾಯ ಮಾಡಲಿ ಎಂದಿರುವ ಪರಿಸರವಾದಿಗಳು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪ್ರಧಾನಿ ಮೋದಿ ಗುಂಡ್ಲುಪೇಟೆ ಶಾಸಕರ ಮನವಿ ತಿರಸ್ಕರಿಸಲಿ ಅರಣ್ಯ ಹೆಚ್ಚಳದ ಬಗ್ಗೆ ಕರೆ ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿ ಸಹ ಇದಕ್ಕೆ ಆಸ್ಪದ ನೀಡಬಾರದು ಎಂದು ಆಗ್ರಹಿಸಿದ್ದಾರೆ
ಒಟ್ನಲ್ಲಿ ಒಂದೆಡೆ ರಸ್ತೆ ಅಗಲೀಕರಣ ಮಾಡಿ ಎಂದು ಶಾಸಕರು ಪತ್ರ ಬರೆದಿದ್ರೆ ಮತ್ತೊಂದೆಡೆ ಪರಿಸರವಾದಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಂಡೀಪುರದಲ್ಲಿ ರಸ್ತೆ ಆಗಲೀಕರಣ, ವಿಭಜಕ ಮಾಡಲೂ ಮುಂದಾದ್ರೆ ಪ್ರಾಣಿಗಳಿಗೆ ಕುತ್ತು ಗ್ಯಾರಂಟಿ.