ಗುಂಡ್ಲುಪೇಟೆ (ಅ.17): ಇಲ್ಲಿನ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ. 
ಪಕ್ಷೇತರ ಪುರಸಭೆ ಸದಸ್ಯ  ಪಿ ಶಶಿಧರ್ (ದೀಪು) ಬಿಜೆಪಿಯತ್ತ ಒಲವು ತೋರಿಸಿದ್ದಾರೆ ಎನ್ನಲಾಗಿದೆ. 

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದ ಹಿನ್ನೆಲೆಯ ಪುರಸಭೆಯ 8ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು. 

ಪುರಸಭೆ ಅಧ್ಯಕ್ಷ ಸ್ಥಾನ ಚುನಾವಣಾ ಪೂರ್ವದಲ್ಲಿ ಬಿಸಿಎಂ ಗೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷಗಾದಿಯ ಕನಸು ಹೊತ್ತು ಕಾಂಗ್ರೆಸ್ ಬಿಜೆಪಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸಿದ್ದರು. 

ಮೂವರು ಮುಖಂಡರು ಜೆಡಿಎಸ್‌ ಸೇರ್ಪಡೆ ...

ಈಗಾ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಟಿಕೆಟ್ ತಪ್ಪಿಸಲು ಕಾರಣರಾಗಿದ್ದರೆ ಎಂದು ಹೇಳುತ್ತಾ ಎರಡು ವರ್ಷಗಳಿಂದ ತಟಸ್ಥರಾಗಿ ಉಳಿದು ಈಗ ಬಿಜೆಪಿ ಪಾಳಯಕ್ಕೆ ಸೇರಲು ಮುಂದಾಗಿದ್ದಾರೆ. 

ಈ ಸಂಬಂಧ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಪಿ ಗಿರೀಶ್ ತಮ್ಮ ಬೆಂಬಲಿಗ ಸದಸ್ಯ ಶಶಿದರ್ (ದೀಪು) ಮನೆಗೆ ತೆರಳಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಶಶದರ್ ಕೆಲ ಮುಖಂಡರ ಮಾತಿಗೆ ಮಣಿದು ಟಿಕೆಟ್ ನೀಡಲಿಲ್ಲ ಎಂಬ ಬೇಸರ ಇದೆ ಎಂದರು. ಈಗ ಆಹ್ವಾನ ಬಿಜೆಪಿಯಿಂದ ಬಂದಿದ್ದು ಜನರ ಕೇಳಿ ಮುಂದಿನ ಹೆಜ್ಜೆ ಇಡುವೆ ಎಂದಿದ್ದಾರೆ.