Asianet Suvarna News Asianet Suvarna News

ಗುಲಾಬ್‌ ಚಂಡಮಾರುತ ಎಫೆಕ್ಟ್ : ಬೆಂಗಳೂರಲ್ಲಿ 2 ದಿನ ಮಳೆ

  • ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ‘ಗುಲಾಬ್‌’ ಚಂಡಮಾರುತದ ಪ್ರಭಾವ
  • ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ   ಸೆ.27ರವರೆಗೂ ಮಳೆ
gulab cyclone effect 2 days rain Bengaluru snr
Author
Bengaluru, First Published Sep 26, 2021, 7:40 AM IST
  • Facebook
  • Twitter
  • Whatsapp

 ಬೆಂಗಳೂರು (ಸೆ.26):  ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ‘ಗುಲಾಬ್‌’ ಚಂಡಮಾರುತದ (Gulab cyclone) ಪ್ರಭಾವದಿಂದ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಹಗುರದಿಂದ ಸಾಧಾರಣವಾಗಿ ಮಳೆ (rain) ಸುರಿದಿದೆ. ರಾತ್ರಿ ಗಾಳಿ ಸಹಿತ ಜೋರು ಮಳೆಗೆ ಸಂಜಯನಗರದಲ್ಲಿ ಒಂದು ಮರ ಉರುಳಿ ಬಿದ್ದಿದೆ.

‘ಗುಲಾಬ್‌’ ಚಂಡಮಾರುತ ಸದ್ಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಭಾಗದಲ್ಲಿದ್ದು, ಅದರ ಪ್ರಭಾವದಿಂದ ಬೆಂಗಳೂರಿನ (bengaluru) ವಿವಿಧ ಪ್ರದೇಶಗಳಲ್ಲಿ ರಾತ್ರಿ ಮಳೆ ಸುರಿಯಿತು. ಸೆ.27ರವರೆಗೂ ನಗರದಲ್ಲಿ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ನಗರದಲ್ಲಿ ರಾತ್ರಿ 8ರ ನಂತರ ವಿವಿಧ ಪ್ರದೇಶಗಳಲ್ಲಿ ತುಂತುರು ಮಳೆ ದಾಖಲಾಯಿತು. 

ಮಳೆಗೆ ಆಸರೆ ಹುಡುಕುತ್ತಿದ್ದ ನಾಯಿಗೆ ಕೊಡೆ ಹಿಡಿದ ಉದ್ಯೋಗಿ; ಹೃದಯಸ್ಪರ್ಶಿ ಘಟನೆ ಕೊಂಡಾಡಿದ ಟಾಟಾ!

ಕೆಲವೆಡೆ ತಡರಾತ್ರಿವರೆಗೂ ಸೋನೆ ಮಳೆ ಮುಂದುವರಿಯಿತು. ಹೊರಮಾವುನಲ್ಲಿ ಅಧಿಕ ಮಳೆ: ರಾತ್ರಿ 11ರ ವೇಳೆಗೆ ನಗರದ ಹೊರಮಾವು (2)ನಲ್ಲಿ ಅಧಿಕ ಮಳೆ 58ಮಿ.ಮೀ. ದಾಖಲಾಗಿದೆ. ಉಳಿದಂತೆ ರಾಜರಾಜೇಶ್ವರಿ ನಗರ (2) 20ಮಿ.ಮೀ. ಉತ್ತರಹಳ್ಳಿ 15, ಯಲಹಂಕ 13.5, ಸಾರಕ್ಕಿ 12.5, ಕೋರಮಂಗಲನಲ್ಲಿ 12 ಮಿ.ಮೀ ಮಳೆ ಸುರಿದಿದೆ.

 ಚಂಡಮಾರುತದಿಂದ ರಾಜ್ಯಕ್ಕಿಲ್ಲ ತೊಂದರೆ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ‘ಗುಲಾಬ್‌’ ಆಂಧ್ರಪ್ರದೇಶ, ತೆಲಂಗಾಣ ಮಾರ್ಗವಾಗಿ ಉತ್ತರ ಭಾರತದತ್ತ ಹಾದು ಹೋಗಲಿದ್ದು, ಇದರ ಪ್ರಭಾವ ರಾಜ್ಯದ (state) ಮೇಲೆ ಅಷ್ಟಾಗಿ ಉಂಟಾಗುವುದಿಲ್ಲ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡು ಶುಕ್ರವಾರ ಅದು ಚಂಡಮಾರುತವಾಗಿ ಬದಲಾಗಿದೆ. ಸದ್ಯ ಆಂಧ್ರಪ್ರದೇಶ, ತೆಲಂಗಾಣ ಕರಾವಳಿ ಭಾಗದಲ್ಲಿ ಗುಲಾಬ್‌ ಪ್ರಭಾವ ಬೀರಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಕೆಲವೆಡೆ ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಈ ‘ಗುಲಾಬ್‌’ಚೆಂಡಮಾರುತ ಪ್ರಭಾವದಿಂದ ರಾಜ್ಯದ ಹಲವೆಡೆ ಎರಡು ದಿನದಿಂದ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು ಮಳೆ ದಾಖಲಾಗಿದೆ. ಇದರ ಹೊರತು ಎಲ್ಲಿಯೂ ಅಷ್ಟಾಗಿ ಮಳೆ ಬಿದ್ದಿಲ್ಲ. ಉಳಿದಂತೆ ತಂಪು ಗಾಳಿ ಬೀಸುವಿಕೆಯ ಪ್ರಮಾಣ ತುಸು ಹೆಚ್ಚಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಹಾಸನ, ಬಳ್ಳಾರಿ, ಚಿತ್ರದುರ್ಗ ಹಾಗೂ ಉತ್ತರ ಒಳನಾಡಿನ ಬೀದರ್‌, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಿದೆ.

Follow Us:
Download App:
  • android
  • ios