ಮೈಸೂರು: ಜಿಟಿಡಿ ರಾಜಕೀಯ ನಿಲುವು ಸರಿ ಇಲ್ಲ ಎಂದ ಸಂಸದ

ಜಿ. ಟಿ. ದೇವೇಗೌಡ ಅವರ ರಾಜಕೀಯ ನಿಲುವು ಸರಿ ಇಲ್ಲ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.

 

GT Devegowdas political stand is not correct says mp v Srinivasa Prasad in mysore

ಮೈಸೂರು(ಡಿ.20): ಜಿ. ಟಿ. ದೇವೇಗೌಡ ಅವರ ರಾಜಕೀಯ ನಿಲುವು ಸರಿ ಇಲ್ಲ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಹುಣಸೂರು ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸ್, ಉಪಚುನಾವಣೆಯಲ್ಲಿ ಜಿ.ಟಿ.ದೇವೇಗೌಡರ ನಿಲುವು ಸರಿಯಲ್ಲ. ಒಂದು ಪಕ್ಷದಲ್ಲಿ ಶಾಸಕರಾಗಿ, ಸಚಿವರಾಗಿದ್ದವರು ಹೀಗೆ ಮಾಡಬಾರದಿತ್ತು‌. ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕಿತ್ತು. ಆದರೆ ಅವರು ತೆಗೆದುಕೊಂಡ ರಾಜಕೀಯ ನಿಲುವು ಸರಿಯಲ್ಲ ಎಂದು ಹೇಳಿದ್ದಾರೆ.

ಮುಸ್ಲಿಮರೇ ಕಾಂಗ್ರೆಸ್ ಮಾತು ಕೇಳೋದು ನಿಲ್ಲಿಸಿ ಎಂದ ಪ್ರತಾಪ್ ಸಿಂಹ

ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಯ್ದೆ ಜಾರಿ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿದೆ. ಯಾವುದೋ ಒಂದು ಧರ್ಮದ ವಿರುದ್ಧವಾಗಿ ತಿದ್ದುಪಡಿ ಮಾಡಿಲ್ಲ. ಮುಸ್ಲಿಂ ಸಮುದಾಯದವರು ಅತಿಹೆಚ್ಚು ಸಂಖ್ಯೆಯಲ್ಲಿ ಇರುವ ದೇಶಗಳಲ್ಲಿ ಭಾರತವು ಒಂದು. ನಮ್ಮಲ್ಲಿರುವ ಎಲ್ಲ ಮುಸಲ್ಮಾನರೂ ಭಾರತೀಯರು ಎಂಬುದು ಸ್ಪಷ್ಟವಾಗಿದೆ‌ ಎಂದಿದ್ದಾರೆ.

ಅನಗತ್ಯವಾಗಿ ಗೊಂದಲ ಮೂಡಿಸಲಾಗುತ್ತಿದೆ‌. ಕಾಂಗ್ರೆಸ್ ಸತತ ವೈಫಲ್ಯಗಳಿಂದ ಹತಾಶ ಸ್ಥಿತಿಗೆ ತಲುಪಿದೆ. ರಾಹುಲ್ ಗಾಂಧಿ ಹಾದಿಯಾಗಿ ರಾಷ್ಟಮಟ್ಟದಲ್ಲಿ ಪಕ್ಷ ಮುನ್ನಡೆಸುವ ನಾಯಕರೇ ಕಾಣಿಸುತ್ತಿಲ್ಲ. ಸಿಎಎ ವಿರೋಧ ಅಥವಾ ಪ್ರತಿಭಟನೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಶಾಂತಿ ಸುವ್ಯವಸ್ಥೆಯನ್ನು ಯಾರು ಹಾಳು ಮಾಡಬಾರದು ಎಂದು ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಕೃತಜ್ಞತಾ ಸಭೆಯಲ್ಲಿ ಸೋಲಿನ ಕಾರಣ ಬಿಚ್ಚಿಟ್ಟ ವಿಶ್ವನಾಥ್‌..!

Latest Videos
Follow Us:
Download App:
  • android
  • ios