ಮೈಸೂರು (ನ.02): ಮೈಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2020-2025ರ 5ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಶಾಸಕ ಜಿ.ಟಿ.ದೇವೇಗೌಡರ ಬೆಂಬಲಿಗರಾದ ಎಲ್ಲಾ 13 ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಿನಾಂಕ ನ.7ಕ್ಕೆ ನಿಗದಿಯಾಗಿದ್ದ ಚುನಾವಣೆಗೆ ಎ ವರ್ಗ ದಿಂದ 5 ಜನರು ಬಿ ವರ್ಗದಿಂದ 8 ಜನರು ಆಯ್ಕೆ ಯಾಗಬೇಕಿತ್ತು, ಎ ವರ್ಗದಿಂದ 8 ನಾಮಪತ್ರಗಳು ಮತ್ತು ಬಿ ವರ್ಗದಿಂದ 21 ನಾಮಪತ್ರ ಸಲ್ಲಿಕೆಯಾಗಿತ್ತು, ಎ ವರ್ಗದಲ್ಲಿ ನಾಮಪತ್ರ ಪರಿಶೀಲನೆ ವೇಳೆ 3 ಅರ್ಜಿಗಳು ತಿರಸ್ಕೃತವಾದ್ದರಿಂದ 5 ಜನರು ಅವಿರೋಧವಾಗಿ ಆಯ್ಕೆಯಾದರು. ಭಾನುವಾರ ಅರ್ಜಿ ವಾಪಸ್‌ ಪಡೆಯಲು ಕಡೆ ದಿನವಾಗಿತ್ತು, ಇಂದು 21 ಜನರ ಪೈಕಿ 13 ಜನರು ನಾಮಪತ್ರ ವಾಪಸ್‌ ಪಡೆದಿದ್ದರಿಂದ ಜಿ.ಟಿ. ದೇವೇಗೌಡರ ಬೆಂಬಲಿಗರು ಎಲ್ಲರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿರಾದಲ್ಲಿ ಕುಮಾರಸ್ವಾಮಿ ಅಬ್ಬರ, ಈ ಕಾರಣಕ್ಕೆ ಮತ ಕೊಡಿ ಎಂದ ಮಾಜಿ ಸಿಎಂ

ಎ ವರ್ಗದಿಂದ ದಾಸನಕೊಪ್ಪಲು ಹೊನ್ನಗಿರಿಗೌಡ, ಕಾಮನಕೆರೆಹುಂಡಿ ಎಚ್‌. ಗೋಪಾಲ್‌, ಹಾರೋಹಳ್ಳಿ ಎಂ.ಬಿ. ಮಂಜುನಾಥ್‌, ಚಿಕ್ಕಹಳ್ಳಿ ಎಂ. ಕುಮಾರ್‌, ಕಾಂಗ್ರೆಸ್‌ನ ಯರಗನಹಳ್ಳಿ ಅಣ್ಣಯ್ಯ, ಬಿ ತರಗತಿಯಿಂದ ಬೋಗಾದಿಯ ಚಂದ್ರಶೇಖರ್‌, ಕಾಮನಕೆರೆ ಹುಂಡಿ ಪ್ರಕಾಶ್‌, ಕುಂಬಾರಕೊಪ್ಪಲು ಲಲಿತಮ್ಮ, ಬೋಗಾದಿ ರುಕ್ಮಿಣಿ, ಜಟ್ಟಿಹುಂಡಿ ಯೋಗೇಶ್‌, ಮಾನಹಳ್ಳಿ ರಾಮಕೃಷ್ಣಚಾರಿ, ಗೋಪಾಲಪುರ ಅಂದಾನಿ ಜಯಪುರ ರೇಣುಕಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಭಿನಂದೆನೆಗಳು: ಅರೋಧವಾಗಿ ಆಯ್ಕೆ ಮಾಡಲು ಶ್ರಮಿಸಿದ ಶಾಸಕ ಜಿ.ಟಿ. ದೇವೇಗೌಡರಿಗೆ ಉಮೇದುದಾರಿಕೆಯನ್ನು ವಾಪಸ್‌ ಪಡೆದ ಎಲ್ಲರಿಗೂ ಮತ್ತು ಅವಿರೋಧ ಆಯ್ಕೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಎಂಸಿಡಿಸಿಸಿ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ತಿಳಿಸಿದರು.