GTD ಫೌಂಡೇಶನ್ ಅಡಿಯಲ್ಲಿ ಇಲ್ಲಿನ ದೇವಾಲಯಗಳಲ್ಲಿ 100ಕ್ಕೂ ಅಧಿಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನೇಕ ದೇವಾಲಯಗಳಲ್ಲಿ ನೂರಾರು ಜೋಡಿಗಳಿಗೆ ವಿವಾಹ ನೆರವೇರಿಸಲಾಗಿತ್ತು. ಬಳಿಕ ಅವರ ಪುತ್ರ ಕೂಡ ಸರಳ ವಿವಾಹವಾದರು
ಮೈಸೂರು (ಜ.31): ಆಡಂಬರದ ಜೀವನದಿಂದ ರೈತರು ಸಾಲಗಾರರಾಗುತ್ತಿದ್ದಾರೆಂದು ಸರಳ ಸಾಮೂಹಿಕ ವಿವಾಹವನ್ನು ಜಿ ಟಿ ದೇವೇಗೌಡರು ಆಯೋಜಿಸಲು ಯೋಚಿಸಿದ್ದ ವೇಳೆಯಲ್ಲಿ ಅವರ ಪುತ್ರ ಹರೀಶ್ ಗೌಡ ಫೌಂಡೇಶನ್ ಮೂಲಕ ಅದನ್ನು ಜಾರಿಗೊಳಿಸಿದರು.
ಇವರ ಫೌಂಡೇಶನ್ ಅಡಿಯಲ್ಲಿ ಇಲ್ಲಿನ ದೇವಾಲಯಗಳಲ್ಲಿ 100ಕ್ಕೂ ಅಧಿಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನೇಕ ದೇವಾಲಯಗಳಲ್ಲಿ ನೂರಾರು ಜೋಡಿಗಳಿಗೆ ವಿವಾಹ ನೆರವೇರಿಸಲಾಗಿತ್ತು.
ಹಸಿರು ತೋರಣಗಳಿಂದ ಅಲಂಕೃತವಾದ ಚಪ್ಪರದಲ್ಲಿ ಸರಳ ರೀತಿಯಲ್ಲಿ ಅನೇಕ ಇಲ್ಲಿನ ಜನರ ವಿವಾಹ ಮಾಡಲಾಗಿತ್ತು.
ಬಿಡುವವರು ಪಕ್ಷ ಬಿಡಲಿ : ಜಿಟಿಡಿಗೆ ಎಚ್ಡಿಕೆ ಟಾಂಗ್ ...
ಇದಾದ ಬಳಿಕ ಸಾಮಾನ್ಯರಂತೆ ತಾವು ಕೂಡ ಸರಳ ವಿವಾಹವಾಗಬೇಕು ಎಂದು ನಿರ್ಧರಿಸಿ ತಂದೆಯ ಮಾರ್ಗದರ್ಶನದಲ್ಲಿ ತಿರುಪತಿಯಲ್ಲಿ ಹರೀಶ್ ಗೌಡ ವರ್ಷಾರೊಂದಿಗೆ ಸರಳ ವಿವಾಹವಾಗಿ ಯುವಕರಿಗೆ ಮಾದರಿಯಾಗಿದ್ದರು.
ಇದೀಗ ಜಿಟಿಡಿ ಪುತ್ರ ಹರೀಶ್ ಗೌಡ ತಮ್ಮ 34 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ತಮ್ಮ ನಾಯಕನಿಗೆ ಶುಭ ಕೋರಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 31, 2021, 9:58 AM IST