ಕೊಡಗಿನಲ್ಲಿ ತೆರಿಗೆ ಕಟ್ಟದಿದ್ದರೆ ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವಂತಿಲ್ಲ?: ಜನರ ಆಕ್ರೋಶ
ರಾಜ್ಯ ಕಾಂಗ್ರೆಸ್ ಸರ್ಕಾರವೇನೋ ಮನೆಯ ಯಜಮಾನಿಗಾಗಿ ತನ್ನ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆಯ ಸೌಲಭ್ಯ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಯಾವುದೇ ಶುಲ್ಕ ಪಡೆಯದ ರೀತಿಯಲ್ಲಿ ಸರ್ಕಾರವೇ ಒಂದು ಅರ್ಜಿಗೆ ಇಂತಿಷ್ಟು ಎಂದು ಪಾವತಿಸುತ್ತಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.10): ರಾಜ್ಯ ಕಾಂಗ್ರೆಸ್ ಸರ್ಕಾರವೇನೋ ಮನೆಯ ಯಜಮಾನಿಗಾಗಿ ತನ್ನ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆಯ ಸೌಲಭ್ಯ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಯಾವುದೇ ಶುಲ್ಕ ಪಡೆಯದ ರೀತಿಯಲ್ಲಿ ಸರ್ಕಾರವೇ ಒಂದು ಅರ್ಜಿಗೆ ಇಂತಿಷ್ಟು ಎಂದು ಪಾವತಿಸುತ್ತಿದೆ. ಆದರೂ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಜನರು ತಮ್ಮ ಮನೆ ಮತ್ತು ನೀರಿನ ಕಂದಾಯಗಳನ್ನು ಫುಲ್ ಪಾವತಿಸಲೇಬೇಕು. ಇಲ್ಲದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವೇ ಇಲ್ಲ. ಪಂಚಾಯಿತಿಯ ಇಂತಹ ನಿರ್ಧಾರಕ್ಕೆ ಜನರು ಬೇಸತ್ತು ಕೊನೆಗೆ ಅಧಿಕಾರಿಗಳನ್ನು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಷ್ಟೇ ಏಕೆ ದಲಿತ ಸಂಘರ್ಷ ಸಮಿತಿ ಮುಖಂಡರ ನೇತೃತ್ವದಲ್ಲಿ ಪಂಚಾಯಿತಿ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಮನೆ ಮತ್ತು ನೀರಿನ ಕಂದಾಯಗಳನ್ನು ಕಟ್ಟಲೇಬೇಕಂತೆ. ಅರ್ಜಿ ಸಲ್ಲಿಸಲು ಪಂಚಾಯಿತಿಗೆ ತೆರಳಿದರೆ ಅಲ್ಲಿನ ಕರವಸೂಲಿಗಾರ ಹರೀಶ್ ಎಂಬುವರು ಮೊದಲು ಕಂದಾಯಗಳನ್ನು ಪಾವತಿಸಿ ನಂತರ ಅರ್ಜಿ ಸಲ್ಲಿಸಿ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಸ್ಪೆಂಡ್ ಆದ ಕಂದಾಯ ಅಧಿಕಾರಿಗೆ ಸರ್ಕಾರದಿಂದ ಬಡ್ತಿ ಗಿಫ್ಟ್!
ಕೇಳಿದರೆ ಕರವಸೂಲಿಗಾರ ಅರ್ಜಿ ಸಲ್ಲಿಸಲು ಹೋದವರನ್ನು ಅಷ್ಟೇ ಅಲ್ಲ, ಕೇಳಲು ಹೋದ ದಲಿತ ಸಂಘಟನೆಗಳ ಮುಖಂಡರಿಗೂ ನಿಂದಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಆವಾಸ್ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಆದರೆ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮನೆ ಕಂದಾಯವನ್ನು ಕಟ್ಟಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪಂಚಾಯಿತಿಗೆ ಹೋಗಿದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳೆಯರು ಇದುವರೆಗೆ ಪಂಚಾಯಿತಿಯಿಂದ ಕಂದಾಯ ಸಂಗ್ರಹಕ್ಕೆ ತಮ್ಮ ವಾರ್ಡಿನ ಅಂಗನವಾಡಿಗಳಿಗೆ ಬಂದು ಅಲ್ಲಿಂದಲೇ ಕಂದಾಯ ಸಂಗ್ರಹಿಸುತ್ತಿದ್ದರು.
ನಾವು ಯಾವುದೇ ಬಾಕಿ ಉಳಿಸಿಕೊಳ್ಳದೆ ಕಂದಾಯ ಕಟ್ಟಿದ್ದೇವೆ. ಆದರೆ ನೂತನ ಮನೆಗೂ ಕಂದಾಯ ಹಾಕಿದ್ದು, ಮನೆಗೆ ಕಾಮಗಾರಿಯ ಅನುದಾನ ಬಿಡುಗಡೆಗೂ ತಡೆಯೊಡ್ಡುತ್ತಿದ್ದಾರೆ ಎಂದಿದ್ದಾರೆ. ಎಷ್ಟೇ ಕೇಳಿದರೂ ಗೃಹಲಕ್ಷ್ಮಿ ಯೋಜನೆಗೆ ಪಂಚಾಯಿತಿಯಲ್ಲಿ ಅರ್ಜಿ ಸ್ವೀಕರಿಸದಿದ್ದರಿಂದ ನಾವು ಸೈಬರ್ ಕೇಂದ್ರಗಳಲ್ಲಿ ಹಣಕೊಟ್ಟು ಅರ್ಜಿ ಸಲ್ಲಿಸಿದ್ದೇವೆ ಎನ್ನುತ್ತಿದ್ದಾರೆ. ಆದರೆ ಪಿಡಿಓ ಶೋಭಾರಾಣಿ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದವರಿಗೆ ಕಂದಾಯ ಬಾಕಿ ಇರುವ ಬಗ್ಗೆ ತಿಳಿಸುತ್ತಿದ್ದೇವೆಯೇ ಹೊರತ್ತು, ಕಂದಾಯ ಪಾವತಿಸುವಂತೆ ಒತ್ತಡ ಹೇರುತ್ತಿಲ್ಲ.
ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ: ಸಿಇಓ ಪ್ರಸನ್ನ
ಕೆಲವರು ನಾಲ್ಕೈದು ಸಾವಿರ ಕಂದಾಯ ಉಳಿಸಿಕೊಂಡಿದ್ದಾರೆ, ಅದನ್ನು ಜನರಿಗೆ ತಿಳಿಸಿದ್ದೇವೆ ಎನ್ನುತ್ತಿದ್ದಾರೆ. ಈ ಕುರಿತು ನಮ್ಮ ಮೇಲಿನ ಅಧಿಕಾರಿಗಳು ಬಂದು ವಾರ್ನಿಂಗ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಇಒ ವರೆಗೆ ದೂರು ಹೋಗಿ, ಇಒ ಬಂದು ಪಂಚಾಯಿತಿ ಅಧಿಕಾರಿಗಳು ವಾರ್ನಿಂಗ್ ಮಾಡಿದರೂ ಪಂಚಾಯಿತಿ ಅಧಿಕಾರಿಗಳು ಕೇರ್ ಮಾಡಿಲ್ಲ. ಹೀಗಾಗಿ ಕಂದಾಯ ವಸೂಲಿ ಮಾಡುವುದಕ್ಕಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದವರಿಂದ ಇದೇ ಒಳ್ಳೆಯ ಸಮಯ ಅಂತ ಪಂಚಾಯಿತಿಯಿಂದ ಕಂದಾಯ ವಸೂಲಿ ಮುಂದಾಗಿರುವುದು ಜನರು ಆಕ್ರೋಶಗೊಳ್ಳುವಂತೆ ಮಾಡಿದೆ.