ಬಂಟ್ವಾಳ(ಮೇ 29): ಯುವತಿಗೆ ಅಶ್ಲೀಲ ಮೇಸೆಜ್‌ ಕಳುಹಿಸಿದ್ದನ್ನು ಪ್ರಶ್ನಿಸಿ ಯುವಕರ ತಂಡವೊಂದು ಬಾಲಕನಿಗೆ ಹಲ್ಲೆ ನಡೆಸಿದ ವಿಡಿಯೋವೊಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಬಾಲಕ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿ ಕಾಡುಮಠ ಶಾಲೆಯ ಮೈದಾನದಲ್ಲಿ ನಡೆದಿರುವ ಈ ಹಲ್ಲೆ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಹಲ್ಲೆಗೊಳಗಾದ ಬಾಲಕ (16) ತಡವಾಗಿ ಬಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕನ್ಯಾನ ದಿನೇಶ್‌ ಹಾಗೂ ಮೂವರರ ವಿರುದ್ಧ ಜೀವ ಬೆದರಿಕೆ, ಹಲ್ಲೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿರುವ ವಿಟ್ಲ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಂಟ್ವಾಳ ಪೊಲೀಸ್‌ ಉಪಾಧೀಕ್ಷಕರ ನೇತೃತ್ವದ ತಂಡವನ್ನು ರಚಿಸಿದ್ದಾರೆ.

ಎಣ್ಣೆಗಾಗಿ ಸ್ನೇಹಿತನ ಕೊಲೆ: ಸಾಕ್ಷಿ ಹೇಳ್ತಾನೆ ಅಂತ ಮತ್ತೊಬ್ಬ ಫ್ರೆಂಡ್‌ನ ಕೊಂದ ಪಾಪಿಗಳು!

ದಿನೇಶ್‌ ಎಂಬಾತ ಬಾಲಕನಿಗೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಬಾಲಕನ ಮನೆಮಂದಿಗೆ ಅವಾಚ್ಯವಾಗಿ ನಿಂದಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದ್ದು, ಆರೋಪಿ ದಿನೇಶ್‌ನ ಬೆಂಬಲಿಗನೇ ಈ ವಿಡಿಯೋವನ್ನು ಮಾಡಿದ್ದಾನೆ ಎನ್ನಲಾಗಿದೆ.