Asianet Suvarna News Asianet Suvarna News

ಭಾರೀ ಮಳೆ : ಕೋಡಿ ಹರಿದು ಗುಡಿಬಂಡೆ ಮಾರ್ಗ ಬಂದ್‌

  • ಶನಿವಾರ ರಾತ್ರಿ ಎಡಬಿಡದೆ ಸುರಿದ ಮಳೆಯಿಂದಾಗಿ ಗುಡಿಬಂಡೆ ಅಮಾನಿಬೈರಸಾಗರ ಕೆರೆ ಕೋಡಿ  ಬಿದ್ದಿದೆ
  • 3 ಅಡಿಗೂ ಹೆಚ್ಚಿನ ಮಟ್ಟದಲ್ಲಿ ಕೋಡಿ ಹರಿಯುತ್ತಿದ್ದು, ಪಟ್ಟಣಕ್ಕೆ ಆಗಮಿಸಲು ಹಾಗೂ ಬೇರೆ ಪ್ರದೇಶಗಳಿಗೆ ಹೋಗಲು ಸಾರ್ವಜನಿಕರ ಪರದಾಟ
Gudibande town heavily affected by Rain  snr
Author
Bengaluru, First Published Oct 25, 2021, 12:22 PM IST
  • Facebook
  • Twitter
  • Whatsapp

ಗುಡಿಬಂಡೆ (ಅ.25):  ಎಡಬಿಡದೆ ಸುರಿದ ಮಳೆಯಿಂದಾಗಿ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ (lake) ಕೋಡಿ 3 ಅಡಿಗೂ ಹೆಚ್ಚಿನ ಮಟ್ಟದಲ್ಲಿ ಕೋಡಿ ಹರಿಯುತ್ತಿದ್ದು, ಪಟ್ಟಣಕ್ಕೆ ಆಗಮಿಸಲು ಹಾಗೂ ಬೇರೆ ಪ್ರದೇಶಗಳಿಗೆ ಹೋಗಲು ಸಾರ್ವಜನಿಕರು (People) ಪರದಾಡುವಂತಾಗಿದೆ.

ಮಳೆಯಿಂದಾಗಿ (Rain) ಗುಡಿಬಂಡೆ (Gudibande) ಕೆರೆಗೆ ನೀರಿನ ಹರಿವು ಹೆಚ್ಚಾಗಿದ್ದು, ವಾಹನಗಳು (Vehicle) ಸಂಚರಿಸಲು ಕಷ್ಟಕರವಾಗಿದೆ. ಭಾನುವಾರ ಬೆಳಿಗ್ಗೆ ಆ್ಯಂಬುಲೆನ್ಸ್‌ (Ambulance) ಕೆರೆ ಕೋಡಿಯ ನೀರಿನಲ್ಲಿ ಸಿಕ್ಕಿಹಾಕಿಕೊಂಡಿತ್ತು.

ಕೋರ್ಟ್‌ (Court) ಬಳಿಯೇ ಬ್ಯಾರಿಕೇಡ್‌: ಇನ್ನೂ ದ್ವಿಚಕ್ರ ವಾಹನಗಳು ಕೋಡಿಯ ನೀರಿನಲ್ಲಿ ಸಂಚರಿಸಲು ಕಷ್ಟಸಾಧ್ಯವಾಗಿರುವುದರಿಂದ ತಾಲೂಕು ಆಡಳಿತ ಹಾಗೂ ಪೊಲೀಸ್‌ (Police) ಇಲಾಖೆಯವರು ಜೆಎಂಎಫ್‌ಸಿ (JMFC) ನ್ಯಾಯಾಲಯದ ಬಳಿ ಬ್ಯಾರಿಕೇಡ್‌ ಅಳವಡಿಸಿ ದ್ವಿಚಕ್ರ ವಾಹನಗಳು ಹೋಗದಂತೆ ನಿರ್ಬಂಧ ಹೇರಿದ್ದಾರೆ.

ಗುಡಿಬಂಡೆಯಿಂದ ಚಿಕ್ಕಬಳ್ಳಾಪುರಕ್ಕೆ (Chikkaballapura) ಹೋಗಲು ಅಥವಾ ಚಿಕ್ಕಬಳ್ಳಾಪುರದಿಂದ ಗುಡಿಬಂಡೆಗೆ ಬರಲು ಇರುವುದು ಒಂದೇ ಮಾರ್ಗ, ಅದು ಗುಡಿಬಂಡೆ ಕೆರೆಯ ಏರಿಯ ಮೇಲೆ. ಕೋಡಿ ಮೂರು ಅಡಿಗೂ ಹೆಚ್ಚಾಗಿ ಹರಿಯುತ್ತಿರುವುದರಿಂದ ಹೊರವಲಯದ ಊರುಗಳಿಗೆ ತೆರಳಲು ವಾಹನಸವಾರರು ಪರದಾಡುವಂತಾಯಿತು.

ಹಂಪಸಂದ್ರ ಗ್ರಾಮದ ಬಳಿಯೂ ಸಹ ಸುಮಾರು 3 ಅಡಿ ನೀರು ರಸ್ತೆಯ ಮೇಲೆಯೆ ಹರಿಯುತ್ತಿರುವುದರಿಂದ ಗುಡಿಬಂಡೆಯಿಂದ ಬಾಗೇಪಲ್ಲಿ ಕಡೆಗಾಗಲೀ ಅಥವಾ ಬಾಗೇಪಲ್ಲಿ ಕಡೆಯಿಂದ ಗುಡಿಬಂಡೆಗಾಗಲಿ ಬರಲು ಕಷ್ಟಕರವಾಗಿತ್ತು.

ಲಕ್ಷಾಂತರ ರೂಪಾಯಿಗಳ ಬೆಳೆ ನಷ್ಟ

ಇನ್ನೂ ಮಳೆಯಿಂದಾಗಿ ರೈತನ ಪಾಡು ಸಹ ಹೇಳತೀರದಾಗಿದೆ. ಶನಿವಾರ ರಾತ್ರಿ ಬಿದ್ದ ಮಳೆಯಿಂದಾಗಿ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಬೀನ್ಸ್‌, ಟಮೋಟ, ಆಲೂಗಡ್ಡೆ ಸೇರಿದಂತೆ ಹಲವು ಬೆಳೆಗಳು ಮಳೆಯಿಂದಾಗಿ ನಷ್ಟಆಗಿದ್ದು, ಫಸಲು ಕೈಗೆ ಬರುವ ವೇಳೆಯಲ್ಲಿ ಅನ್ನದಾತನ ಹೊಟ್ಟೆಮೇಲೆ ಹೊಡೆದಂತಾಗಿದೆ.

ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ

 

 ಜಿಲ್ಲೆಯಲ್ಲಿ ಬೀಳುತ್ತಿರುವ ವರ್ಷಧಾರೆ ಹಲವು ಗ್ರಾಮಗಳಿಗೆ ಕಲ್ಪಿಸಿದ್ದ ರಸ್ತೆ, ಸೇತುವೆ ಕಡಿದು ಜಲ ದಿಗ್ಬಂಧನ ವಿಧಿಸಿತ್ತು.  ಶಿಡ್ಲಘಟ್ಟ(Shidlaghatta) ತಾಲೂಕಿನ ಅರಿಕೆರೆ ಸೇರಿದಂತೆ ಕೆಲ ಗ್ರಾಮದ (Village) ಜನತೆ  ಮಳೆಯ (Rain) ಕಾರಣವಾಗಿ ಜಲ ದಿಗ್ಬಂಧನಕ್ಕೆ ಒಳಗಾಗಿ ಗ್ರಾಮಕ್ಕೆ ಇರುವ ಏಕೈಕ ದಾರಿಯ ನಡುವೆ ಇರುವ ಪರಸುಬಂದಿ ತುಂಬಿಹರಿಯುತ್ತಿದ್ದು ಊರೊಳಗೆ ಬರಲು ಶಾಲಾ ಮಕ್ಕಳು (School Children) ಕೂಲಿ ಕಾರ್ಮಿಕರು ಪರದಾಡುವಂತಾಗಿತ್ತು.

ಬೆಳೆ ಹಾನಿ : ಅಧಿಕಾರಿಗಳಿಂದ ಸುಳ್ಳು ಮಾಹಿತಿ-ರೈತರ ಆಕ್ರೋಶ

ಜನರ ಪರದಾಟ ನೋಡಲಾರದೆ ದೈರ್ಯಶಾಲಿ ಯುವಕರು ಮಾನವ ಸರಪಳಿಯ (Human chain) ನೆರವಿನಿಂದ ಮಕ್ಕಳು, ಕೂಲಿ ಕಾರ್ಮಿಕರನ್ನು ದಡ ಸೇರಿಸಿದ್ದಾರೆ. ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗುವುದು ನಡೆದೇ ಇದ್ದು ಸುರಕ್ಷಿತ ಸೇತುವೆಗಾಗಿ ಊರಿನ ಜನತೆ ಸರಕಾರವನ್ನು ಆಗ್ರಹಿಸಿದ್ದರು.

Follow Us:
Download App:
  • android
  • ios