ಮೈಸೂರು (ಡಿ.09):  ಮೈಸೂರಿನಲ್ಲಿ ವಧುವಿಗೆ ಕೈಕೊಟ್ಟು ವರ ಪರಾರಿಯಾಗಿದ್ದಾನೆ.  ತಾನು ಪ್ರೀತಿಸಿದ ಹುಡುಗಿಯೊಂದಿಗೆ ವರ ಕಾಲ್ಕಿತ್ತಿದ್ದಾನೆ.  ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ಸುಣ್ಣದ ಕೇರಿಯವನಾದ ವರ ಉಮೇಶ್ ಪ್ರೀತಿಸಿದ ಹುಡುಗಿಯೊಂದಿಗೆ ಈ ಮದುವೆ ಇಷ್ಟವಿಲ್ಲದೆ ತೆರಳಿದ್ದಾನೆ.

"

ಮದುವೆಗಳೇ ಖದೀಮರ ಟಾರ್ಗೆಟ್‌: ಸ್ವಲ್ಪ ಯಾಮಾರಿದ್ರು ಚಿನ್ನದ ಸರ ಕಿತ್ತು ಪರಾರಿ...! ..

ಇಂದು ವಿವಾಹ ನಡೆಯಬೇಕಿದ್ದು, ವರ ವಧುವಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಮದುವೆಗೆ ಇನ್ನೆರಡು ದಿನ ಬಾಕಿ ಇರುವಾಗಲೇ ಆತ ಪ್ರೀತಿಸಿದ ಹುಡುಗಿಯೊಂದಿಗೆ ತೆರಳಿದ್ದಾನೆ.

ವರ ಪರಾರಿಯಾಗಿದ್ದರಿಂದ ಹುಡುಗಿಯ  ಕುಟುಂಬದವರು ಕಂಗಾಲಾಗಿದ್ದಾರೆ.  

ಇದೀಗ ವಧುವಿನ ಪೋಷಕರರಿಂದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.