karnataka Highway : ಶೀಘ್ರ ಶಿರಸಿ-ಕುಮಟಾ ನಡುವೆ ರಸ್ತೆ ನಿರ್ಮಾಣ

  • ಶಿರಸಿ-ಕುಮಟಾ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಎಲ್ಲ ತೊಡಕುಗಳ ನಿವಾರಣೆ
  • ತ್ವರಿತ ಕಾಮಗಾರಿ ನಡೆಸಲು ಸೂಚಿಸಲಾಗುವುದು ಎಂದ ಜಿಲ್ಲಾಧಿಕಾರಿ 
Green Signal for Sirsi  Kumata Highway project snr

 ಶಿರಸಿ (ಜ.04):  ಶಿರಸಿ - ಕುಮಟಾ (Sirsi - Kumta)  ರಸ್ತೆ ನಿರ್ಮಾಣಕ್ಕೆ ಈಗಾಗಲೇ ಎಲ್ಲ ತೊಡಕುಗಳ ನಿವಾರಣೆಯಾಗಿದೆ. ಹೀಗಾಗಿ, ತ್ವರಿತ ಕಾಮಗಾರಿ ನಡೆಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ (Mullai mugilan)  ಹೇಳಿದರು. ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಶಿರಸಿ - ಕುಮಟಾ ರಸ್ತೆಗೆ (Road) ಈ ಹಿಂದೆ ಪರಿಸರ ವಿಚಾರದಲ್ಲಿ ತಡೆಯಾಜ್ಞೆ ಇತ್ತು. ಅದು ಈಗ ತೆರವುಗೊಂಡಿದೆ. ಹೀಗಾಗಿ ಕಾಮಗಾರಿ ಕೈಗೊಳ್ಳಲು ತೊಡಕು ಇಲ್ಲ. ಅದೇ ರೀತಿ ಹುತ್ಗಾರ ಬಳಿ ಕೋಳಿ ಫಾರಂ ನೀರು ಸುತ್ತಲಿನ ಪರಿಸರ ಕಲುಷಿತಗೊಳಿಸುತ್ತಿರುವ ಬಗ್ಗೆ ಸಹ ಆಪಾದನೆಗಳು ಕೇಳಿ ಬಂದಿವೆ. ತ್ಯಾಜ್ಯ ವಿಲೇವಾರಿ ನಿಯಮ ಪಾಲಿಸದೆ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ. ವಿದ್ಯುತ್‌ (electricity) ಪರವಾನಗಿ ರದ್ದುಪಡಿಸಲೂ ಅವಕಾಶವಿದೆ ಎಂದರು.

ಶಿರಸಿ (Sirsi)  ನಗರದ ನೀರನ್ನು ವಿದ್ಯಾನಗರ, ಮರಾಠಿಕೊಪ್ಪ ಮೂಲಕ ಪುಟ್ಟನ ಮನೆ ಸೇರಿದಂತೆ ಹಳ್ಳಿ ಭಾಗಕ್ಕೆ ಹರಿಸುವ ಯೋಜನೆಯ ವಿರುದ್ಧ ಸ್ಥಳೀಯರು ದೂರಿದರು. ವಿದ್ಯಾನಗರದಲ್ಲಿ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಪರ್ಯಾಯ ಕ್ರಮದ ಭರವಸೆ ನೀಡಿದರು.  ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್‌ ಎಂ.ಆರ್‌. ಕುಲಕರ್ಣಿ, ಪೌರಾಯುಕ್ತ ಕೇಶವ ಚೌಗುಲೆ, ಪಿಡಿಬ್ಲ್ಯೂಡಿ ಎಇಇ ಉಮೇಶ ನಾಯ್ಕ ಇದ್ದರು.

ಪ್ರತಿದಿನ 40 ಕಿ.ಮೀ ರಸ್ತೆ  : 

 ಭಾರತದ ಹೆದ್ದಾರಿಗಳು(National Highway) ಅತೀವವಾಗಿ ಬದಲಾಗಿದೆ. ಹಲವು ಹೊಸ ಹೆದ್ದಾರಿಗಳು ನಿರ್ಮಾಣವಾಗಿದೆ. ಹಳೇ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಫ್ಲೈವರ್, ಚತುಷ್ಪತ ರಸ್ತೆ, ಸುರಂಗ ಮಾರ್ಗ, ವೈಲ್ಡ್ ಎನಿಮಲ್ ಕಾರಿಡಾರ್ ಸೇರಿದಂತೆ ವಿದೇಶದಲ್ಲಿ ಹೆದ್ದಾರಿ ನಿರ್ಮಾಣ ಮಾಡುವಾಗ ತೆಗೆದುಕೊಳ್ಳುವ ಮುತುವರ್ಜಿ ಭಾರತದಲ್ಲೂ ಕಾಣಿಸುತ್ತಿದೆ. ಇದರ ಹಿಂದೆ ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಶ್ರಮವಿದೆ. ಇವರ ಶ್ರಮದಿಂದ 2021ರಲ್ಲಿ ದಾಖಲೆಯ ಹೆದ್ದಾರಿ ನಿರ್ಮಾಣವಾಗಿದೆ. ಸರಾಸರಿ ಪ್ರಕಾರ ಪ್ರತಿ ದಿನ 40 ಕಿಲೋಮೀಟರ್ ಹೆದ್ದಾರಿ ನಿರ್ಮಾಣವಾಗಿದೆ.

2021ರಲ್ಲಿ ದೇಶಕ್ಕೆ ಅತೀ ದೊಡ್ಡ ಹೊಡೆತ ನೀಡಿದ್ದು ಕೊರೋನಾ 2ನೇ ಅಲೆ(Coronavirus 2nd wave). ಲಾಕ್‌ಡೌನ್ ಸೇರಿದಂತ ಹಲವು ನಿರ್ಬಂಧಗಳು, ಆರ್ಥಿಕ ಹೊಡೆತ, ಆರೋಗ್ಯ ವ್ಯವಸ್ಥೆ ಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿತ್ತು. ಆದರೆ ಹೆದ್ದಾರಿ ನಿರ್ಮಾಣದಲ್ಲಿ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ದೇಶದಲ್ಲಿ ಮೂಭೂತ ಸೌಕರ್ಯ ಹೆಚ್ಚಿಸಲು, ಅದರಲ್ಲೂ ಪ್ರಮುಖವಾಗಿ ಸಾರಿಗೆ ಸಂಪರ್ಕ ಒದರಿಸುವ ರಸ್ತೆಗಳ ನಿರ್ಮಾಣದಲ್ಲಿ ನಿತಿನ್ ಗಡ್ಕರಿ ಹೊಸ ಅಧ್ಯಾಯ ಬರೆದಿದ್ದಾರೆ. 

ಕೊರೋನಾ 2ನೇ ಅಲೆ ಸಂದರ್ಭದಲ್ಲೂ ಹೆದ್ದಾರಿ ನಿರ್ಮಾಣ ಕಾರ್ಯ ನಿಂತಿಲ್ಲ. ಕಾರ್ಮಿಕರಿಗೆ ಲಸಿಕೆ, ಅವರ ಆರೋಗ್ಯ ತಪಾಸಣೆ, ವೈದ್ಯಕೀಯ ನೆರವು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಿ ಲಾಕ್‌ಡೌನ್ ಸಮಯದಲ್ಲೂ ಕಾಮಾಗಾರಿ ನಿಲ್ಲದಂತೆ ನೋಡಿಕೊಂಡಿದ್ದಾರೆ. ಗಡ್ಕರಿ ಹೆದ್ದಾರಿ ನಿರ್ಮಾಣಕ್ಕಿಂತಲೂ ಮೊದಲು ಹಲವು ಹೆದ್ದಾರಿಗಳಲ್ಲಿ 100 ಕಿಲೋಮೀಟರ್ ಪ್ರಯಾಣಿಸಲು ಅದೆಷ್ಟೇ ಉತ್ತಮ ಕಾರಾಗಿದ್ದರು 4 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಇದೀಗ 4 ಗಂಟೆ ಸಮಯಲ್ಲಿ 500ಕ್ಕೂ ಹೆಚ್ಚಿನ ಕಿಲೋಮೀಟರ್ ಪ್ರಯಾಣ ಮಾಡಬಲ್ಲ ರಸ್ತೆಗಳು ನಿರ್ಮಾಣವಾಗಿದೆ.

ಗಡ್ಕರಿ ಕೈಗೆತ್ತಿಕೊಂಡ ಹಲವು ಯೋಜನೆಗಳಲ್ಲಿ ವಿಶೇಷ ಹಾಗೂ ಅತೀ ಸವಾಲಿನ ಯೋಜನೆ ಮುಂಬೈ ದೆಹಲಿ ಎಕ್ಸ್‌ಪ್ರೆಸ್‌ವೇ. 1,380 ಕಿಲೋಮೀಟರ್ ಉದ್ದರ ಹೆದ್ದಾರಿ 8 ಪಥಗಳನ್ನು ಹೊಂದಿದೆ. ಈ ಹೆದ್ದಾರಿ ದೆಹಲಿ, ಹರ್ಯಾಣ, ರಾಜಸ್ಥಾನ, ಹಾಗೂ ಗುಜರಾತ್ ರಾಜ್ಯಗಳಲ್ಲಿ ಹಾದುಹೋಗಲಿದೆ. ಈ ಪ್ರಯಾಣಕ್ಕೆ 24 ಗಂಟೆ ತೆಗೆದುಕೊಳ್ಳುತ್ತಿತ್ತು. ಆದರೆ ನೂತನ ಎಕ್ಸ್‌ಪ್ರೆಸ್‌ವೇ ಮೂಲಕ 13 ಗಂಟೆಯಲ್ಲಿ ದೆಹಲಿಯಿಂದ ಮುಂಬೈ ತಲುಪಲು ಸಾಧ್ಯವಿದೆ. ಇದರ ಮೊತ್ತ ಬರೋಬ್ಬರಿ 98,000 ಕೋಟಿ ರೂಪಾಯಿ. 2023ರ ವೇಳೆಗೆ ಈ ಹೆದ್ದಾರಿ ಪೂರ್ಣಗೊಳ್ಳಲಿದೆ. 

ಮೇಡ್ ಇನ್ ಚೀನಾ ಕಾರನ್ನು ಭಾರತಕ್ಕೆ ತರಬೇಡಿ; ಟೆಸ್ಲಾಗೆ ನಿತಿನ್ ಗಡ್ಕರಿ ಸೂಚನೆ!

ಹೆದ್ದಾರಿ ಜೊತೆಗೆ ಟೋಲ್‌ಗೇಟ್ ಬಳಿ ಪಾವತಿಸಿ ಪ್ರಯಾಣಿಸುವ ಹಳೇ ಪದ್ದತಿಯನ್ನ ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಿದ್ದಾರೆ. ಎಲ್ಲಾ ವಾಹನಕ್ಕೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಇದರಿಂದ ಯಾವ ವಾಹನವೂ ಟೋಲ್ ಬಳಿ ನಿಲ್ಲಿಸಿ ಸಮಯ ಹಾಳು ಮಾಡುವ ಪರಿಸ್ಥಿ ಇಲ್ಲ. ಹೆದ್ದಾರಿ ನಿರ್ಮಾಣದ ವೇಳೆಯೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಅತ್ಯುತ್ತಮ ದರ್ಜೆ ರಸ್ತೆಗಳು ಭಾರತದಲ್ಲಿ ನಿರ್ಮಾಣವಾಗಿದೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ 5 ಲಕ್ಷ ಕೋಟಿ ರೂಪಾಯಿ ಹೆದ್ದಾರಿ ಹಾಗೂ ಇತರ ರಸ್ತೆ ನಿರ್ಮಾಣದ ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಈ ರಸ್ತೆಗಳು ಅಮೆರಿಕ ರೀತಿಯ ರಸ್ತೆಗಳಾಗಲಿವೆ. ಅದೇ ರೀತಿ ಅಂತಾರಾಷ್ಟ್ರೀಯ ಮಟ್ಟದ ರಸ್ತೆಗಳನ್ನು ನಿರ್ಮಾಣಮಾಡುವುದಾಗಿ ಗಡ್ಕರಿ ಹೇಳಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಗಡ್ಕರಿ ಈ ರೀತಿಯ ಅತ್ಯುತ್ತಮ ದರ್ಜೆಯ ರಸ್ತೆಗಳನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಲಿದ್ದಾರೆ. 

Latest Videos
Follow Us:
Download App:
  • android
  • ios