ಲಾಕ್‌ಡೌನ್‌: ರೆಡ್‌ ಝೋನ್‌ನಲ್ಲಿಯೇ ನಡೆದ ಅದ್ಧೂರಿ ರಥೋತ್ಸವ

ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಸೋಂಕಿನ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿದ್ದರೂ ಅದನ್ನು ಲೆಕ್ಕಿಸದ ಚಿತ್ತಾಪುರ ತಾಲೂಕಿನ ರಾವೂರ್‌ ಜನರು ಸಿದ್ಧಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆದ್ದಾರೆ.

 

Grand Temple festival in Kalaburgi in midst of Lockdown

ಕಲಬುರಗಿ(ಏ.17): ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಸೋಂಕಿನ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿದ್ದರೂ ಅದನ್ನು ಲೆಕ್ಕಿಸದ ಚಿತ್ತಾಪುರ ತಾಲೂಕಿನ ರಾವೂರ್‌ ಜನರು ಸಿದ್ಧಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆದ್ದಾರೆ.

ಇಲ್ಲಿ ಭಾಗವಹಿಸಿದ್ದ 200 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ಜಿಲ್ಲೆಯನ್ನು ರೆಡ್‌ಜೋನ್‌ ಎಂದು ಗುರುತಿಸಿದ್ದರೂ ಕ್ಯಾರೆ ಎನ್ನದೇ ನಿಷೇಧಾಜ್ಞೆ ನಡುವೆ ಜನರು ಜಾತ್ರೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದ್ದಾರೆ.

ಬೈಕಲ್ಲಿ 430 ಕಿ.ಮೀ. ಹೋಗಿ ಕ್ಯಾನ್ಸರ್‌ ಔಷಧ ಕೊಟ್ಟು ಮಾನವೀಯತೆ ಮೆರೆದ ಪೊಲೀಸ್‌..!

ಬುಧವಾರ ಸಂಜೆ ಮಠದ ಒಳಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಗಿತ್ತು. ಗುರುವಾರ ಸಂಜೆ ನಡೆಯಬೇಕಿದ್ದ ರಥೋತ್ಸವವನ್ನು ಬೆಳಗ್ಗೆಯೇ ನಡೆಸಲು ಭಕ್ತರು ಮುಂದಾದಾಗ ಲಾಕ್‌ಡೌನ್‌ ನಿಯಮ ಉಲ್ಲಂಘನೆಯಾಗಿದೆ.

ದೇಶದಲ್ಲೇ ಮೊದಲ ಬಾರಿ ಆನ್‌ಲೈನ್‌ನಲ್ಲಿ BBMP ಬಜೆಟ್

ಈ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ 200 ಮಂದಿ ವಿರುದ್ಧ ವಾಡಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಕರ್ತವ್ಯ ಲೋಪದ ಮೇಲೆ ಪಿಎಸ್‌ಐ ವಿಜಯಕುಮಾರ್‌ ಬಾವಗಿ ಅವರನ್ನು ಅಮಾನತು ಮಾಡಿ ಎಸ್ಪಿ ಯಡಾ ಮಾರ್ಟಿನ್‌ ಆದೇಶಿಸಿದ್ದಾರೆ.

Latest Videos
Follow Us:
Download App:
  • android
  • ios