ಇ ಖಾತೆ ಮಾಡಿಕೊಡುವಲ್ಲಿ ಗ್ರಾ.ಪಂ ಪಿಡಿಒ ಮೀನಾಮೇಷ : ವ್ಯಕ್ತಿ ಅಳಲು
ವಾಸಿಸಲು ನೆಲೆ ಇಲ್ಲದ ಕಾರಣ ನನ್ನ ಹೆಸರಿನ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದು, ಈ ಸಂಬಂಧ ಅರ್ಜಿ ಸಲ್ಲಿಸಿದ್ದ ಮೇರೆಗೆ, ಸರ್ಕಾರದ ಅಕ್ರಮ ಸಕ್ರಮ ಯೋಜನೆಡಿ ತಹಸೀಲ್ದಾರ್ ರಿಂದ ಮನೆ ಸುತ್ತಳತೆಯ ಹಕ್ಕು ಪತ್ರ ಮಂಜೂರಾತಿಯಾಗಿದೆ. ಈ ಸಂಬಂಧ ಅಗತ್ಯ ದಾಖಲೆ ಸಲ್ಲಿಸಿ ಮೂರು ತಿಂಗಳು ಕಳೆದರೂ ಮನೆ ಸುತ್ತಳತೆಯ ಇ.ಖಾತೆ ಮಾಡಿಕೊಡುವಲ್ಲಿ ತಾಲೂಕಿನ ಗುಜ್ಜನಡು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿ ಸತಾಯಿಸುತ್ತಿದ್ದಾರೆಂದು ಪಲಾನುಭವಿ ಕೋಣನಕುರಿಕೆ ಗ್ರಾಮದ ಈರಣ್ಣ ಆಳಲು ತೋಡಿಕೊಂಡಿದ್ದಾರೆ.
ಪಾವಗಡ: ವಾಸಿಸಲು ನೆಲೆ ಇಲ್ಲದ ಕಾರಣ ನನ್ನ ಹೆಸರಿನ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದು, ಈ ಸಂಬಂಧ ಅರ್ಜಿ ಸಲ್ಲಿಸಿದ್ದ ಮೇರೆಗೆ, ಸರ್ಕಾರದ ಅಕ್ರಮ ಸಕ್ರಮ ಯೋಜನೆಡಿ ತಹಸೀಲ್ದಾರ್ ರಿಂದ ಮನೆ ಸುತ್ತಳತೆಯ ಹಕ್ಕು ಪತ್ರ ಮಂಜೂರಾತಿಯಾಗಿದೆ. ಈ ಸಂಬಂಧ ಅಗತ್ಯ ದಾಖಲೆ ಸಲ್ಲಿಸಿ ಮೂರು ತಿಂಗಳು ಕಳೆದರೂ ಮನೆ ಸುತ್ತಳತೆಯ ಇ.ಖಾತೆ ಮಾಡಿಕೊಡುವಲ್ಲಿ ತಾಲೂಕಿನ ಗುಜ್ಜನಡು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿ ಸತಾಯಿಸುತ್ತಿದ್ದಾರೆಂದು ಪಲಾನುಭವಿ ಕೋಣನಕುರಿಕೆ ಗ್ರಾಮದ ಈರಣ್ಣ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಈರಣ್ಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪಾವಗಡ ತಾಲೂಕು ನಿಡಗಲ್ ಹೋಬಳಿ ಗುಜ್ಜನಡು ಗ್ರಾ.ಪಂ.ಗೆ ಸೇರಿದ ಕೋಣಕುರಿಕೆ ಗ್ರಾಮದ ವಾಸಿಯಾಗಿದ್ದು, ನನ್ನ ಹೆಸರಿನ ಸರ್ವೆ ನಂಬರ್ ಜಮೀನಿನಲ್ಲಿ 30.40 ಸುತ್ತಾಳತೆಯ ಮನೆಕಟ್ಟಿಕೊಂಡು ವಾಸವಾಗಿದ್ದೇನೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 195ರ ಕಲಂ,94ಸಿಸಿ,ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನಲೆಯಲ್ಲಿ, ಸ್ಥಳ ಹಾಗೂ ದಾಖಲೆ ಪರಿಶೀಲನೆ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ಕಳೆದ ಜ.17ರಂದು ಮನೆ ವಾಸಕ್ಕೆ ಸಂಬಂಧಪಟ್ಟಂತೆ ಹಕ್ಕುಪತ್ರ ಮಂಜೂರಾತಿ ಕಲ್ಪಿಸಿ ನನ್ನಗೆ ನೀಡಿರುತ್ತಾರೆ. ಹಕ್ಕುಪತ್ರದ ಮೇರೆಗೆ ಮನೆ ಸುತ್ತಳತೆಯ ಈ ಖಾತೆ ಮಾಡಿಕೊಡುವಂತೆ ಗುಜ್ಜನಡು ಗ್ರಾ.ಪಂ ಕಚೇರಿಗೆ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಲಾಗಿದೆ. ಮೂರು ತಿಂಗಳು ಕಳೆದರೂ ಗುಜ್ಜನಡು ಗ್ರಾಪಂ ಪಿಡಿಒ ರಾಘವೇಂದ್ರ ಹಾಗೂ ಕಾರ್ಯದರ್ಶಿ ಮಂಜುನಾಥ್ ಇಖಾತೆ ಮಾಡಿಕೊಡದೇ ಸತಾಯಿಸುತ್ತಿದ್ದಾರೆ. ಪರಿಣಾಮ ನಿತ್ಯ ಗ್ರಾ.ಪಂ ಕಚೇರಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕಿನಿಂದ ಗೃಹ ಸಾಲ ಹಾಗೂ ಇತರೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ನಿಯಮನುಸಾರ ಮಂಜೂರಾತಿ ಆಗಿರುವ ಹಕ್ಕುಪತ್ರದ ಸ್ವತ್ತನ್ನು ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಲ್ಲಿ ಸತಾಯಿಸುವ ಉದ್ದೇಶ ಅರ್ಥವಾಗುತ್ತಿಲ್ಲ. ಕೆಲ ರಾಜಕೀಯ ಪೂಡಾರಿಗಳು ಷಡ್ಯಂತ್ರಕ್ಕೆ ಒಳಗಾದ ಗ್ರಾ.ಪಂ ಅಧಿಕಾರಿಗಳು ಇ,ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ಈ ಬಗ್ಗೆ, ಹಕ್ಕುಪತ್ರ ಸೇರಿದಂತೆ ಅರ್ಜಿ ಸಲ್ಲಿಸಿದ್ದ ದಾಖಲೆ ಸಮೇತ ಜಿ.ಪಂ ಸಿಇಒ ಹಾಗೂ ತಾ.ಪಂ ಇಒಗೆ ದೂರು ಸಲ್ಲಿಸಿದ್ದು, ನನ್ನ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಸ್ಥಳ ಪರಿಶೀಲಿಸಿ, ಇ,ಖಾತೆ ಮಾಡಿಕೊಡುವಲ್ಲಿ ವಿಳಂಬ ಮಾಡಿದರೆ ಗುಜ್ಜನಡು ಗ್ರಾಪಂ ಕಚೇರಿಯ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಇದೇ ಗ್ರಾ.ಪಂ ವ್ಯಾಪ್ತಿಯ ಕೋಣನಕುರಿಕೆ ಈರಣ್ಣ ತಾವು ವಾಸದ ಮನೆಗೆ ಸಂಬಂಧಪಟ್ಟಂತೆ, ಇ.ಖಾತೆಗಾಗಿ ಮನೆಯ ವಿಸ್ತೀರ್ಣ ಕುರಿತು ಹಕ್ಕುಪತ್ರ ಹಾಗೂ ಇತರೆ ದಾಖಲೆ ಗ್ರಾ.ಪಂ.ಗೆ ಸಲ್ಲಿಸಿದ್ದಾರೆ. ಈ ಸಂಬಂಧ ಮನೆ ವಿಚಾರವಾಗಿ ನಮಗೂ ಹಕ್ಕಿದೆ. ತಹಸೀಲ್ದಾರ್ ಕಚೇರಿಯಿಂದ ಈರಣ್ಣ ಹಕ್ಕುಪತ್ರ ಪಡೆದ ಬಗ್ಗೆ ನಮಗೆ ಗೊತ್ತಿಲ್ಲ. ಯಾವುದೇ ಕಾರಣಕ್ಕೂ ಈರಣ್ಣನ ಹೆಸರಿಗೆ ಇ,ಖಾತೆ ಮಾಡದಿರುವಂತೆ ಆವರ ಕುಟುಂಬ ಸದಸ್ಯರೊಬ್ಬರು ಗ್ರಾ.ಪಂಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಹೆಚ್ಚಿನ ಕ್ರಮಕ್ಕೆ ತಾ.ಪಂ ಇಒ ಗಮನಕ್ಕೆ ತಂದಿರುವುದಾಗಿ ಗುಜ್ಜನಡು ಗ್ರಾ.ಪಂ ಕಾರ್ಯದರ್ಶಿ ಮಂಜುನಾಥ್ ಪತ್ರಿಕೆಗೆ ತಿಳಿಸಿದ್ದಾರೆ.