ಕೊರಟಗೆರೆ: ಸ್ವಂತ ಹಣದಿಂದ ಗ್ರಾಮಾಭಿವೃದ್ಧಿಗೆ ಮುಂದಾದ ಗ್ರಾ.ಪಂ ಸದಸ್ಯೆ
ಕುರಂಕೋಟೆ ಗ್ರಾ.ಪಂ. ಸದಸ್ಯೆ ಸಬಿನ ಬಾನುಸುಹೆಲ್, ಅಂದಾಜು ಒಂದು ಲಕ್ಷ ರು. ಸ್ವಂತ ಹಣವನ್ನು ವ್ಯಯಿಸಿ ವೃದ್ಧರು, ಅಂಗವಿಕಲರು ಹಾಗೂ ಗ್ರಾಮಸ್ಥರು ಸೇರಿದಂತೆ ದಾರಿ ಹೋಕರು ಕುಳಿತು ವಿಶ್ರಾಂತಿ ಪಡೆಯಲು 30ಕ್ಕೂ ಹೆಚ್ಚು ಜಗಲಿ ಕಟ್ಟೆ ನಿರ್ಮಿಸಿದ್ದಾರೆ.
ಕೊರಟಗೆರೆ(ನ.22): ಮಣುವಿನಕುರಿಕೆ ಗ್ರಾಮದ ಅಭಿವೃದ್ಧಿಗೆ ಸ್ವಂತ ಹಣ ವ್ಯಯಿಸಿ ಮಾದರಿ ಗ್ರಾಮವನ್ನಾಗಿಸಲು ಗ್ರಾ.ಪಂ. ಸದಸ್ಸಬಿನ ಬಾನು ಸುಹೆಲ್ಯೆ ಮುಂದಾಗಿದ್ದಾರೆ.
ಕುರಂಕೋಟೆ ಗ್ರಾ.ಪಂ. ಸದಸ್ಯೆ ಸಬಿನ ಬಾನುಸುಹೆಲ್, ಅಂದಾಜು ಒಂದು ಲಕ್ಷ ರು. ಸ್ವಂತ ಹಣವನ್ನು ವ್ಯಯಿಸಿ ವೃದ್ಧರು, ಅಂಗವಿಕಲರು ಹಾಗೂ ಗ್ರಾಮಸ್ಥರು ಸೇರಿದಂತೆ ದಾರಿ ಹೋಕರು ಕುಳಿತು ವಿಶ್ರಾಂತಿ ಪಡೆಯಲು 30ಕ್ಕೂ ಹೆಚ್ಚು ಜಗಲಿ ಕಟ್ಟೆ ನಿರ್ಮಿಸಿದ್ದಾರೆ. ಗ್ರಾಮಸ್ಥರು ಸಬಿನ ಬಾನು ಸುಹೆಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಅಜ್ಜಿ ನಿಧನ!
ಗ್ರಾಮಸ್ಥ ಶಿವರುದ್ರಪ್ಪ ಮಾತನಾಡಿ, ಸ್ವಂತ ಹಣದಿಂದ ಜಗಲಿ ಕಟ್ಟೆ ನಿರ್ಮಿಸಿರುವುದ ಸಂತೋಷದ ಸಂಗತಿ. ರಾಜಕಾರಣಿಗಳು ಚುನಾವಣೆ ಗೆದ್ದು ಊರಿನ ಅಭಿವೃದ್ಧಿಗೆ ಶ್ರಮಿಸದೇ ಸ್ವ ಕಾರ್ಯಕ್ಕೆ ಮುಂದಾಗುತ್ತಾರೆ. ಆದರೆ, ಸಬಿನ ಬಾನು ಸುಹೆಲ್ ಬಡವರಿಗೆ ಮನೆ, ಪಿಂಚಣಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.
ಇತರ ಸದಸ್ಯರು ಇವರ ಸೇವೆ ಗಮನಿಸಿ ಎಚ್ಚೆತ್ತುಕೊಂಡರೆ ಹಳ್ಳಿಗಳನ್ನು ಮಾದರಿ ಗ್ರಾಮವನ್ನಾಗಿ ಮಾಡಬಹುದು ಎಂದು ಸ್ಥಳೀಯ ರಾಜಶೇಖರ್ ತಿಳಿಸಿದರು.