ಸರ್ಕಾರಿ ಸೇವೆ ಸ್ಥಗಿತ: ತುರ್ತು ಸೇವೆಗೆ ಮಾತ್ರ ಅವಕಾಶ

ಕೊರೋನಾ ಹರಡುವಿಕೆಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದರ ಅರಿವಿಲ್ಲದೆ ಕಚೇರಿಗಳಿಗೆ ತೆರಳಿದ ಸಾರ್ವಜನಿಕರು ಬರಿಗೈಲಿ ವಾಪಸಾಗುತ್ತಿದ್ದ ದೃಶ್ಯ ಶುಕ್ರವಾರ ಕಂಡುಬಂತು.

 

Govt offices closed in Mangalore due to coronavirus fear

ಮಂಗಳೂರು(ಮಾ.21): ಕೊರೋನಾ ಹರಡುವಿಕೆಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದರ ಅರಿವಿಲ್ಲದೆ ಕಚೇರಿಗಳಿಗೆ ತೆರಳಿದ ಸಾರ್ವಜನಿಕರು ಬರಿಗೈಲಿ ವಾಪಸಾಗುತ್ತಿದ್ದ ದೃಶ್ಯ ಶುಕ್ರವಾರ ಕಂಡುಬಂತು.

ನಗರದ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಭೂಮಿ ನೋಂದಣಿ, ಆಧಾರ್‌ ಇತ್ಯಾದಿ ಅನೇಕ ಸೇವೆಗಳನ್ನು ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ. ಅತಿ ತುರ್ತು ಸೇವೆಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ ಅನೇಕ ಸಾರ್ವಜನಿಕರು ಈ ವಿಷಯ ಗೊತ್ತಿಲ್ಲದೆ ದೂರದೂರುಗಳಿಂದ ಆಗಮಿಸಿ ನಿರಾಶರಾಗಿ ಹಿಂತಿರುತ್ತಿದ್ದರು.

ಮಂಗಳೂರು: ಕೊರೋನಾ ಭೀತಿ ನಡುವೆಯೂ ನಿಂತಿಲ್ಲ ಪಬ್ ಮೋಜು ಮಸ್ತಿ..!

ಪಾಲಿಕೆ ಪ್ರವೇಶ ನಿರ್ಬಂಧ: ಮಂಗಳೂರು ಮಹಾನಗರ ಪಾಲಿಕೆಯಲ್ಲಂತೂ ಸಾರ್ವಜನಿಕರಿಗೆ ಒಳಗೇ ಬಿಡುತ್ತಿಲ್ಲ. ‘ಕೊರೋನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಜಿಲ್ಲಾಧಿಕಾರಿ ಆದೇಶದಂತೆ ಮಾ.31ರವರೆಗೆ ಪ್ರವೇಶ ನಿಷೇಧಿಸಲಾಗಿದೆ’ ಎಂಬ ಫಲಕವನ್ನು ಪಾಲಿಕೆ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದೆ.

ಕೊರೋನಾ ಭೀತಿಗೆ ಕೇರಳ-ದಕ್ಷಿಣ ಕನ್ನಡ ವಾಹನ ಸಂಚಾರ ಬಂದ್‌

ಜನನ ಮರಣ ನೋಂದಣಿ, ಉದ್ದಿಮೆ ಪರವಾನಗಿ ಅರ್ಜಿಗಳನ್ನು ಹಾಕಲು ಹೊರಭಾಗದಲ್ಲಿ ಡಬ್ಬಗಳನ್ನು ಇಡಲಾಗಿದೆ. ಉಳಿದ ತುರ್ತು ಸೇವೆ ಒದಗಿಸಲು ಪಾಲಿಕೆ ಸಿಬ್ಬಂದಿ ಹೊರಗಡೆ ಮೇಜು- ಕುರ್ಚಿ ಇಟ್ಟು ಕಾರ್ಯ ನಿರ್ವಹಿಸುತ್ತಿದ್ದರು. ಪಾಲಿಕೆ ಹೊರಗೆ ಸಂಜೆವರೆಗೂ ಜನರು ಜಮಾಯಿಸಿದ್ದರು.

Latest Videos
Follow Us:
Download App:
  • android
  • ios