ಉಡುಪಿ(ಮೇ.03): ಸರ್ಕಾರದ ಲಾಕ್‌ಡೌನ್‌ ಅದೇಶವನ್ನು ಸರ್ಕಾರಿ ಅಧಿಕಾರಿಗಳೇ ಉಲ್ಲಂಘಿಸಿದ ಘಟನೆ ಉಡುಪಿಯ ಪ್ರಗತಿ ಸೌಧದ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ನಡೆದಿದೆ.

ಲಾಕ್‌ಡೌನ್‌ ನಡುವೆ ಅರ್ಧದಷ್ಟುಸಿಬ್ಬಂದಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಈ ಕಚೇರಿಯಲ್ಲಿ 20ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಗರಸಭೆಯ ಪೌರಾಯುಕ್ತದ ಆನಂದ ಕಲ್ಲೋಳಿಕರ್‌ ದಾಳಿ ನಡೆಸಿದರು.

ಕೊರೋನಾ ಕಂಟಕದ ಮಧ್ಯೆ ನೀರಿನ ಸಂಕಷ್ಟ: ಮಾಹಾ ಮೊರೆ ಹೋದ ಬಿಎಸ್‌ವೈ...!

ಪೌರಾಯುಕ್ತರು ಬಂದು ಎಚ್ಚರಿಕೆ ನೀಡಿದ ಮೇಲೆ ಎಚ್ಚೆತ್ತ ಮ್ಯಾನೇಜರ್‌ ಕಚೇರಿಯನ್ನು ಮುಚ್ಚಿದರು. ಸಿಬ್ಬಂದಿ ಮೆಲ್ಲಗೆ ಜಾಗ ಖಾಲಿ ಮಾಡಿದರು. ಕಚೇರಿಯನ್ನು ಆರಂಭಿಸುವುದಕ್ಕೆ ಜಿಲ್ಲಾಧಿಕಾರಿ ಅನುಮತಿ ಪಡೆದು ಬರುವಂತೆ ಪೌರಾಯುಕ್ತರು ಆದೇಶ ನೀಡಿದ್ದಾರೆ.