Asianet Suvarna News Asianet Suvarna News

Tumakur : .ಬಗರ್‌ಹುಕುಂ ಸಮಿತಿ ರೈತರ ಜೊತೆ ಸರ್ಕಾರ ಚೆಲ್ಲಾಟ

ಹಲವು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಬಗರ್‌ಹುಕುಂ ರೈತರ ಪ್ರತಿಭಟನಾ ಮೆರವಣಿಗೆ ನಗರದ ಕೋಡಿಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

 Govt messing with Bagarhukum Committee farmers snr
Author
First Published Nov 15, 2022, 5:05 AM IST

 ತಿಪಟೂರು (ನ.15):  ಹಲವು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಬಗರ್‌ಹುಕುಂ ರೈತರ ಪ್ರತಿಭಟನಾ ಮೆರವಣಿಗೆ ನಗರದ ಕೋಡಿಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್‌. ಎನ್‌ . ಸ್ವಾಮಿ ಮಾತನಾಡಿ, ಸರ್ಕಾರ (Govt)  ಬಗರ್‌ಹುಕುಂ ರೈತರ ಸಂಕಷ್ಟವನ್ನು ಅರ್ಥಮಾಡಿಕೊಳ್ಳದೆ ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಬಗರ್‌ಹುಕುಂ ರೈತರು (Farmers)  ಅರಣ್ಯದಂಚಿನ ಭೂಮಿಯನ್ನು ಹಗಲು ರಾತ್ರಿ ಎನ್ನದೆ ಬೆವರು ಸುರಿಸಿ ಭೂಮಿ ಹಸನು ಮಾಡಿ ಅದನ್ನು ಕೃಷಿಯೋಗ್ಯವನ್ನಾಗಿಸಿ ದೇಶದ ಆಹಾರೋತ್ಪಾದನೆಗೆ ಕಾಣಿಕೆ ನೀಡುವಲ್ಲಿ ಅವರ ಪರಿಶ್ರಮ ಅಪಾರವಾಗಿದೆ. ಜೀವನೋಪಾಯಕ್ಕಾಗಿ ಸುಮಾರು 90 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ. ಇವರಿಗೆ ಬರುವ ಅಲ್ಪಸ್ವಲ್ಪ ವರಮಾನವೇ ಜೀವನಾಧಾರವಾಗಿದ್ದು ಇಲ್ಲಿಯವರಗೆ ಆಳ್ವಿಕೆ ಮಾಡಿದ ಎಲ್ಲಾ ಸರ್ಕಾರಗಳು ಈ ಬಡ ಜನರ ಜೀವನದ ವಸ್ತುಸ್ಥಿತಿ ತಿಳಿದಿದ್ದು ಸರ್ಕಾರಕ್ಕೆ ಸೇರಿದ ಈ ಜಮೀನಿನಲ್ಲಿ ಉಳುಮೆಗೆ ಅವಕಾಶ ನೀಡುತ್ತ ಬಂದಿವೆ. ಆದರೆ ಸರ್ಕಾರಗಳು ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಶಾಸನ ಬದ್ಧವಾಗಿ ಭೂಮಿಯ ಹಕ್ಕು ದೊರೆಯದೆ ನೆಮ್ಮದಿ ಇಲ್ಲದೆ ದಶಕಗಳಿಂದ ತೀವ್ರ ಮಾನಸಿಕ ತೊಳಲಾಟದಿಂದ ಜರ್ಜರಿತರಾಗಿದ್ದಾರೆ. ಸಾಗುವಳಿ ರೈತರಿಗೆ ಭೂಮಿ ಮಂಜೂರಾತಿಯಾಗಿ ಖಾತೆ ಕೂಡ ಆಗಿದೆ. ಆದರೆ ಇಲಾಖೆಯ ತಪ್ಪಿನಿಂದಾಗಿ ರೈತರಿಗೆ ಸೇರಿದ ಭೂಮಿಯ ಗಣಕೀಕೃತ ಪಹಣಿಯಲ್ಲಿ ತಪ್ಪಾಗಿ ಅರಣ್ಯವೆಂದು ಸೇರಿಸಲಾಗಿದೆ. ಇದರಿಂದ ಹಸನು ಮಾಡಿ ಸುಸ್ತಾದ ರೈತರು ಮತ್ತೆ ಕೋರ್ಚ್‌, ಕಚೇರಿ ಸುತ್ತುವಂತಾಗಿದೆ. ಇದರ ನಡುವೆ ಈ ಜಮೀನುಗಳಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಎತ್ತಿನಹೊಳೆ ಯೋಜನೆ, ಗ್ಯಾಸ್‌ ಲೈನ್‌, ಎಕಾನಾಮಿಕ್‌ ಕಾರಿಡಾರ್‌ ಮತ್ತು ಇಲಾಖೆಯ ಇತರೆ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ರೈತ ಹೋರಾಟ ಫಲವಾಗಿ ರೈತರಿಗೆ ಹಕ್ಕುಪತ್ರವನ್ನು ನೀಡಿದ್ದು, ಇನ್ನೂ ಲಕ್ಷಾಂತರ ರೈತರು ಹಕ್ಕುಪತ್ರ ಸಿಗದೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸರ್ಕಾರ ಕಂದಾಯ ಇಲಾಖೆಯ ಹೊಸ ನೀತಿ ಮತ್ತು ಅರಣ್ಯ ಇಲಾಖೆಯ ದಾಳಿಗಳಿಂದ ರೈತರ ಸಾಗುವಳಿ ಮಾಡುವುದೇ ದುಸ್ತರವಾಗಿದ್ದು, ಈ ಎಲ್ಲಾ ಬಗರ್‌ಹುಕುಂ ರೈತರ ಕಷ್ಟಗಳನ್ನು ಅರಿತು ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹಸಿರು ಸೇನೆ ತಾಲೂಕು ಅಧ್ಯಕ್ಷ ದೇವರಾಜು ಸಂಘಟನೆಯ ತಾಲೂಕು ಅಧ್ಯಕ್ಷ ಸಚೀನ್‌, ಕಾರ್ಯದರ್ಶಿ ಪ್ರಶಾಂತ್‌ ಹಾಲ್ಕುರಿಕೆ, ಬೈರನಾಯಕನಹಳ್ಳಿ ಲೋಕೇಶ್‌, ಸಿದ್ದಬಸವಯ್ಯ, ಪರಮೇಶ್‌, ಗೋಪಿನಾಥ್‌, ವಿಜಯ್‌, ಚನ್ನಬಸಪ್ಪ, ದಶರಥ, ಬಸವರಾಜು, ರುದ್ರಾಪುರದ ಮಲ್ಲಿಕಾರ್ಜುನ ಸೇರಿದಂತೆ ಬಗರ್‌ಹುಕುಂ ಸಾಗುವಳಿ ರೈತರು ಭಾಗವಹಿಸಿದ್ದರು.

ರೈತರ ಜಮೀನಿನ ಗಣಕೀಕೃತ ಪಹಣಿಯಲ್ಲಿ ತಪ್ಪಾಗಿ ಅರಣ್ಯವನ್ನು ಸೇರಿಸಿರುವುದನ್ನು ಕೂಡಲೇ ಸರಿಪಡಿಸಬೇಕು. ಈ ಹಿಂದೆ ನೀಡಿದಂತೆಯೇ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೂ ಹಕ್ಕು ಪತ್ರ ವಿತರಿಸಬೇಕು. ಹಕ್ಕು ಪತ್ರ ಪಡೆದ ರೈತರ ಭೂಮಿಯನ್ನು ದುರಸ್‌್ತ ಅಥವಾ ಪೋಡ್‌ ಮಾಡಿ ಖಾತೆಯನ್ನು ಮಾಡಿಕೊಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ.

ಬಿ.ಬಿ.ಸಿದ್ದಲಿಂಗಮೂರ್ತಿ ಹಿರಿಯ ರೈತ ಮುಖಂಡ

ಹಲವು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ

Follow Us:
Download App:
  • android
  • ios