ಜನಪರ ಆಡಳಿತ ನೀಡಲು ಸರ್ಕಾರ ಬದ್ಧ: ಗೃಹಸಚಿವ

ನಾನೇ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ. 5 ಗ್ಯಾರಂಟಿಯ ಆರ್ಥಿಕತೆಯ ಬಗ್ಗೆ ನನಗೆ ಗೊತ್ತು. ಸರ್ಕಾರಿ ಆದೇಶ ಮಾಡಿರೋದು ನಿಮಗೆ ಕಾಣುತ್ತಿಲ್ಲವೇ. ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಈಗಾಗಲೇ ತಾಂತ್ರಿಕ ಅನುಮೋದನೆ ನೀಡಿದ್ದೇವೆ. ಬಿಜೆಪಿ ಪಕ್ಷ ವಿನಾಕಾರಣ ಗೊಂದಲ ಸೃಷ್ಟಿಸೋ ಕೆಲಸ ಮಾಡ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಕಿಡಿಕಾರಿದರು.

Govt committed to provide pro-people governance: Home Minister snr

 ಕೊರಟಗೆರೆ :  ನಾನೇ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ. 5 ಗ್ಯಾರಂಟಿಯ ಆರ್ಥಿಕತೆಯ ಬಗ್ಗೆ ನನಗೆ ಗೊತ್ತು. ಸರ್ಕಾರಿ ಆದೇಶ ಮಾಡಿರೋದು ನಿಮಗೆ ಕಾಣುತ್ತಿಲ್ಲವೇ. ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಈಗಾಗಲೇ ತಾಂತ್ರಿಕ ಅನುಮೋದನೆ ನೀಡಿದ್ದೇವೆ. ಬಿಜೆಪಿ ಪಕ್ಷ ವಿನಾಕಾರಣ ಗೊಂದಲ ಸೃಷ್ಟಿಸೋ ಕೆಲಸ ಮಾಡ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಕಿಡಿಕಾರಿದರು.

ಪಟ್ಟಣದ ರಾಜೀವ್‌ ಭವನದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ವಿಜಯೋತ್ಸವ ಸಮಾವೇಶದ ಬೂತ್‌ ಅಧ್ಯಕ್ಷರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕದ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತದ ಅಧಿಕಾರ ನೀಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನಪರವಾದ ಆಡಳಿತ ನೀಡುತ್ತೆ. ಮತದಾರ ಪ್ರಭು ಬದಲಾವಣೆ ಬಯಸಿ ನಮಗೆ ಅಧಿಕಾರ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮತದಾರರ ಆರ್ಶೀವಾದದಿಂದ ಕಾಂಗ್ರೆಸ್‌ಗೆ ಬರೋಬ್ಬರಿ 135 ಸೀಟ್‌ ಬಂದಿವೆ. ಕೊರಟಗೆರೆ ಕ್ಷೇತ್ರದ ಜನತೆಯು ನನಗೆ ಆರ್ಶಿವಾದ ಮಾಡಿದ್ದಾರೆ. ಕೊರಟಗೆರೆ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯುತ್ತೇನೆ ಎಂದು ಭರವಸೆ ನೀಡಿದರು.

ಹಣಕಾಸು, ಇಂಧನ, ಆಹಾರ, ಸಾರಿಗೆ ಸೇರಿದಂತೆ 5 ಇಲಾಖೆಯ ಮುಖ್ಯಸ್ಥರಿಗೆ ಪ್ರಣಾಳಿಕೆಯ ಜಾರಿಯ ವರದಿ ಸಿದ್ಧತೆಗೆ ಸೂಚಿಸಲಾಗಿದೆ. ಜೂ.1ರ ಸಿಎಂ ನೇತೃತ್ವದ ಕ್ಯಾಬಿನೆಟ್‌ ಸಭೆಯಲ್ಲಿ ಅಧಿಕೃತ ತೀರ್ಮಾನ ಆಗುತ್ತೆ. ಜನರು ನೀಡಿರುವ ತೀರ್ಮಾನದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷವು ಯೋಚನೆ ಮಾಡಲಿ. ನಾವು ಕರ್ನಾಟಕ ಜನರಿಗೆ ನೀಡಿರುವ ಭರವಸೆ ಈಡೇರಿಸುವ ಕೆಲಸ ಮಾಡ್ತೇವೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ, ಮಧುಗಿರಿ ಮಾಜಿ ಶಾಸಕ ಗಂಗಹನುಮಯ್ಯ, ಕೊರಟಗೆರೆ ಬ್ಲಾಕ್‌ ಅಧ್ಯಕ್ಷ ಅರಕೆರೆಶಂಕರ್‌, ಯುವಾಧ್ಯಕ್ಷ ವಿನಯ್‌, ಮಹಿಳಾಧ್ಯಕ್ಷೆ ಜಯಮ್ಮ, ಮುಖಂಡರಾದ ವಾಲೇಚಂದ್ರಯ್ಯ, ಕೇಶವಮೂರ್ತಿ, ಓಬಳರಾಜು, ಬೈರಪ್ಪ, ಕಾಮರಾಜು ಪ್ರಸನ್ನಕುಮಾರ್‌, ಹನುಮಾನ್‌, ಕವಿತಾ, ಎ.ಡಿ.ಬಲರಾಮಯ್ಯ, ಮೈಲಾರಪ್ಪ, ಜಯರಾಮು, ಚಂದ್ರಶೇಖರ್‌, ವೆಂಕಟಪ್ಪ, ವೆಂಕಟಬಾಬು, ಮೀನು ಮಂಜಣ್ಣ ಸೇರಿದಂತೆ ಬೂತ್‌ ಅಧ್ಯಕ್ಷರು ಮತ್ತು ಕಾರ್ಯಕರ್ತರು ಇಇದ್ದರು.

ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಟೀಕೆ ಮಾಡಲಿ, ನಾವು ಜನಪರ ಆಡಳಿತ ನೀಡ್ತೇವೆ. ನಾವು ಹೇಳಿದ ಮಾತಿನ ರೀತಿ ನಡೆದುಕೊಳ್ತೀವಿ. ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ಜನರಿಗೆ ನೀಡಿದ ಗ್ಯಾರಂಟಿಯನ್ನು ಜಾರಿಗೆ ತರುತ್ತೀವಿ. ಸರ್ಕಾರ ನಡೆಸಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಕ್ಯಾಬಿನೆಟ್‌ ತೀರ್ಮಾನದ ಬಗ್ಗೆ ಗೊತ್ತಿಲ್ಲವೇ. ಸೋಲಿನ ನೋವು ಅವರ ಮನಸ್ಥಿತಿಯನ್ನೇ ಬದಲು ಮಾಡಿದೆ. ಅವರಿಗೆ ನೇರವಾಗಿ ಮಾತನಾಡೋದಿಕ್ಕೆ ಆಗುತ್ತಿಲ್ಲ.

ಡಾ.ಜಿ.ಪರಮೇಶ್ವರ್‌ ಗೃಹಸಚಿವ

Latest Videos
Follow Us:
Download App:
  • android
  • ios