ತುಮ​ಕೂರು (ನ.01): ಉಪ ಚುನಾವಣೆಯ ಫಲಿತಾಂಶದಿಂದಾಗಿ ಕಾಂಗ್ರೆಸ್‌ ಒಡೆದ ಮನೆಯಾಗಲಿದ್ದು, ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ. ಶಿವ​ಕು​ಮಾರ್‌ ಕನಸು ನುಚ್ಚು ನೂರಾ​ಗ​ಲಿದೆ ಎಂದು ಡಿಸಿಎಂ ಗೋವಿಂದ ಕಾರ​ಜೋಳ ಭವಿಷ್ಯ ನುಡಿದರು. 

ಅವರು ಶಿರಾ​ದಲ್ಲಿ ಮಾತ​ನಾಡಿದ ಅವರು, ಹಾಗೆಯೇ ಮತ್ತೆ ಮುಖ್ಯಮಂತ್ರಿ ಆಗುವು​ದಾಗಿ ಹೊರ​ಟಿ​ರುವ ಸಿದ್ದರಾಮಯ್ಯ ಅವ​ರಿಗೂ ಮುಖ​ಭಂಗ​ವಾ​ಗ​ಲಿದೆ ಎಂದರು.

ಗೊಲ್ಲರಹಟ್ಟಿಗಳಿಗೆ ಹೋದರೆ ಕಣ್ಣೀರು ಬರುತ್ತದೆ. ಈವ​ರೆಗೆ ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಪಕ್ಷ​ಗಳು ಮೂಲ ಸೌಕರ್ಯ ಕಲ್ಪಿ​ಸಿಲ್ಲ. ಎಸ್‌​ಸಿ, ಎಸ್‌ಟಿ ಕಾಲೋನಿಯ ಸ್ಥಿತಿ ಕೂಡ ದಯನೀಯವಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಅನ್ನು ಇಲ್ಲಿ​ಯ​ವ​ರೆಗೆ ಬೆಂಬ​ಲಿಸಿ ತಪ್ಪು ಮಾಡಿ​ದ್ದೇ​ವೆಂಬು​ದಾಗಿ ಜನ​ರಿಗೆ ಅರಿ​ವಾ​ಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ಪರ 'ಡಿ' ಬಾಸ್ ಪ್ರಚಾರ: ಡಿಕೆಶಿ ಹೇಳಿದ್ದು ಹೀಗೆ...! .

ಈಗಾಗಲೇ ರಾಜ್ಯದಲ್ಲಿ ಉಪ ಚುನಾವಣೆ ಸಮರ ಜೋರಾಗಿದೆ.  ಇದೇ ನವೆಂಬರ್ 3 ರಂದು ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ತಮ್ಮದೇ ಗೆಲುವಿಗಾಗಿ ಭಾರೀ ಪೈಪೋಟಿ ನಡೆಸುತ್ತಿವೆ.