Asianet Suvarna News Asianet Suvarna News

ಬೆಂಗಳೂರಿನ ಬದಲಾವಣೆಯ ಹರಿಕಾರರಿಗೆ ರಾಜ್ಯಪಾಲ ಗೆಹ್ಲೋಟ್‌ ಸನ್ಮಾನ

ನಮ್ಮ ಬೆಂಗಳೂರು ಪ್ರತಿಷ್ಠಾನ ಕೊಡಮಾಡುವ ನಮ್ಮ ಬೆಂಗಳೂರು ಪ್ರಶಸ್ತಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ 

Governor Thaawarchand Gehlot Felicitates Namma Bengaluru Award Winners grg
Author
First Published Nov 5, 2023, 8:10 PM IST

ಬೆಂಗಳೂರು(ನ.05):  ತಮ್ಮ ಬದ್ಧತೆ ಮತ್ತು ಅವಿಸ್ಮರಣೀಯ ಕೊಡುಗೆಗಳಾಗಿ ನಮ್ಮ ಬೆಂಗಳೂರು ಪ್ರಶಸ್ತಿ ಪಡೆದಿರುವ ಎಲ್ಲ ವಿಜೇತರಿಗೆ ನನ್ನ ಅಭಿನಂದನೆಗಳು. ಅವರ ಕೊಡುಗೆಗಳು ಈ ನಗರವನ್ನು ಜೀವನ ನಡೆಸಲು ಒಂದು ಉತ್ತಮ ಸ್ಥಳವನ್ನಾಗಿ ಮಾಡಿದ್ದಲ್ಲದೇ, ಇತರರಿಗೂ ಒಂದು ಉತ್ತಮ ಉದಾಹರಣೆಗಾಗಿ ನಿಂತಿದ್ದಾರೆ. ಬದಲಾವಣೆಗಳು ಆರಂಭವಾಗುವುದು ಒಂದು ಹೆಜ್ಜೆಯಿಂದಲೇ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಆ ಹೆಜ್ಜೆ ಹೆಚ್ಚು ಪರಿಣಾಮಕಾರಿಯಾಗಿ, ಸುಸ್ಥಿರವಾಗಿ ಮತ್ತು ಸಮಗ್ರವಾಗಿ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ತಿಳಿಸಿದ್ದಾರೆ. 

ನಿನ್ನೆ(ಶನಿವಾರ) ನಗರದಲ್ಲಿ ನಡೆದ ನಮ್ಮ ಬೆಂಗಳೂರು ಪ್ರತಿಷ್ಠಾನ ಕೊಡಮಾಡುವ ನಮ್ಮ ಬೆಂಗಳೂರು ಪ್ರಶಸ್ತಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.  ಈ ಬಾರಿ ನ್ಯಾಯಮೂರ್ತಿ ಡಾ. ಎಂ.ಎನ್. ವೆಂಕಟಾಚಲಯ್ಯ, ಜೀವಮಾನದ ಸಾಧನೆಗೆ ಪ್ರಶಸ್ತಿ, ಅಲ್ಬಿನಾ ಶಂಕರ್, ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿ, ಡಾ ಬಿ.ಬಿ. ರಘುನಾಥ್, ವರ್ಷದ ಸರಕಾರಿ ಅಧಿಕಾರಿ ಪ್ರಶಸ್ತಿ, ಇಂದುಮತಿ, ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿ,  ಅಂಕಿತ್ಪುರಿ ಅವರುಗಳಿಗೆ ವರ್ಷದ ಉದಯೋನ್ಮುಖ ತಾರೆ ಪ್ರಶಸ್ತಿ ಲಭಿಸಿದೆ. 

ಕೋವಿಡ್ ವಾರಿಯರ್‌ಗಳನ್ನು ಸನ್ಮಾನಿಸಿ ಗೌರವಿಸಿದ 'ನಮ್ಮ ಬೆಂಗಳೂರು ಪ್ರತಿಷ್ಠಾನ'

ಪ್ರಶಸ್ತಿಗಳ ಕುರಿತು ಪ್ರತಿಕ್ರಿಯಿಸಿದ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಪ್ರದೀಪ್‌ ಅವರು,  “ಐದು ವಿಭಾಗಗಳಲ್ಲಿ ಅಂತಿಮ ಸುತ್ತಿಗೆ 20 ಮಂದಿಯನ್ನು ಆಹ್ವಾನಿಸಲಾಗಿದ್ದು, ಆ ಎಲ್ಲ ಸಾಧಕರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ನೀಡಿದವರೇ. ಅಂತಿಮ ವಿಜೇತರನ್ನು ಆಯ್ಕೆ ಮಾಡಲು ತೀರ್ಪುಗಾರರ ಸಮಿತಿ ಹಲವು ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಬೇಕಾಯಿತು. ಇದೊಂದು ಸವಾಲಿನ ಪ್ರಕ್ರಿಯೆಯಾಗಿತ್ತು. ಪ್ರಶಸ್ತಿಗಾಗಿ ಸಾಧಕರನ್ನು ನಾಮನಿರ್ದೇಶನ ಮಾಡಿದ ಬೆಂಗಳೂರಿನ ನಾಗರಿಕರಿಗೆ ನಾವು ಕೃತಜ್ಞರಾಗಿದ್ದೇವೆ. ಈ ಸಾಧಕರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.

ಎನ್‌ಬಿಎಫ್‌ನ ಜನರಲ್‌ ಮ್ಯಾನೇಜನರ್‌ ವಿನೋದ್‌ ಜೇಕಬ್‌ ಅವರು ಮಾತನಾಡಿ “ನಮ್ಮ ಬೆಂಗಳೂರು ಪ್ರಶಸ್ತಿಗಳ ಮೂಲಕ ನಾವು ಬೆಂಗಳೂರನ್ನು ಬದಲಾಯಿಸಿದ ಎಲೆಮರೆಯ ಸಾಧಕರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಸಮುದಾಯಕ್ಕೆ ಅವರಿಗಿರುವ ಬದ್ಧತೆ ಮತ್ತು ನಮ್ಮ ಬೆಂಗಳೂರನ್ನು ಬದುಕಲು ಒಂದು ಉತ್ತಮ ಸ್ಥಳವನ್ನಾಗಿ ರೂಪಿಸಲು ಅವರ ಕೊಡುಗೆಗಳು ಈ ನಗರದ ಸ್ಫೂರ್ತಿಯೂ ಹೌದು. ಯಾವುದೇ ಪ್ರಚಾರಗಳಿಲ್ಲದೇ ನಿಶ್ಶಬ್ಧವಾಗಿ ಸೇವೆ ಸಲ್ಲಿಸುವ ಈ ಸಾಧಕರ ಕೊಡುಗೆಗಳು ನಮಗೆಲ್ಲ ಸ್ಫೂರ್ತಿಯಾಗಿ ನಗರದ ಭವಿಷ್ಯವನ್ನು ಉಜ್ವಲಗೊಳಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ನಮ್ಮ ಬೆಂಗಳೂರು ಪ್ರಶಸ್ತಿ ಕುರಿತು:

ನಮ್ಮ ಬೆಂಗಳೂರು ಪ್ರಶಸ್ತಿಗಳ ಮೂಲಕ ನಮ್ಮ ಬೆಂಗಳೂರು ಪ್ರತಿಷ್ಠಾನ ಬೆಂಗಳೂರು ನಗರವನ್ನು ಜೀವನ ನಡೆಸಲು ಒಂದು ಉತ್ತಮ ಸ್ಥಳವನ್ನಾಗಿ ರೂಪಿಸಲು ಅವಿಸ್ಮರಣೀಯ ಕೊಡುಗೆ ನೀಡಿದ ಎಲೆಮರೆಯ ಸಾಧಕರನ್ನು, ಸಾಮಾನ್ಯ ಜನರನ್ನು ಗುರುತಿಸಿ ಗೌರವಿಸುತ್ತದೆ. ಅವರಿಗೆ ದೊಡ್ಡ ಕೃತಜ್ಞತೆಗಳನ್ನು ಹೇಳುವ ನಿಜವಾದ ಮಾರ್ಗವಿದು. ಈ ಸಾಧಕರಿಂದ ಪ್ರೇರಣೆ ಪಡೆದು ಬೆಂಗಳೂರಿನ ನಾಗರಿಕರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ತರಲು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ.

Follow Us:
Download App:
  • android
  • ios