ಜಮೀನಿನ ವಿಷಯವಾಗಿ ಹೊಸಕೋಟೆಯ ಕಿರಣ್‌ ಕುಮಾರ್‌ ಬಳಿ 3000 ಸಾವಿರ ಪೋನ್‌ ಪೇ ಮತ್ತು ಕಚೇರಿಯಲ್ಲಿ 3000 ನಗದು ಹಣ ಪಡೆಯುವಾಗ ಸರ್ವೆಯರ್‌ ರಾಜಕುಮಾರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಾಲೂರು(ಆ.23): ಇಲ್ಲಿನ ಭೂ ಮಾಪನ ಇಲಾಖೆಯ ಸರ್ಕಾರಿ ಸರ್ವೆಯರ್‌ ರಾಜ್‌ ಕುಮಾರ್‌ ರಾಜ ಕಾಲುವೆ ಒತ್ತುವರಿ ಸರ್ವೆ ಜಂಟಿ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸುವ ವೇಳೆಯಲ್ಲಿ ಲೋಕಾಯುಕ್ತರ ಬೆಲೆಗೆ ಬಿದಿದ್ದಾರೆ. ತಾಲೂಕಿನ ಆಲಾಂಬಡಿ ಗ್ರಾಮದ ಬಳಿಯ ಜಮೀನಿನ ವಿಷಯವಾಗಿ ಹೊಸಕೋಟೆಯ ಕಿರಣ್‌ ಕುಮಾರ್‌ ಬಳಿ 3000 ಸಾವಿರ ಪೋನ್‌ ಪೇ ಮತ್ತು ಕಚೇರಿಯಲ್ಲಿ 3000 ನಗದು ಹಣ ಪಡೆಯುವಾಗ ಸರ್ವೆಯರ್‌ ರಾಜಕುಮಾರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಅಲಂಬಾಡಿ ಗ್ರಾಮದ ಸರ್ವೆ ನಂ 9091 ಸೇರಿದಂತೆ ಇನ್ನಿತರೇ ಸರ್ವೆ ನಂಬರ್‌ ಗಳಿದ್ದ ರಾಜಕಾಲುವೆ ಒತ್ತುವರಿ ಜಂಟಿ ನಕ್ಷೆ ಮಾಡಿಕೊಡಲು ಹೊಸಕೋಟೆ ಪಟ್ಟಣದ ಕಿರಣ್‌ ಕುಮಾರ್‌ ಎಂಬುವರು ಆಗಸ್ಟ್‌ 10 ರಂದು ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರ್ವೆಯರ್‌ ರಾಜಕುಮಾರ್‌ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ,ಅ ಸಂಬಂಧ ಬೆಂಗಳೂರಿನ ಲೋಕಾಯುಕ್ತ ಐಜಿ ಅವರಿಗೆ ಕಿರಣ್‌ ದೂರು ಸಲ್ಲಿಸಿದ್ದರು. ಭೂಮಾಪನ ಕಚೇರಿಯಲ್ಲಿ ಸರ್ವೆಯರ್‌ ನಗದು ಹಣ ಸ್ವೀಕರಿಸುವಾಗ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಇನ್ಸ್‌ ಪೆಕ್ಟರ್‌ ಅಂಬರೀಶ್‌ ಗೌಡ ನೇತೃತ್ವದ ತಂಡದ ಕೈಗೆ ಸಿಕ್ಕಿಬಿದ್ದಿದ್ದಾರೆ. ಸರ್ವೇಯರ್‌ ರಾಜಕುಮಾರ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಲೋಕಸಭಾ ಸಮರ: ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಎಲ್ಲಿಂದ ಸ್ಪರ್ಧಿಸುತ್ತಾರೆ?

ತಾಲೂಕು ಸರ್ವೇ ಇಲಾಖೆಯಲ್ಲಿ ರೈತರ ಸಮಸ್ಯೆಗಳು ವಿಳಂಬ ಮಾಡುತ್ತಿರುವ ಬಗ್ಗೆ ಶಾಸಕರಿಗೆ ಹಲವರು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಶಾಸಕರು ಎಲ್ಲ ಸರ್ವೆ ಅಧಿಕಾರಿಗಳನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಆದರೂ ಎಚ್ಚೆತ್ತುಕೊಳ್ಳದ ಸರ್ವೇಯರ್‌ ರಾಜ್‌ ಕುಮಾರ್‌ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸಪೆಕ್ಟರ್‌ ಅಂಬರೀಶ್‌ ಗೌಡ ಮತ್ತು ಸಿಬ್ಬಂದಿ ಪ್ರಕಾಶ್‌, ಸುಧಾಕರ್‌ ಇದ್ದರು.