Asianet Suvarna News Asianet Suvarna News

ಭಗವದ್ಗೀತೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ

ಸರ್ಕಾರಿ ಶಾಲಾ ಶಿಕ್ಷಕನೊಬ್ಬ ತಾನು ಮನೆಯಲ್ಲಿ ಓದಲು ಇಟ್ಟುಕೊಂಡಿದ್ದ ಭಗವದ್ಗೀತೆ ಪುಸ್ತಕದಲ್ಲಿ ಡೆತ್‌ನೋಟ್ ಬರೆದಿಟ್ಟು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Government School teacher Eshsappa Kattimani death note written on Bhagavad Gita book in Gadag sat
Author
First Published May 24, 2024, 11:25 AM IST

ಗದಗ (ಮೇ 24): ಸರ್ಕಾರಿ ಶಾಲಾ ಶಿಕ್ಷಕನೊಬ್ಬ ತಾನು ಮನೆಯಲ್ಲಿ ಓದಲು ಇಟ್ಟುಕೊಂಡಿದ್ದ ಭಗವದ್ಗೀತೆ ಪುಸ್ತಕದಲ್ಲಿ ಡೆತ್‌ನೋಟ್ ಬರೆದಿಟ್ಟು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

ಹೌದು, ಸರ್ಕಾರಿ ಶಾಲೆಯ ಶಿಕ್ಷಕ ಭಗವದ್ಗಿತೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ನಗರದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ಮೃತರನ್ನು ಈಶಪ್ಪ ಕಟ್ಟಿಮನಿ (40) ಎಂದು ಗುರುತಿಸಲಾಗಿದೆ. ಇನ್ನು ಈ ಶಿಕ್ಷಕ ನೇಣು ಬಿಗಿದುಕೊಳ್ಳುವ ಮೊದಲು ಸೆಲ್ಫಿ ವೀಡಿಯೊ ಮಾಡಿದ್ದಾರೆ. ಈ ಸೆಲ್ಫಿ ವಿಡಿಯೋದಲ್ಲಿ ನನ್ನ ಸಾವಿಗೆ ಅಳಿಯಂದಿರು‌ ಕಾರಣ. ಸಾಧ್ಯವಾದರೆ ಅವರಿಗೆ ಶಿಕ್ಷೆಯನ್ನು ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಭಗವದ್ಗೀತೆ ಪುಸ್ತಕದ ಮುಖಪುಟದ ಒಳಭಾಗದಲ್ಲಿ ತನ್ನ ಸಾವಿಗೆ ಅಳಿಯಂದಿರೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

ಗದಗ: ಬರ ಪರಿಹಾರ ಸಾಲಕ್ಕೆ ಜಮೆ, ವಿಷದ ಬಾಟಲಿ ಜತೆ ಬ್ಯಾಂಕಿಗೆ ಬಂದ ರೈತ..!

ಇನ್ನು ಮೃತ ಶಿಕ್ಷಕ ಈಶಪ್ಪ ಕಟ್ಟಿಮನಿ ಅವರು ಗದಗ ನಗರದ ಬಸವೇಶ್ವರ ಬಡಾವಣೆಯ ಸರ್ಕಾರಿ ಶಾಲೆ ನಂ-6 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೊನ್ನೆ ರಾತ್ರಿ ಹೆಂಡತಿ ಜೊತೆ ಜಗಳ ಮಾಡುತ್ತಿದ್ದಾಗ ಆತನ ಅಳಿಯಂದಿರು (ಹೆಂಡತಿಯ ಅಣ್ಣ-ತಮ್ಮಂದಿರು) ಮನೆಗೆ ಆಗಮಿಸಿದ್ದಾರೆ. ಶಿಕ್ಷಕನ ಹೆಂಡತಿಯ ಸಹೋದರರಾದ ಅನಿಲ್ ಪವಾರ ಮತ್ತು ಮಂಜುನಾಥ ಪವಾರ ಎನ್ನುವ ಇಬ್ಬರು ತಮ್ಮ ಭಾವನ ಮೇಲೆ ಹಲ್ಲೆ ಮಾಡಿದ್ದಾರೆ. ನೀನು ಶಿಕ್ಷಕನಾಗಿದ್ದರೂ ನನ್ನ ತಂಗಿಯೊಂದಿಗೆ ಏಕೆ ಜಗಳ ಮಾಡುತ್ತೀಯ ಎಂದು ಬೀದಿಯಲ್ಲಿ ಜಗಳ ಮಾಡಿ, ಹಲ್ಲೆ ಮಾಡಿ ಅವಮಾನ ಮಾಡಿದ್ದಾರೆ. ಜೊತೆಗೆ, ಅಳಿಯಂದಿರು ಅವರ ತಂಗಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಹೆಂಡತಿಯೊಂದಿಗೆ ಕುಟುಂಬದ ಸಮಸ್ಯೆ ಬಗ್ಗೆ ಜಗಳ ಮಾಡುವ ಸ್ವಾತಂತ್ರ್ಯವೂ ಇಲ್ಲವೇ? ನನ್ನ ಮೇಲೆ ಹೆಂಡತಿಯ ಸಹೋದರರು ಹಲ್ಲೆ ಮಾಡಿ ಮಾನ ಹರಣ ಮಾಡಿದ್ದಾರೆ ಎಂದು ಶಿಕ್ಷಕ ಈಶಪ್ಪ ಕಟ್ಟಿಮನಿ ಭಾರಿ ಮನನೊಂದಿದ್ದರು. ಮನೆಯಲ್ಲಿ ರಾತ್ರಿ ವೇಳೆ ಒಬ್ಬರೇ ಇದ್ದಾಗ ಮಾನ ಹೋದರೆ ಜೀವವೇ ಹೋದಂತೆ ನಾನು ಬದುಕಲು ಅರ್ಹನಲ್ಲ ಎಂದು ತೀರ್ಮಾನಿಸಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಇದಾದ ನಂತರ ತಮ್ಮ ಮನೆಯಲ್ಲಿದ್ದ ಫ್ಯಾನಿಗೆ ಹೆಂಡತಿ ಸೀರೆಯನ್ನು ಕಟ್ಟಿ ಅದನ್ನು ಸೆಲ್ಫಿ ವಿಡಿಯೋ ಮಾಡಿ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಸಾಧ್ಯವಾದರೆ ನನ್ನ ಅಳಿಯಂದಿರಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. 

ಪ್ರಜ್ವಲ್ ಎಲ್ಲಿದ್ದರೂ ಬಂದು ಪೊಲೀಸರಿಗೆ ಶರಣಾಗು; ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಂದ ಖಡಕ್ ಎಚ್ಚರಿಕೆ

ಇನ್ನು ಶಿಕ್ಷಕ ಈಶಪ್ಪ ಕಟ್ಟಿಮನಿ ಅವರು ಮನೆಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ನೆರೆಹೊರೆ ಮನೆಯವರು ಹೋಗಿ ಕಿಟಕಿಯಲ್ಲಿ ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಹಾಗೂ ಹೆಂಡತಿ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತಂತೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ‌ ದಾಖಲು ಆಗಿದೆ.

Latest Videos
Follow Us:
Download App:
  • android
  • ios