Asianet Suvarna News Asianet Suvarna News

ಕೋಲಾರ: ಲಂಚ ಸ್ವೀಕರಿಸವ ವೇಳೆ ರೆಡ್‌ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕ್ಲರ್ಕ್..!

ದೊಡ್ಡಗಾಂಡ್ಲಹಳ್ಳಿ‌ ಗ್ರಾಮದ ತ್ಯಾಗರಾಜ್ ಎಂಬುವರಿಂದ ಕ್ಲರ್ಕ್ ಸುಜ್ನಾನ್ ಫಿಲಿಪ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಹಣಿಯಲ್ಲಿ ಕೋರ್ಟ್ ತಡೆಯಾಜ್ಞೆ ಆದೇಶ ನಮೂದು ಮಾಡಲು ಲಂಚಕ್ಕೆ‌ ಬೇಡಿಕೆ ಇಟ್ಟಿದ್ದ.  ಲೋಕಾಯುಕ್ತ ಅಧಿಕಾರಿಗಳು ಆರೋಪಿ ಸುಜ್ನಾನ್ ಫಿಲಿಪ್‌ನನ್ನ ವಶಕ್ಕೆ ಪಡೆದಿದ್ದಾರೆ. 
 

Government office clerk arrested for taken bribe at KGF in Kolar grg
Author
First Published Aug 29, 2024, 10:04 PM IST | Last Updated Aug 29, 2024, 10:04 PM IST

ಕೋಲಾರ(ಆ.29): ಲಂಚ ಸ್ವೀಕರಿಸವ ವೇಳೆ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕೋಲಾರ ಜಿಲ್ಲೆಯ‌ ಕೆಜಿಎಫ್ ನಗರದಲ್ಲಿ ಇಂದು(ಗುರುವಾರ) ನಡೆದಿದೆ. 

ಕೆಜಿಎಫ್ ತಾಲೂಕು ಕಚೇರಿಯ ಭೂಮಿ‌ ವಿಭಾಗದ ಕ್ಲರ್ಕ್ ಸುಜ್ನಾನ್ ಫಿಲಿಪ್ ಹತ್ತು ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ಲಂಚ ಪಡೆದ ಹಣವನ್ನು ಸಮನಾಗಿ ಮೂವರು ಟ್ರಾಫಿಕ್ ಪೊಲೀಸರು ಹಂಚಿಕೆ, ಸೆರೆಯಾಯ್ತು ದೃಶ್ಯ!

ಸುಜ್ನಾನ್ ಫಿಲಿಪ್ ಲೋಕಾಯುಕ್ತ ಬಲೆಗೆ ಬಿದ್ದ ಕ್ಲರ್ಕ್ ಆಗಿದ್ದಾರೆ. ದೊಡ್ಡಗಾಂಡ್ಲಹಳ್ಳಿ‌ ಗ್ರಾಮದ ತ್ಯಾಗರಾಜ್ ಎಂಬುವರಿಂದ ಕ್ಲರ್ಕ್ ಸುಜ್ನಾನ್ ಫಿಲಿಪ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಹಣಿಯಲ್ಲಿ ಕೋರ್ಟ್ ತಡೆಯಾಜ್ಞೆ ಆದೇಶ ನಮೂದು ಮಾಡಲು ಲಂಚಕ್ಕೆ‌ ಬೇಡಿಕೆ ಇಟ್ಟಿದ್ದ.  ಲೋಕಾಯುಕ್ತ ಅಧಿಕಾರಿಗಳು ಆರೋಪಿ ಸುಜ್ನಾನ್ ಫಿಲಿಪ್‌ನನ್ನ ವಶಕ್ಕೆ ಪಡೆದಿದ್ದಾರೆ. 

Latest Videos
Follow Us:
Download App:
  • android
  • ios