Haveri: ಜಟಿಲ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡ ಸರ್ಕಾರಿ ಆಸ್ಪತ್ರೆ ವೈದ್ಯರು
ಪ್ರತಿಷ್ಠಿತ ಆಸ್ಪತ್ರೆಗಳೆಲ್ಲಾ ಆಪರೇಶನ್ ಮಾಡೋಕಾಗಲ್ಲ ಅಂತ ಕೈ ತೊಳೆದುಕೊಂಡಿದ್ದವು. ಆದರೆ ಹಾವೇರಿ ಸರ್ಕಾರಿ ಆಸ್ಪತ್ರೆ ವೈದ್ಯರು ಚಿಟಿಕೆ ಹೊಡೆಯೋದ್ರಲ್ಲಿ ಮಹಿಳೆಯೊಬ್ಬರ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಡಿ.11): ವೈದ್ಯೋ ನಾರಾಯಣೋ ಹರಿ ಎಂಬ ಮಾತು ಹಲವು ಬಾರಿ ಸಾಬೀತಾಗಿದೆ. ಪ್ರತಿಷ್ಠಿತ ಆಸ್ಪತ್ರೆಗಳೆಲ್ಲಾ ಆಪರೇಶನ್ ಮಾಡೋಕಾಗಲ್ಲ ಅಂತ ಕೈ ತೊಳೆದುಕೊಂಡಿದ್ದವು. ಆದರೆ ಹಾವೇರಿ ಸರ್ಕಾರಿ ಆಸ್ಪತ್ರೆ ವೈದ್ಯರು ಚಿಟಿಕೆ ಹೊಡೆಯೋದ್ರಲ್ಲಿ ಮಹಿಳೆಯೊಬ್ಬರ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ ನಿವಾಸಿ, 48 ವರ್ಷದ ಚಂದ್ರಮ್ಮ ಎಂಬ ಮಹಿಳೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಚಂದ್ರಮ್ಮ ಬರೋಬ್ಬರಿ 185 ಕೆ.ಜಿ ತೂಕವಿದ್ದು, ಹೊಟ್ಟೆಯಲ್ಲಿನ ಕರುಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದವು. ದೇಹದ ತೂಕ ಅಧಿಕವಾಗಿರುವುದು ಒಂದೆಡೆಯಾದರೆ, ಕರುಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದು ಭಾರಿ ಸಮಸ್ಯೆ ತಂದೊಡ್ಡಿತ್ತು. ಇದರಿಂದ ಆಗಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಚಂದ್ರಮ್ಮಗೆ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಸಹ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಉಸಿರಾಟ ಪ್ರಮಾಣ 90 ರಿಂದ 92 ಇರಬೇಕಿತ್ತು. ಆದರೆ ಚಂದ್ರಮ್ಮಳ ಉಸಿರಾಟದ ಪ್ರಮಾಣ ಕೇವಲ 40 ಇತ್ತು.
Udupi: ಮಣಿಪಾಲದಲ್ಲಿ ಪಾರ್ಕಿನ್ಸನ್ ರೋಗಕ್ಕೆ ಶಸ್ತ್ರ ಚಿಕಿತ್ಸೆ: 12 ವರ್ಷದ ನಂತರ ಚೇತರಿಕೆ
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ: ಚಂದ್ರಮ್ಮ ಅವರು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಾಗ ದೇಹವನ್ನು ಸ್ಕ್ಯಾನಿಂಗ್ ಮಾಡಿ ಪರಿಶೀಲಿಸಲಾಗಿದೆ. ಈ ವೇಳೆ ಹೊಟ್ಟೆಯಲ್ಲಿ ಕರಳು ತಳುಕು ಹಾಕಿಕೊಂಡಿರುವುದನ್ನು ಗಮನಿಸಿ ಹೇಳಿದ್ದಾರೆ. ಇದರ ಚಿಕಿತ್ಸೆಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎನ್ನುವುದು ವೈದ್ಯರಿಗೆ ತಿಳಿದಿದ್ದರೂ, ಚಿಕಿತ್ಸೆ ಮುಂದುವರೆಸಲು ನಿರಾಕರಿಸಿದ್ದಾರೆ. ಹಲವು ಖಾಸಗಿ ಆಸ್ಪತ್ರೆಗಳು ಮತ್ತು ಪ್ರಸಿದ್ಧ ವೈದ್ಯರನ್ನು ಭೇಟಿ ಮಾಡಿದಾಗ್ಯೂ ಅಲ್ಲಿ ನಾವ್ ಆಪರೇಷನ್ ಮಾಡೋಕ್ಕಾಗಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದರು. ಇದರಿಂದ ಜೀವದ ಮೇಲಿನ ಆಸೆಯನ್ನೇ ಚಂದ್ರಮ್ಮ ತೊರೆದಿದ್ದರು.
KMC Heart Replacement: ಮಣಿಪಾಲ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆಯಿಲ್ಲದೆ ಯಶಸ್ವಿಯಾಗಿ ಹೃದಯ ಕವಾಟದ ಬದಲಾವಣೆ
ಕೊನೆಯ ಪ್ರಯತ್ನವಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು: ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಆಪರೇಷನ್ ಂಆಡಲು ನಿರಾಕರಿಸಿದ್ದರಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಚಂದ್ರಮ್ಮ ಹಾವೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ಒಪ್ಪಿಕೊಂಡಿದ್ದು, ಸಾಧಕ -ಬಾಧಕ ಎದುರಿಸಲು ಸಿದ್ಧರಾಗುವಂತೆ ಕುಟುಂಬ ಸದಸ್ಯರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಇನ್ನು ದೇಹದ ಸ್ಥಿತಿಯ ಬಗ್ಗೆ ಅಧ್ಯಯನ ಮಾಡಿದಾ ಹೊಟ್ಟೆಯಲ್ಲಿನ ಕೆಲವು ಭಾಗ ಕೊಳೆತು ಹೋಗಿರುವುದನ್ನು ಗಮನಿಸಿದ್ದಾರೆ. ಮೇಲಾಗಿ ಚಂದ್ರಮ್ಮ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೂ ಜಿಲ್ಲಾಸ್ಪತ್ರೆಯ ವೈದ್ಯ ಡಾ. ನಿರಂಜನ ನೇತೃತ್ವದ ತಂಡ ಹೇಗಾದರೂ ಮಾಡಿ ಚಂದ್ರಮ್ಮಳ ಜೀವ ಉಳಿಸಲೇಬೇಕು ಎಂದು ಪಣತೊಟ್ಟಿತ್ತು. ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈಗ ಸದ್ಯ ಚಂದ್ರಮ್ಮ ಚೇತರಿಸಿಕೊಂಡಿದ್ದಾರೆ.