ಸರ್ಕಾರಿ ಸೌಲಭ್ಯಗಳು ಸಕಾಲಕ್ಕೆ ದೊರಕುತ್ತಿಲ್ಲ: ಜಿಲ್ಲಾಧಿಕಾರಿ ಶ್ರೀನಿವಾಸ್‌

ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವತೆಯಿಂದ ಕರ್ತವ್ಯ ನಿರ್ವಹಿಸಬೇಕು. ಆದರೆ, ಬಹುತೇಕ ಇಲಾಖೆ ಅಧಿಕಾರಿಗಳಲ್ಲಿ ಹೊಂದಾಣಿಕೆಯಿಲ್ಲದ ಕಾರಣ ಸರ್ಕಾರಿ ಸೌಲಭ್ಯಗಳು ಶ್ರೀಸಾಮಾನ್ಯರಿಗೆ ಸಕಾಲಕ್ಕೆ ದೊರಕುತ್ತಿಲ್ಲವೆಂದು ಅಧಿಕಾರಿಗಳ ನಡೆಗೆ ಜಿಲ್ಲಾಧಿಕಾರಿ ಶ್ರೀನಿವಾಸ್‌ ಬೇಸರ ವ್ಯಕ್ತಪಡಿಸಿದರು.

Government facilities not available on time: Collector Srinivas snr

  ಮಧುಗಿರಿ :  ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವತೆಯಿಂದ ಕರ್ತವ್ಯ ನಿರ್ವಹಿಸಬೇಕು. ಆದರೆ, ಬಹುತೇಕ ಇಲಾಖೆ ಅಧಿಕಾರಿಗಳಲ್ಲಿ ಹೊಂದಾಣಿಕೆಯಿಲ್ಲದ ಕಾರಣ ಸರ್ಕಾರಿ ಸೌಲಭ್ಯಗಳು ಶ್ರೀಸಾಮಾನ್ಯರಿಗೆ ಸಕಾಲಕ್ಕೆ ದೊರಕುತ್ತಿಲ್ಲವೆಂದು ಅಧಿಕಾರಿಗಳ ನಡೆಗೆ ಜಿಲ್ಲಾಧಿಕಾರಿ ಶ್ರೀನಿವಾಸ್‌ ಬೇಸರ ವ್ಯಕ್ತಪಡಿಸಿದರು.

ತಾಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ದೊರೆಯಬೇಕಾದರೆ ಪ್ರಾರಂಭದಲ್ಲೇ ಆರ್ಹರನ್ನು ಗುರುತಿಸಿ ಸೌಲಭ್ಯ ದೊರಕಿಸಿಕೊಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಮುಂದಾದರೆ ಇಲಾಖೆಯ ಸೌಲಭ್ಯಗಳು ದೊರೆಯುವಂತಾಗುತ್ತದೆ. ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ಕಟ್ಟಡಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲ್ಚಾವಣಿ ಮೇಲೆ ಇರುವ ಅನುಪಯುಕ್ತ ಮಣ್ಣು, ಸಾಮಗ್ರಿ ತೆಗೆಸಿ ಮಳೆ ನೀರು ನಿಲ್ಲದಂತೆ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಸುರಕ್ಷತಾ ನಿಯಮ ಪಾಲನೆ, ಪಾಳುಬಿದ್ದ ರಸ್ತೆ ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮುಖ್ಯ ಹೆದ್ದಾರಿಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಇನ್ನೂಂದು ವಾರದೊಳೆಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಖಾಸಗಿ ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ವಿವರ ಪಡೆದು ನಂತರ ಶಾಲಾ ಶುಲ್ಕ ವಿವರಗಳನ್ನು ಕಡ್ಡಾಯವಾಗಿ ಆಯಾಯ ಶಾಲೆಗಳಲ್ಲಿ ಪ್ರಕಟಿಸುವಂತೆ ಬಿಇಒ ಅವರಿಗೆ ತಿಳಿಸಿ, ಸರ್ಕಾರಿ ಶಾಲೆಗಳಲ್ಲಿ ಕಾಲಕಾಲಕ್ಕೆ ಮಕ್ಕಳ ಆರೋಗ್ಯ ತಪಾಸಣೆ ನಡೆಸುವಂತೆ ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ಕಳೆದ ವರ್ಷ ಮೃತಪಟ್ಟತಾಯಿ, ಮಕ್ಕಳ ಅಂಕಿ ಅಂಶಗಳ ಬಗ್ಗ ಪ್ರಾಸ್ತಾಪಿಸಿ, ಗರ್ಭಿಣಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು 14 ಮಂದಿ ವೈದ್ಯರಿದ್ದು ಈ ಪೈಕಿ 9 ಜನ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ 5 ಜನ ವೈದ್ಯರ ಕೊರತೆಯಿದ್ದು ಐಸಿಯು ಕೇಂದ್ರದಲ್ಲಿ ಪಾಳಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ವೈದ್ಯರು ಸೇರಿದಂತೆ ಕೊಡಿಗೇನಹಳ್ಳಿ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವಂತೆ ಮೇಲಧಿಕಾPರಿಗಳಿಗೆ ಪತ್ರ ಬರೆಯಯಲಾಗಿದೆ. ಗೌರಿಬಿದನೂರು, ಶಿರಾ ಆಸ್ಪತ್ರೆಗಳು ಸಮೀಪವಿರುವ ಕಾರಣ ಆ ಭಾಗದ ಗರ್ಭಿಣಿ ಸ್ತ್ರೀಯರು

ಚಿಕಿತ್ಸೆಗಾಗಿ ತೆರಳುತ್ತಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ಟಿಎಚ್‌ಒ ಮಾಹಿತಿ ನೀಡಿದರು.

ಈ ಸಂಬಂಧ ಡಿಸಿ ಶ್ರೀನಿವಾಸ್‌ ಕೊರತೆ ಇರುವ ವೈದ್ಯರು ಮತ್ತು ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗರ್ಭಿಣಿಯರಿಗೆ ದೊರೆಯುವ ಸೌಲಭ್ಯ ಒಂದು ದಿನ ಮುಂಚಿತವಾಗಿ ಅವರ ಮನೆ ಬಾಗಲಿಗೆ ತಲುಪಿಸಬೇಕು.

ಕಾರ್ಮಿಕರಲ್ಲಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಆರ್ಹರಿಗೆ ಸೌಲಭ್ಯ ತಲುಪಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲಿಸಿಸದ್ದು ತಾಲೂಕಿನಲ್ಲಿ 21 ಅರ್ಜಿಗಳು ತಿರಸ್ಕೃತವಾಗಿವೆ ಎಂದು ಸಮಾಜ ಕಲ್ಯಣಾಧಿಕಾರಿ ಶಿವಣ್ಣ ಮಾಹಿತಿ ನೀಡಿದಾಗ ಎಲ್ಲ ಆರ್ಹ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡಬೇಕು ಸಣ್ಣ ಪುಟ್ಟಲೋಪದೋಷ ತಾವೇ ಸರಿಪಿಡಿಸಿಕೊಡಬೇಕು ಎಂದರು.

ಅರ್ಹರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಮುಂದಿನ ಸಭೆಗಳಲ್ಲಿ ಸ್ಪಷ್ಟವಾದ ಮಾಹಿತಿ ಒದಗಿಸಿ ಕೊಡುವಂತೆ ಅಧಿಕಾರಿಗಳಿಗೆ ಎಚ್ಚರಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ರಿಷಿ ಆನಂದ್‌, ತಹಸೀಲ್ದಾರ್‌ ಸಿಗಬತ್‌್ತ ಉಲ್ಲಾ, ಡಿವೈಎಸ್‌ಪಿ ವೆಂಕಟೇಶ್‌ ನಾಯಿಡು,ತಾಪಂ ಇಓ ಲಕ್ಷ್ಮಣ್‌,ಬಿಇಒ ಕೆ.ಎನ್‌.ಹನುಮಂತರಾಯಪ್ಪ,ಸಮಾಜ ಕಲ್ಯಾಣಾ​ಕಾರಿ ಶಿವಣ್ಣ, ಕೃಷಿ ಸಹಾಯಕ ಅಧಿಕಾರಿ ಹನುಮಂತರಾಯಪ್ಪ, ಅಬಕಾರಿ ನಿರೀಕ್ಷಕ ರಾಮಮೂರ್ತಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೇನರಸಯ್ಯ, ಕಾರ್ಮಿಕ ಇಲಾಖೆ ಶ್ರೀಕಾಂತ್‌, ವಲಯ ಅರಣ್ಯಾಧಿಕಾರಿ ಸಿ.ರವಿ, ಶೈಲಜಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios